Advertisement

ಉಚಿತ ಪಾಠ-ಪ್ರವಚನ ತರಗತಿಗಳ ಉದ್ಘಾಟನೆ

06:46 PM Oct 21, 2021 | Team Udayavani |

 ಬೆಂಗಳೂರು: ಅಂಕ ಗಳಿಸುವುದು ಮಾತ್ರ ಮುಖ್ಯವಲ್ಲ, ಹಂತ-ಹಂತವಾಗಿ ಕಲಿಕೆಯ ಗುರಿ ಮುಟ್ಟುವ ನಡೆ ತುಂಬಾ ಅವಶ್ಯಕವಾಗಿರುತ್ತದೆ ಎಂದು ಹಿರಿಯ ಜೀವವಿಜ್ಞಾನ ಪ್ರಾಧ್ಯಾಪಕ ಡಾ. ಎಂ.ಜೆ. ಸುಂದರ್‌ ರಾಜ್‌ ಹೇಳಿದರು.

Advertisement

ಉದಯಭಾನು ಕಲಾ ಸಂಘ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿದ್ಯಾರ್ಥಿಗಳಿಗೆ ಯಶಸ್ವಿ ಉಚಿತ ಪಾಠ-ಪ್ರವಚನ ತರಗತಿಗಳ ಉದ್ಘಾಟಿಸಿ ಮಾತನಾಡಿದರು. ನೊಬೆಲ್‌ ಪುರಸ್ಕೃತ ವಿಜ್ಞಾನಿ ಡಾ. ಚಂದ್ರಶೇಖರ್‌ ಅವರು ಸರ್‌. ಸಿ.ವಿ ರಾಮನ್‌ ರವರ ಮೊದಲ ಸಂದರ್ಶನದಲ್ಲಿ ನಪಾಸಾದರು.

ನಂತರ ಛಲ ಬಿಡದೆ ತಮ್ಮ ಪ್ರಾಮಾಣಿಕ ನಡೆಯಿಂದ ವಿಶೇಷ ಸಂಶೋಧನಾ ಅವಕಾಶವನ್ನು ಸರ್‌. ಸಿ.ವಿ ರಾಮನ್‌ ಅವರಿಂದಲೇ ಪಡೆದುಕೊಂಡ ಮಾಹಿತಿಯನ್ನು ಮಕ್ಕಳಿಗೆ ತಿಳಿಹೇಳಿದರು. ಅಧ್ಯಯನದಲ್ಲಿ ಯಶಸ್ಸು ಪಡೆಯ ಬೇಕಾದರೆ, ಪ್ರಾಮಾಣಿಕ ಪರಿಶ್ರಮ ತುಂಬಾ ಅಗತ್ಯ. ಆದ್ದರಿಂದ ಆರು ತಿಂಗಳುಗಳ ಕಾಲ ಉದಯಭಾನು ಕಲಾ ಸಂಘದಲ್ಲಿ ನೀಡುವ ಪಾಠ-ಪ್ರವಚನಗಳನ್ನು ಶ್ರಮ ವಹಿಸಿ ಕಲಿಯ ಬೇಕು.

ನುರಿತ 40-50 ಪ್ರಾಧ್ಯಾಪಕರು ತರಗತಿ ಗಳನ್ನು ಮಾಡಲು ಸಿದ್ಧರಿದ್ದಾರೆ. ವಿದ್ಯಾ ರ್ಥಿಗಳು ಈ ಅವಕಾಶ ವನ್ನು ಸಂಪೂರ್ಣ ವಾಗಿ ಸದು ಪಯೋಗ ಪಡಿಸಿಕೊಳ್ಳಬೇಕು ಎಂದು ಹಿರಿಯ ಗಣಿತ ಉಪಧ್ಯಾಯ ಜೆ.ಕೆ. ಗಂಗಾಧರ ರಾವ್‌ ತಿಳಿಸಿದರು. ಹಿರಿಯ ವಾಣಿಜ್ಯ ಪ್ರಾಧ್ಯಾಪಕ ಕೆ. ರಾಮರಾವ್‌, ವೇಲು ನಿರಂಜನ್‌ ಎಚ್‌, ಅಂಭ್ರ ಹಾವೇರಿ, ಮಂಜುನಾಥ್‌, ಉದಯ ಭಾನು ಕಲಾಸಂಘದ ಸಂಸ್ಥಾಪಕ ಕಾರ್ಯದರ್ಶಿ ಎಂ. ನರಸಿಂಹ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next