Advertisement
ಉದ್ಘಾಟನಾ ಸಮಾರಂಭದಲ್ಲಿ ಭಾರತದ ಏಕೈಕ ಸ್ಪರ್ಧಿ, ಜಮ್ಮು ಮತ್ತು ಕಾಶ್ಮೀರದ ಆಲ್ಫಿನ್ ಸ್ಕೀಯರ್ ಆರಿಫ್ ಖಾನ್ ತ್ರಿವರ್ಣ ಧ್ವಜದೊಂದಿಗೆ ಪಥಸಂಚಲನದಲ್ಲಿ ಕಾಣಿಸಿಕೊಂಡರು. ಜತೆಗೆ ಕೆಲವು ಮಂದಿ ಸಹಾಯಕ ಸಿಬಂದಿ ಕೂಡ ಇದ್ದರು. ಆರಿಫ್ ಖಾನ್ ಕೆಂಪು ಜಾಕೆಟ್ ಧರಿಸಿ ಗಮನ ಸೆಳೆದರು.
ಆರಿಫ್ ಖಾನ್, ನಿಮ್ಮ ಬಗ್ಗೆ ನಿಜವಾಗಿಯೂ ಹೆಮ್ಮೆಯಾಗುತ್ತಿದೆ’ ಎಂದು ಬೀಜಿಂಗ್ ಒಲಿಂಪಿಕ್ಸ್‌ನಲ್ಲೇ ಶೂಟಿಂಗ್ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಅಭನವ್ ಬಿಂದ್ರಾ ಟ್ವೀಟ್ ಮಾಡಿ ಸಂಭ್ರಮ ಹಂಚಿಕೊಂಡರು. 2008ರ ಸಮ್ಮರ್ ಒಲಿಂಪಿಕ್ಸ್ ಉದ್ಘಾಟನೆಗೂ ಈ ಸ್ಟೇಡಿಯಂ ಸಾಕ್ಷಿಯಾಗಿತ್ತು. ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಕ್ ಆಗಮಿಸಿದ ಕೂಡಲೇ ಸಮಾರಂಭ ಮೊದಲ್ಗೊಂಡಿತು. ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ಸಮಾರಂಭಕ್ಕೆ ಸಾಕ್ಷಿಯಾದರು.
Related Articles
Advertisement
ರಾಜತಾಂತ್ರಿಕರ ಬಹಿಷ್ಕಾರಗಾಲ್ವಾನ್ ಸಂಘರ್ಷದ ಕಮಾಂಡರ್‌ಬೀಜಿಂಗ್ ಒಲಿಂಪಿಕ್ಸ್ ಜ್ಯೋತಿ ರಿಲೇಯಲ್ಲಿ ಪಾಲ್ಗೊಂಡಿದ್ದನ್ನು ಭಾರತ ಪ್ರತಿಭಟಿಸಿತ್ತು. ಇದರಿಂದ ಭಾರತದ ಚೀನ ರಾಯಭಾರಿ ಸೇರಿದಂತೆ ರಾಜತಾಂತ್ರಿಕರು ಉದ್ಘಾಟನಾ ಸಮಾ ರಂಭವನ್ನು ಬಹಿಷ್ಕರಿಸಿದರು.