Advertisement
ಗುರುವಾರ ಅವರು ನಗರದಲ್ಲಿ ಉದ್ಯಮಿ ಗೀತಾ ಹಾಗೂ ಭೀಮಣ್ಣ ನಾಯ್ಕ, ಅಶ್ವಿನ್ ನಾಯ್ಕ ಆರಂಭಿಸಿದ ನೂತನ ಸುಪ್ರಿಯಾ ಇಂಟರ್‌ನ್ಯಾಶನಲ್ ಹೋಟೆಲ್ ಉದ್ಘಾಟಿಸಿ ಮಾತನಾಡಿದರು. ಉತ್ತರ ಕನ್ನಡದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ನಮ್ಮಲ್ಲೂ ಪ್ರವಾಸೋದ್ಯಮದ ಯಶಸ್ವಿಗೆ ಪ್ರವಾಸಿಗರಿಗೆ ಅನೇಕ ಸೌಲಭ್ಯ ಬೇಕು. ಎಲ್ಲ ಪ್ರವಾಸಿ ತಾಣಗಳಿಗೂ ಮೂಲಭೂತ ಸೌಕರ್ಯ ಬೇಕಾಗಿದೆ ಎಂದರು.
Related Articles
Advertisement
ಪ್ರಸಿದ್ಧ ಚಿತ್ರನಟ ಶಿವರಾಜ ಕುಮಾರ, 25 ವರ್ಷದ ಹಿಂದೆ ನಮ್ಮೂರ ಮಂದಾರ ಹೂವೆ ಶೂಟಿಂಗ್‌ಗೆ ಬಂದಿದ್ದೆ. 25 ದಿನಗಳ ಕಾಲ ಇಲ್ಲಿ ವಾಸ್ತವ್ಯ ಇದ್ದೆವು. ಶಿವಗಂಗೆ, ಸಾತೊಡ್ಡಿ, ಸಹಸ್ರಲಿಂಗ, ಯಾಣಗಳಿಗೆ ಹೋಗಿದ್ದೆವು. ಮಧ್ಯೆ ಒಂದೆರಡು ಸಲ ಬಂದಿದ್ದೆವು. ಭೀಮಣ್ಣ 37 ವರ್ಷದಿಂದ ಗೊತ್ತು. ಧನಾತ್ಮಕ ಚಿಂತನೆಯಿಂದ ಕೆಲಸ ಮಾಡಿ ಮುನ್ನುಗ್ಗುತ್ತಿದ್ದಾರೆ. ಒಂದು ಕುಟುಂಬದಂತೆ ಹೋಟೆಲ್ ಕೆಲಸ ಮಾಡಬೇಕು. ಇಡೀ ಕರ್ನಾಟಕದಲ್ಲಿ, ಭಾರತದಲ್ಲೂ ಹೆಸರು ಗಳಿಸಲಿ ಎಂದು ಆಶಿಸಿದರು.
ಮಾಜಿ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಇದ್ದಾಗ ಅತಿ ಹೆಚ್ಚು ಹಣ ಪ್ರವಾಸೋದ್ಯಮಕ್ಕೆ ನೀಡಿದ್ದರು. ನಾನು ನೋಡಿದ ಹೋಟೆಲ್‌ನಲ್ಲಿ ದಿ ಬೆಸ್ಟ್ ಹೋಟೆಲ್‌ಗಳಲ್ಲಿ ಇದೂ ಒಂದು. ಬಂಡವಾಳ ಕೂಡ ಹಾಕಿದ್ದಾರೆ. ತಾಲೂಕು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅವಕಾಶ ಇದೆ ಎಂದರು.
ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಕೃಷಿ ಜೊತೆಗೆ ಉದ್ದಿಮೆ ಜೊತೆ ನಡೆದು ಗಳಿಸಿದ ಅನುಭವ ಪಡೆದು ಈ, ಪ್ರವಾಸಿಗರಿಗೆ ಅಗತ್ಯ ಹೋಟೆಲ್ ಕಟ್ಟಿದ್ದಾರೆ ಎಂದರು.
ಚಿತ್ರನಟ, ಕಾಂಗ್ರೆಸ್ ಯುವ ನಾಯಕ ಮಧು ಬಂಗಾರಪ್ಪ, ಶಿರಸಿಗೆ ಈ ಹೋಟೆಲ್ ಒಂದು ಗರಿವಾಗಿದೆ. ವ್ಯವಹಾರಿಕವಾಗಿ ಇನ್ನಷ್ಟು ಹೋಟೆಲ್ ಆಗಲಿ. ಬಂಗಾರಪ್ಪ ಅವರ ಆಶೀರ್ವಾದ ನಿಮ್ಮ ಮೂಲಕ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ಹೋಟೆಲ್ ಉದ್ದಿಮೆದಾರ ಭೀಮಣ್ಣ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಪ್ರವಾಸೋದ್ಯಮಕ್ಕೆ ಉತ್ತೇಜನ, ಸ್ಥಳೀಯರಿಗೆ ಉದ್ಯೋಗ ಕೊಡಬೇಕು ಎಂಬ ನಿರೀಕ್ಷೆ ಇದೆ. ಎಲ್ಲ ರೀತಿಯ ಸವಲತ್ತು ಸಿಗಬೇಕು ಎಂದು ಆರಂಭಿಸಿದ್ದೇವೆ ಎಂದರು.
ಪ್ರಮುಖರಾದ ತಿಲಕಕುಮಾರ, ಅನಿತಾ ಪವನಕುಮಾರ, ಸುಜಾತಾ ತಿಲಕಕುಮಾರ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಟಿಆರ್‌ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಯದೇವ ನಿಲೇಕಣಿ, ಅನಿತಾ ಮಧು, ಅಶೋಕ ಪಟ್ಟಣಗಾರ, ಚೇತನ್ ಕಾಮತ್ ಇತರರು ಇದ್ದರು. ಗೀತಾ ಭೀಮಣ್ಣ, ಅಶ್ವಿನ್ ನಾಯ್ಕ ಇದ್ದರು.
ಕಲಾವತಿ ಹೆಗಡೆ ಪ್ರಾರ್ಥಿಸಿದರು. ಕೆ.ಎನ್. ಹೊಸ್ಮನಿ ನಿರ್ವಹಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳನ್ನು, ಚಿನ್ನದ ಹುಡುಗಿ ಪ್ರೇರಣಾ ಶೇಟ್ ಅವಳನ್ನು ಗೌರವಿಸಲಾಯಿತು.