Advertisement

ಸೂಕ್ಷ್ಮ ಕಣ್ಣು ತೆರೆದಾಗ ಸಾಹಿತ್ಯ: ಪ್ರೊ|ವಿವೇಕ ರೈ

01:10 AM Dec 13, 2021 | Team Udayavani |

ಮಂಗಳೂರು: ಸಾಹಿತಿಯಲ್ಲಿರುವ ಸೂಕ್ಷ್ಮ ಕಣ್ಣು ತೆರೆದುಕೊಂಡಾಗ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದು ಹಿರಿಯ ವಿದ್ವಾಂಸ, ವಿಶ್ರಾಂತ ಕುಲಪತಿ ಪ್ರೊ| ಬಿ.ಎ.ವಿವೇಕ ರೈ ಅವರು ಹೇಳಿದ್ದಾರೆ.

Advertisement

ನಗರದ ಕರ್ಣಾಟಕ ಬ್ಯಾಂಕ್‌ ಸಭಾಂಗಣದಲ್ಲಿ ಮಂಗಳೂರು ವಿ.ವಿ. ಕನ್ನಡ ಅಧ್ಯಾಪಕರ ಸಂಘ, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ, ಆಶಯ ಆಕೃತಿ ಪಬ್ಲಿಕೇಶನ್ಸ್‌ ಮತ್ತು ಬೆಂಗಳೂರಿನ ಬಹುರೂಪಿ ಬುಕ್‌ ಹಬ್‌ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಜರಗಿದ ಪ್ರೊ| ಬಿ.ಎ.ವಿವೇಕ ರೈ ಪುಸ್ತಕ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾವುದೇ ಒಂದು ಕ್ಷೇತ್ರದಲ್ಲಿ ನಾವು ಸಾಧನೆ ಮಾಡಬೇಕಾದರೆ ಶ್ರಮ, ಬದ್ಧತೆ, ಪ್ರಾಮಾಣಿಕತೆ ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಲಕ್ಷ್ಯವಿರಬೇಕು ಎಂದರು.

ಪ್ರೊ| ವಿವೇಕ ರೈ ಅವರ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿ.ವಿ. ಕುಲಪತಿ ಪ್ರೊ| ತೇಜಸ್ವಿ ಕಟ್ಟಿಮನಿಯವರು ಡಾ| ವಿವೇಕ ರೈ ಅವರು ಕುಲಪತಿಗಳಾಗಿ ಸಿಂಡಿಕೇಟ್‌ ಸಭೆಗಳು ಕೇವಲ ತಾಂತ್ರಿಕ, ಕಾನೂನು ವಿಚಾರಗಳ ಚರ್ಚೆಗೆ ಮಾತ್ರ ಸೀಮಿತವಾಗದೆ ಶೈಕ್ಷಣಿಕ ವಿಚಾರಗಳಿಗೆ ವೇದಿಕೆಯಾಗ
ಬೇಕು ಎಂದು ತೋರಿಸಿಕೊಟ್ಟವರು. ಅವರು ಕೆಲಸ ಮಾಡಿದೆಲ್ಲಡೆ ಅನನ್ಯತೆಯನ್ನು ಬಿಟ್ಟುಹೋಗಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಜಾನಪದ ವಿ.ವಿ. ವಿಶ್ರಾಂತ ಕುಲಪತಿ ಪ್ರೊ| ಕೆ. ಚಿನ್ನಪ್ಪ ಗೌಡ ಅವರು ಮಾತನಾಡಿ ಪ್ರೊ| ವಿವೇಕ ರೈಯವರು ಬರವಣಿಗೆ, ಸಂಶೋಧನೆ, ಅಧ್ಯಾಪನಾ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ವಿಶೇಷತೆಯನ್ನು ದಾಖಲಿಸಿದವರು ಎಂದು ವಿವರಿಸಿದರು.

ಇದನ್ನೂ ಓದಿ:ಪರಿಷತ್‌ ಪ್ರತಿಪಕ್ಷ ಸ್ಥಾನದ ಮೇಲೆ ಸಿಎಂ ಇಬ್ರಾಹಿಂ ಕಣ್ಣು

ಅಧ್ಯಕ್ಷತೆ ವಹಿಸಿದ್ದ ಕಣ್ಣೂರು ಮತ್ತು ಕಲ್ಲಿಕೋಟೆ ವಿ.ವಿ. ವಿಶ್ರಾಂತ ಕುಲಪತಿ ಪ್ರೊ| ಎಂ. ಅಬ್ದುಲ್‌ ರಹಮಾನ್‌ ಅವರು ಪ್ರೊ| ವಿವೇಕ ರೈಯವರೊಂದಿಗಿನ 51 ವರ್ಷಗಳ ಒಡನಾಟವನ್ನು ನೆನೆಪಿಸಿಕೊಂಡರು. ಡಾ| ನಾ. ದಾಮೋದರ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಜಿ.ಎನ್‌.ಮೋಹನ್‌ ವಂದಿಸಿದರು. ಡಾ| ಆರ್‌. ನರಸಿಂಹ ಮೂರ್ತಿ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಪ್ರೊ| ವಿವೇಕ ರೈ ಅವರೊಂದಿಗೆ ನಡೆದ ಸಂವಾದಕ್ಕೆ ಮಂಗಳೂರು ವಿ.ವಿ. ವಿಶ್ರಾಂತ ಕುಲ ಸಚಿವ ಡಾ|ಕೆ. ಜನಾರ್ದನ ಅವರು ಚಾಲನೆ ನೀಡಿದರು. ಡಾ| ಸಿ.ಪಿ. ನಾಗರಾಜ್‌, ಚಂದ್ರಕಲಾ ನಂದಾವರ, ಗೀತಾ ಸುರತ್ಕಲ್‌, ಮುದ್ದು ಮೂಡು ಬೆಳ್ಳೆ, ಡಾ| ಪೃಥ್ವಿರಾಜ್‌ ಕವತ್ತಾರು, ಕಲ್ಲೂರು ನಾಗೇಶ್‌, ಡಾ| ಸತ್ಯನಾರಾ ಯಣ ಮಲ್ಲಿಪಟ್ಟಣ ಭಾಗವಹಿಸಿದ್ದರು.

Advertisement

ಐದು ಪುಸ್ತಕಗಳ ಬಿಡುಗಡೆ
ಪ್ರೊ| ಬಿ.ಎ. ವಿವೇಕ ರೈಯವರ ಹೊತ್ತಗೆಗಳ ಹೊಸ್ತಿಲಲ್ಲಿ, ಸ್ಲಾವೊಮೀರ್‌ ನ್ರೋಜೆಕ್‌ ಕತೆಗಳು, ಕ್ಯಾಮೆರಾ ಕಣ್ಣಿನಲ್ಲಿ ಜರ್ಮನಿ ಮತ್ತು ಎ ಹ್ಯಾಂಡ್‌ಬುಕ್‌ ಆಫ್‌ ಕನ್ನಡ ಪ್ರೊಸೊಡಿ ಕೃತಿಗಳು ಹಾಗೂ ವಿವೇಕ ರೈ ಅವರ ಜತೆಗಿನ ಒಡನಾಟದ ಕುರಿತು ಪ್ರೊ| ಸಿ.ಎನ್‌.ರಾಮಚಂದ್ರನ್‌ ಅವರು ಬರೆದಿರುವ ಒಡನಾಟದ ನೆನೆಪುಗಳು ಕೃತಿಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next