Advertisement

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

01:10 PM Feb 11, 2022 | Team Udayavani |

ಸೈದಾಪುರ: ಶಾಲಾ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರ ಅತಿ ಮುಖ್ಯವಾಗಿದ್ದು, ಈ ದಿಸೆಯಲ್ಲಿ ಯುವ ಮುಖಂಡರಾದ ಶರಣಗೌಡ ಬಾಡಿಯಾಳ ಅವರು ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಿಕೊಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಅಭಿಪ್ರಾಯಪಟ್ಟರು.

Advertisement

ಇಲ್ಲಿಗೆ ಸಮೀಪದ ಬಾಡಿಯಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ. ಮಲ್ಲಮ್ಮ ಗೌಡ್ತಿ ಎಸ್‌. ಪಾಟೀಲ ಹಾಗೂ ಚಂದಮ್ಮ ಎನ್‌. ಘಂಟಿ ಬಾಡಿಯಾಳ ಇವರ ಸ್ಮರಣಾರ್ಥ ನೀಡಲಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗುಣಮಟ್ಟದ ಶಿಕ್ಷಣಕ್ಕೆ ಮೂಲಭೂತ ಸೌಕರ್ಯ ಮುಖ್ಯವಾಗಿದ್ದು, ಅವುಗಳನ್ನು ಗ್ರಾಮಸ್ಥರು ಕಲ್ಪಿಸಿಕೊಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಯುವ ಮುಖಂಡ ಶರಣಗೌಡ ಬಾಡಿಯಾಳ ಮಾತನಾಡಿ, ಪ್ರಾಥಮಿಕ ಶಿಕ್ಷಣ ಗುಣಮಟ್ಟದಿಂದ ಕೂಡಿದಾಗ ಮಾತ್ರ ಪರಿಣಾತ್ಮಕ ಶಿಕ್ಷಣ ಸಾಧ್ಯ. ಇದಕ್ಕೆ ಪೂರಕವಾಗಿ ಬೇಕಾದ ಸೌಕರ್ಯಗಳು ಅತಿ ಮುಖ್ಯವಾಗಿದ್ದು ನೀರಿನ ಅನುಕೂಲತೆ ಕಲ್ಪಿಸಿಕೊಡಲಾಗುತ್ತಿದೆ. ಇದರ ಸರಿಯಾದ ಬಳಕೆಯಾಗಬೇಕು ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ್ರಾಯ, ಮುಖ್ಯಗುರು ಸೈಯದ್‌ ಶೇರಅಲಿ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಕನಕಪ್ಪ, ಬಿಆರ್‌ಪಿ ಬಸವರಾಜ ಮನಗನಾಳ, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ವೆಂಕಪ್ಪ, ಉಪಾಧ್ಯಕ್ಷ ದೇವಪುತ್ರ, ವೆಂಕಟರೆಡ್ಡಿ, ಲಿಂಗಣ್ಣಗೌಡ, ಹಫೀಜ್‌ ಪಟೇಲ, ಸಿಆರ್‌ಪಿಗಳಾದ ಮುಕುಂದಕುಮಾರ, ಸುಬ್ರಮಣ್ಯ, ದೇವಪ್ಪ ಸೇರಿದಂತೆ ಇತರರಿದ್ದರು.

Advertisement

ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿವ ನೀರಿನ ಕೊರತೆಯಿದೆ. ಇದನ್ನು ಪರಿಗಣಿಸಿ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಅನುಕೂಲತೆ ಕಲ್ಪಿಸಲಾಗಿದೆ. ಮಕ್ಕಳ ಕಲಿಕೆಗೆ ಆರೋಗ್ಯವು ಅತಿ ಮುಖ್ಯವಾಗಿದ್ದೂ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲಾಗಿದೆ. -ಶರಣಗೌಡ ಬಾಡಿಯಾಳ, ಯುವ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next