ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪ್ರತಿಭಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Advertisement
ಅಂತಾರಾಷ್ಟ್ರೀಯ ಖ್ಯಾತಿಯ ಜಾದುಗಾರ ಓಂ ಗಣೇಶ್ ಕಾಮತ್ ಉದ್ಘಾಟಿಸಿ, ತಾಂತ್ರಿಕತೆಯ ಮೇಲಾಟವಿರುವ ಆಧುನಿಕ ಜಗತ್ತಿನಲ್ಲಿ ಪುಸ್ತಕದ ಜ್ಞಾನಕ್ಕಿಂತ ಮಿಗಿಲಾಗಿ ಸಮಾಜದ ಆಗು-ಹೋಗುಗಳಿಗೆ ಸೂಕ್ಷ¾ವಾಗಿ ಸ್ಪಂದಿಸುವ ಪರಿಜ್ಞಾನದ ಅಗತ್ಯವಿದೆ. ವ್ಯಕ್ತಿಯೋರ್ವನ ಸಾಧನೆ ಅವನೊಳಗಿನ ಪರಿಜ್ಞಾನ, ಪ್ರಾಮಾಣಿಕತೆ ಹಾಗೂ ಪರಿಶ್ರಮವನ್ನು ಆಧರಿಸಿದೆ ಎಂದರು.
ಅರ್ಥಶಾಸ್ತ್ರ ಮುಖ್ಯಸ್ಥ ಸುಧಾಕರ್ ಪಾರಂಪಳ್ಳಿ ಸ್ವಾಗತಿಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ವಾಣಿಜ್ಯ ಉಪನ್ಯಾಸಕಿ ಅವಿತಾ ಕೋರಿಯಾ ಪರಿಚಯಿಸಿದರು. ಅರ್ಚನಾ ಗದ್ದೆ ನಿರೂಪಿಸಿದರು. ವಾಣಿಜ್ಯ ಉಪನ್ಯಾಸಕಿ ನಿಶಾ ಶೆಟ್ಟಿ ವಂದಿಸಿದರು.