Advertisement

ಕೋವಿಡ್‌ ಪ್ರಯೋಗಾಲಯಕ್ಕೆ ಚಾಲನೆ

05:33 AM Jun 04, 2020 | Team Udayavani |

ನಾಗಮಂಗಲ: ಆದಿ ಚುಂಚನಗಿರಿ ಮೆಡಿಕಲ್‌ ಕಾಲೇಜಿನಲ್ಲಿ ಕೋವಿಡ್‌-19 ಪ್ರಯೋಗಾಲಯವ ನ್ನು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಸಚಿವ ಕೆ.ಸಿ.ನಾರಾಯಣಗೌಡ ಉದ್ಘಾಟಿಸಿದರು.

Advertisement

ತಾಲೂಕಿನ  ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ಮೆಡಿಕಲ್‌ ಕಾಲೇಜಿನಲ್ಲಿ ಕೋವಿಡ್‌ ಪ್ರಯೋಗಾಲಯಕ್ಕೆ ಚಾಲನೆ ನೀಡಿ ಮಾತನಾಡಿ ಸಚಿವರು, ತುರ್ತು ಅಗತ್ಯವಿದ್ದ ಕೋವಿಡ್‌-19 ಪರೀಕ್ಷಾ ಪ್ರಯೋಗಾಲಯ ಆದಿಚುಂಚನಗಿರಿ ಮೆಡಿಕಲ್‌ ಕಾಲೇಜಿನಲ್ಲಿ ಆರಂಭವಾಗಿದೆ. ಕೇವಲ 15 ದಿನಗಳಲ್ಲಿ ಲ್ಯಾಬ್‌ ಆರಂಭಗೊಳ್ಳಲು ಶ್ರೀಗಳೇ ಪ್ರಮುಖ ಕಾರಣ. ಇನ್ನು ಮುಂದೆ ಜಿಲ್ಲೆಯ ಜನ ಭಯಪಡಬೇಕಿಲ್ಲ ಎಂದರು.

ಇಷ್ಟುದಿನ ಟೆಸ್ಟಿಂಗ್‌ ರಿಪೋರ್ಟ್‌ಗಾಗಿ ಒಂದೆರಡು ದಿನ  ಕಾಯಬೇಕಾಗುತ್ತಿತ್ತು. ಈಗ 24 ಗಂಟೆಯಲ್ಲಿ ವರದಿ ಸಿಗಲಿದೆ. ಟೆಸ್ಟಿಂಗ್‌ಗೆ ಬೇಕಾದ ಅಗತ್ಯ ಹಣವನ್ನು ಸರ್ಕಾರ ಭರಿಸಲು ಸಿದವಿದೆ. ಸಾರ್ವಜನಿಕರು ಯಾರೂ ಕೂಡ ಮದ್ಯ, ಧೂಮಪಾನ ಮಾಡಬಾರದು. ಇದರಿಂದ ರೋಗ  ನಿರೋಧಕ ಶಕ್ತಿ ದೇಹದಲ್ಲಿ ಕಡಿಮೆಯಾಗಲಿದೆ. ಆರೋಗ್ಯವಂತ ಜೀವನಕ್ಕೂ ಇದು ಮಾರಕ. ಹೀಗಾಗಿ ಜನರು ದುಶ್ಚಟಗಳಿಂದ ದೂರವಿರ ಬೇಕು ಎಂದು ಹೇಳಿದರು.

ಕೋವಿಡ್‌, ಪ್ರಯೋಗಾಲಯ, ಉದ್ಘಾಟನೆ, Covid, Laboratory, Openingಇದಕ್ಕು ಮುನ್ನ ಸಚಿವರು ವಿಶ್ವ ಪರಿಸರ ದಿನದ ಅಂಗವಾಗಿ  ಮಠದ ಆವರಣದಲ್ಲಿ ಗಿಡ ನೆಟ್ಟರು. ಶಾಸಕರ ಸುರೇಶ್‌ ಗೌಡ, ಪರಿಷತ್‌ ಸದಸ್ಯ ಅಪ್ಪಾಜಿ ಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next