ನವದೆಹಲಿ: ಚಾಟ್ ಜಿಪಿಟಿ ಓಪನ್ ಎಐಯ ಸಿಇಒ ಸ್ಯಾಮ್ ಆಲ್ಟ್ ಮ್ಯಾನ್ ತನ್ನ ದೀರ್ಘಕಾಲದ ಗೆಳೆಯನನ್ನು ಇತ್ತೀಚೆಗೆ ವಿವಾಹವಾಗಿರುವುದು ವರದಿಯಾಗಿದೆ.
ಸ್ಯಾಮ್ ಆಲ್ಟ್ ಮ್ಯಾನ್ ದೀರ್ಘಕಾಲದ ಗೆಳೆಯ ಆಲಿವರ್ ಮುಲ್ಹೆರಿನ್ ಅವರೊಂದಿಗೆ ಕೆಲವೇ ಕೆಲ ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಇವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ಮೊದಲು ವಿವಾಹದ ಫೋಟೋ ಎಐ ರಚಿತ ಫೋಟೋವೆಂದು ಹೇಳಲಾಗಿತ್ತು. ಇದು ಅಧಿಕೃತ ಮದುವೆಯ ಫೋಟೋವೆಂದು ಆಲ್ಟ್‌ಮ್ಯಾನ್ ಅವರು NBC ನ್ಯೂಸ್‌ಗೆ ದೃಢಪಡಿಸಿರುವುದಾಗಿ ವರದಿಯಾಗಿದೆ. ಇದಲ್ಲದೆ “ನನ್ನ ಆತ್ಮೀಯ ಸ್ನೇಹಿತ ಮತ್ತು ನನ್ನ ಜೀವನದ ಪ್ರೀತಿಯನ್ನು ವಿವಾಹವಾಗಿದ್ದೇನೆ” ಎಂದು ಆಲಿವರ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಆಲ್ಟ್ ಮ್ಯಾನ್ ಹಾಗೂ ಆಲಿವರ್ ಎಲ್ಲೂ ಕೂಡ ತನ್ನ ರಿಲೇಷನ್ ಶಿಪ್ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿಲ್ಲ. ಸೆಪ್ಟೆಂಬರ್ 2023 ರಲ್ಲಿ ನ್ಯೂಯಾರ್ಕ್ ಮ್ಯಾಗಜಿನ್ ಗೆ ನೀಡಿದ ಸಂದರ್ಶನವೊಂದರಲ್ಲಿ ಸ್ಯಾಮ್ ಆಲ್ಟ್‌ಮನ್ ಅವರು ಮತ್ತು ಮುಲ್ಹೆರಿನ್ ಶೀಘ್ರದಲ್ಲೇ ಮಕ್ಕಳನ್ನು ದತ್ತು ಪಡೆಯುವುದಾಗಿ ಹೇಳಿದ್ದರು.
ಇದಲ್ಲದೆ ಈ ಹಿಂದೆ ಆಲ್ಟ್ ಮ್ಯಾನ್ ಹಾಗೂ ಆಲಿವರ್ ವೈಟ್ ಹೌಸ್ ನಲ್ಲಿ ಅಮೆರಿಕದ ಆಧ್ಯಕ್ಷ ಬೈಡನ್ ಅವರು ಭಾರತದ ನರೇಂದ್ರ ಮೋದಿ ಭೇಟಿ ಕೊಟ್ಟಾಗ ಏರ್ಪಾಡಿಸಿದ್ದ ಔತಣ ಕೂಟದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಆಲಿವರ್ ಮುಲ್ಹೆರಿನ್ ಆಸ್ಟ್ರೇಲಿಯಾದ ಸಾಫ್ಟ್‌ವೇರ್ ಇಂಜಿನಿಯರ್. ಅವರು ಆಗಸ್ಟ್ 2020 ರಿಂದ ನವೆಂಬರ್ 2022 ರವರೆಗೆ ಮೆಟಾ ಜೊತೆಗೆ ಕೆಲಸ ಮಾಡಿದ್ದರು.
ಓಪನ್ ಎಐನಿಂದ ಸ್ಯಾಮ್ ಅವರು ವಜಾಗೊಂಡಿದ್ದರು. ಇದನ್ನು ಸಂಸ್ಥೆಯ ಉದ್ಯೋಗಿಗಳು ವಿರೋಧಿಸಿದ ಬಳಿಕ ಸ್ಯಾಮ್ ಮತ್ತೆ ಸಿಇಒ ಸ್ಥಾನಕ್ಕೆ ಮರಳಿದ್ದರು.