Advertisement

ಜಿ ಅಕಾಡೆಮಿಗೆ ಚಾಲನೆ

10:50 AM Sep 17, 2019 | Team Udayavani |

ಕನ್ನಡ ಚಿತ್ರರಂಗದಲ್ಲಿ ಸಿನಿಮಾಸಕ್ತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಲು ಚಿತ್ರರಂಗದ ಹಲವರು ಸ್ವಯಂ ಪ್ರೇರಿತವಾಗಿ ಮುಂದೆ ಬರುತ್ತಿದ್ದಾರೆ. ಈಗ ಅಂಥದ್ದೇ ಮತ್ತೊಂದು ಕಾರ್ಯಕ್ಕೆ ನಿರ್ದೇಶಕ ಕಂ ನಿರ್ಮಾಪಕ ಗುರು ದೇಶಪಾಂಡೆ ಕೂಡ ಕೈ ಹಾಕುತ್ತಿದ್ದಾರೆ. ಹೌದು, ಕಳೆದ ಒಂದೂವರೆ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಗುರು ದೇಶಪಾಂಡೆ ಇದೀಗ, ಸಿನಿಮಾರಂಗಕ್ಕೆ ಕನಸು ಕಟ್ಟಿಕೊಂಡು ಬರಲು ಆಸಕ್ತಿ ಇರುವಂತ ಯುವ ಪ್ರತಿಭೆಗಳಿಗೆ ನಟನೆ, ನಿರ್ದೇಶನ, ಸಂಕಲನ, ನೃತ್ಯ ಸೇರಿದಂತೆ ಸಿನಿಮಾಕ್ಕೆ ಸಂಬಂಧಿಸಿದ ಹಲವು ವಿಭಾಗಗಳಲ್ಲಿ ತಾಂತ್ರಿಕ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪಟ್ಟುಗಳನ್ನು ಕಲಿತುಕೊಳ್ಳಲು “ಜಿ ಅಕಾಡೆಮಿ’ ಎಂಬ ತರಬೇತಿ ಸಂಸ್ಥೆ ಸ್ಥಾಪಿಸಿದ್ದಾರೆ.

Advertisement

ಚಿತ್ರರಂಗದ ಖ್ಯಾತ ನಿರ್ದೇಶಕರು, ನುರಿತ ತಂತ್ರಜ್ಞರು ಈ ಸಂಸ್ಥೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲಿದ್ದಾರೆ. ಹಿರಿಯ ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿ, ಸಂಕಲನಕಾರ ಸುರೇಶ್‌ ಅರಸ್‌ ಮತ್ತು ಕಿರುತೆರೆ ನಿರೂಪಕ ಜಯಪ್ರಕಾಶ್‌ ಶೆಟ್ಟಿ ಮೆಂಟರ್‌ಗಳಾಗಿದ್ದಾರೆ. ನಿರ್ಮಾಪಕರಾದ ಕೆ.ಮಂಜು, ಉದಯ್‌ ಕೆ ಮೆಹ್ತಾ, ನಿರ್ದೇಶಕರಾದ ದಯಾಳ್‌ ಪದ್ಮನಾಭನ್‌, ಭರ್ಜರಿ ಚೇತನ್‌ ಕುಮಾರ್‌, ಸತ್ಯಪ್ರಕಾಶ್‌, ಬಿ.ಎಂ.ಗಿರಿರಾಜ್‌, ಮೌನೇಶ್‌ ಬಡಿಗೇರ್‌, ನವೀನ್‌ ಕೃಷ್ಣ, ಬಿ.ಎಸ್‌ ಕೆಂಪರಾಜು, ಕೆ.ಎಸ್‌.ಚಂದ್ರಶೇಖರ್‌, ಆರ್‌.ಜೆ ನೇತ್ರಾ, ಹೇಮಲತಾ, ಸಂತೋಷ್‌ ನಾಯಕ್‌, ಮದನ್‌-ಹರಿಣಿ, ಗಿರೀಶ್‌, ಡಿಫ‌ರೆಂಟ್‌ ಡ್ಯಾನಿ, ದೀಪಕ್‌ ಮತ್ತು ಶ್ರೀನಿವಾಸ್‌ ಸೇರಿದಂತೆ ಅನೇಕರು ವಿವಿಧ ವಿಭಾಗಗಳಲ್ಲಿ ತರಬೇತಿ ನೀಡಲಿದ್ದಾರೆ.

ಇದೇ ಸೆ. 25ರಿಂದ “ಜಿ ಅಕಾಡೆಮಿ’ಯ ತರಗತಿಗಳು ಪ್ರಾರಂಭವಾಗಲಿದ್ದು, ನಟನೆ, ನಿರ್ದೇಶನ, ನೃತ್ಯ, ಯೋಗ, ಕಿಕ್‌ ಬಾಕ್ಸಿಂಗ್‌, ವಿಎಫ್ಎಕ್ಸ್‌, ಸಂಕಲನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ತರಬೇತಿ ಶುರುವಾಗಲಿದೆ. ಮೂರು ತಿಂಗಳ ಕೋರ್ಸ್‌ ಇದಾಗಿದ್ದು, ಪ್ರತಿಯೊಂದು ಬ್ಯಾಚ್‌ ಮುಗಿದ ಬಳಿಕ ನಾಟಕ ಹಾಗೂ ಕಿರುಚಿತ್ರದಲ್ಲಿ ನಟಿಸಿ, ನಿರ್ದೇಶಿಸುವ ಅವಕಾಶ ಪ್ರತಿಯೊಬ್ಬ ಕಲ್ಪಿಸಲಾಗುತ್ತದೆ ಎಂದಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ.

Advertisement

Udayavani is now on Telegram. Click here to join our channel and stay updated with the latest news.

Next