Advertisement

ಜೇಷ್ಮಾ ಬ್ಯಾಡ್ಮಿಂಟನ್‌ ಅಕಾಡೆಮಿ (ಜೆಬಿಎ) ಉದ್ಘಾಟನೆ

01:16 AM Apr 27, 2022 | Team Udayavani |

ಉಡುಪಿ: ಕುತ್ಪಾಡಿ ಭಗತ್‌ ಸಿಂಗ್‌ ರೋಡ್‌ನ‌ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಹಿಂಭಾಗದಲ್ಲಿ ಜೇಷ್ಮಾ ಬ್ಯಾಡ್ಮಿಂಟನ್‌ ಅಕಾಡೆಮಿ (ಜೆಬಿಎ)ಯ ಉದ್ಘಾಟನೆ ಸೋಮವಾರ ನಡೆಯಿತು.

Advertisement

ಉದ್ಘಾಟಿಸಿದ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರಾದ ಡಾ| ಜಿ. ಶಂಕರ್‌ ಅವರು, ಸುಸಜ್ಜಿತ, ಅತ್ಯಾಧುನಿಕ ವ್ಯವಸ್ಥೆಯುಳ್ಳ ಈ ಕ್ರೀಡಾಂಗಣ ಮತ್ತು ಅಕಾಡೆಮಿಯು ಕ್ರೀಡೆ ಹಾಗೂ ಕ್ರೀಡಾಳುಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ. ಜಿಲ್ಲೆಯ ಕ್ರೀಡಾಪಟುಗಳು ಸದುಪಯೋಗ ಪಡೆದುಕೊಳ್ಳುವ ಮೂಲಕ ರಾಜ ಕೋರ್ಟ್‌ ನಿರ್ಮಿಸಿ ಅಕಾಡೆಮಿ ಸ್ಥಾಪಿಸು ವವರು ಬಲು ವಿರಳ. ಪ್ರಸ್ತುತ ಕ್ರೀಡಾ ಪಟುಗಳಿಗೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದೆ. ಅದರೆ ಕ್ರೀಡೆಗೆ ಪ್ರೋತ್ಸಾಹ ನೀಡುವವರನ್ನು ಗುರು ತಿಸುವುದು ಕಂಡು ಬರುತ್ತಿಲ್ಲ. ನಾನು ಯುವಜನ ಸೇವಾ ಹಾಗೂ ಕ್ರೀಡಾ ಸಚಿವನಾಗಿದ್ದಾಗ ಇದೇ ಉದ್ದೇಶಕ್ಕೆ ಕ್ರೀಡಾ ಪ್ರೋತ್ಸಾಹ ಪ್ರಶಸ್ತಿಯನ್ನು ಜಾರಿಗೆ ತಂದಿದ್ದೇನೆ. ಕ್ರೀಡೆಗೆ ನಿರಂತರ ಪ್ರೋತ್ಸಾಹ ದೊರೆತಾಗ ಮಾತ್ರ ಹೆಚ್ಚು ಹೆಚ್ಚು ಕ್ರೀಡಾಪಟುಗಳು ಹೊರಹೊಮ್ಮಲು ಸಾಧ್ಯ ಎಂದರು.

ದ.ಕ., ಉಡುಪಿ ಜಿಲ್ಲಾ ಮೀನು ಮಾರುಕಟ್ಟೆ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ, ಬೆಂಗಳೂರಿನ ಉದ್ಯಮಿ ಸಂಜಯ್‌ ಜಾಧವ್‌, ಉದ್ಯಾವರ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಡಾ| ಮಮತಾ ಕೆ.ವಿ., ಸದಾಶಿವ ಉದ್ಯಾವರ ಶುಭಾಶಂಸನೆಗೈದರು.

ಉಡುಪಿಯ ಹಿರಿಯ ಬ್ಯಾಡ್ಮಿಂಟನ್‌ ಕೋಚ್‌ ಸದಾಶಿವ ಉದ್ಯಾವರ ಅವರನ್ನು ಸಮ್ಮಾನಿಸಲಾಯಿತು.

ಕಡೆಕಾರು ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ಉದ್ಯಾವರ ಗ್ರಾ.ಪಂ. ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್‌, ಕೀರ್ತಿ ಕನ್‌ಸ್ಟ್ರಕ್ಷನ್‌ನ ಸುಧೀರ್‌ ಶೆಟ್ಟಿ, ಕಡೆಕಾರು ಗ್ರಾ.ಪಂ. ಉಪಾಧ್ಯಕ್ಷ ನವೀನ್‌ ಶೆಟ್ಟಿ, ಸದಸ್ಯರಾದ ಪ್ರಶಾಂತ್‌ ಸಾಲ್ಯನ್‌ ಕುತ್ಪಾಡಿ, ರಾಘವೇಂದ್ರ ಕುತ್ಪಾಡಿ, ಸುಲೋಚನಾ ಸೋಮಯ್ಯ, ವೀಣಾ ಪ್ರಕಾಶ್‌, ಜೇಷ್ಮಾ ಬ್ಯಾಡ್ಮಿಂಟನ್‌ ಅಕಾಡೆಮಿ ಅಧ್ಯಕ್ಷ ಗುರುರಾಜ್‌ ಸಾಲ್ಯಾನ್‌ ಉಪಸ್ಥಿತರಿದ್ದರು. ಚೇತನ್‌ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.

Advertisement

ಹಲವು ಸೌಲಭ್ಯ
ಜೇಷ್ಮಾ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ನೋಂದಣಿ ಆರಂಭವಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ವುಡನ್‌ ಫ್ಲೋರಿಂಗ್‌ ಮತ್ತು ಸಿಂಥೆಟಿಕ್‌ ಮ್ಯಾಟ್‌ ಹೊಂದಿರುವ ಎರಡು ಬ್ಯಾಡ್ಮಿಂಟನ್‌ ಕೋರ್ಟ್‌, ಅನುಭವಿ ರಾಷ್ಟ್ರ ಮಟ್ಟದ ಕ್ರೀಡಾಳುಗಳಿಂದ ತರಬೇತಿ, ನಿತ್ಯ ಬ್ಯಾಡ್ಮಿಂಟ್‌ನ ಆಟ, ಅಭ್ಯಾಸಕ್ಕೂ ಅವಕಾಶವಿದೆ. ಸದಸ್ಯರಿಗೆ ಪ್ರತ್ಯೇಕ ಸ್ಲಾಟ್‌ ಇರುತ್ತದೆ. ಮಹಿಳೆಯರಿಗೆ ಪ್ರತ್ಯೇಕ ಬ್ಯಾಚ್‌ ವ್ಯವಸ್ಥೆಯೂ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next