Advertisement
ಇದಕ್ಕೆ ಕಾರಣ ಎಸ್.ಎಲ್.ಆರ್.ಎಂ. ಘಟಕ. ಲಾಕ್‌ಡೌನ್‌ನಿಂದ ಜನ ಹೊರಗೆ ಬರಲು ಹೆದರುತ್ತಿದ್ದಾರೆ. ಈ ನಡುವೆ ನಗರ ನೈರ್ಮಲ್ಯ ಹಾಳಾಗಬಾರದು, ಕಸದ ವಿಲೇವಾರಿಗೆ ತೊಡಕಾಗಬಾರದು ಎಂಬ ಹಿನ್ನೆಲೆಯಲ್ಲಿ ವಂಡ್ಸೆ ಎಸ್.ಎಲ್.ಆರ್.ಎಂ.ನ ಕಾರ್ಯಕರ್ತರು ನಿತ್ಯವೂ ಸಾಮಾಜಿಕ ಅಂತರವಿಟ್ಟುಕೊಂಡು ಸ್ವತ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ.
Related Articles
Advertisement
ವಂಡ್ಸೆ ಎಸ್.ಎಲ್.ಆರ್.ಎಂ. ಘಟಕ ಇವತ್ತು ಮಾದರಿ ಘಟಕವಾಗಿ ದೇಶದಲ್ಲಿಯೇ ಗುರುತಿಸಿಕೊಂಡಿದೆ. ಈ ತುರ್ತು ಸಂದರ್ಭದಲ್ಲಿಯೂ ಕೂಡಾ ಗ್ರಾಮ ಸ್ವಾಸ್ಥ್ಯ ಕಾಪಾಡುವಲ್ಲಿ ಧೈರ್ಯದ ಹೆಜ್ಜೆ ಇಟ್ಟಿದೆ. ಇಲ್ಲಿನ ಎಂಟು ಮಂದಿ ಕಾರ್ಯಕರ್ತರ ಶ್ರಮ ಗ್ರಾಮದ ಸ್ವತ್ಛತೆಯಲ್ಲಿ ಗಮನಾರ್ಹವಾಗಿದೆ.
ಜನ ಮನೆಯಲ್ಲಿದ್ದಷ್ಟು ಕಸವೂ ಜಾಸ್ತಿಪೇಟೆಯಲ್ಲಿ ಎಂದಿನಂತೆ ಕಸ ಸಂಗ್ರಹಣೆ, ಗ್ರಾಮೀಣ ಪ್ರದೇಶದಲ್ಲಿ ವಾರಕ್ಕೊಂದು ದಿನ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಲಾಕ್‌ಡೌನ್‌ನಿಂದ ಅಗತ್ಯ ವಸ್ತು ಪೂರೈಕೆ ಹೊರತು ಪಡಿಸಿ ಭಾಗಶಃ ಬಂದ್ ಇದ್ದರೂ ಕೂಡಾ ಕಸದ ಪ್ರಮಾಣ ಅಷ್ಟೇ ಇದೆ. ಕೋವಿಡ್-19 ಭೀತಿಯಿಂದ ಹೊರ ಭಾಗದಲ್ಲಿರುವವರು ಶೇ. 90 ಮಂದಿ ಊರಿಗೆ ಬಂದಿರು ವುದ ರಿಂದ ಆಹಾರ ಪದಾರ್ಥಗಳ ತ್ಯಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಅಂತೆಯೇ ಕಸದ ಪ್ರಮಾಣವೂ ದೊಡ್ಡ ಪ್ರಮಾಣ ದಲ್ಲಿಯೇ ಉತ್ಪಾದನೆಯಾಗುತ್ತಿದೆ.