Advertisement

ಐತಿಹಾಸಿಕ ಬಾರಕೂರು ಆಳುಪೋತ್ಸವಕ್ಕೆ ತೆರೆ

12:50 AM Jan 28, 2019 | Harsha Rao |

ಬ್ರಹ್ಮಾವರ: ಪಾರಂಪರಿಕ ನಗರ ಬಾರಕೂರಿನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆದ ಆಳುಪೋತ್ಸವ ರವಿವಾರ ತೆರೆ ಕಂಡಿತು.

Advertisement

ರಾಜರ ಆಳ್ವಿಕೆ ಸಂದರ್ಭ ವೈಭವದ ದಿನಗಳನ್ನು ಕಂಡ, 365 ದೇವಸ್ಥಾನಗಳ ಐತಿಹಾಸಿಕ ನಗರ, ತುಳುನಾಡ ರಾಜಧಾನಿ ಬಾರಕೂರಿನಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ ಆಳುಪೋತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು.

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ, ರಾಜ-ರಾಣಿ ಕಲ್ಯಾಣಿ, ಕುದುರೆ ಲಾಯ, ಮಾಸ್ತಿಕಲ್ಲು ಹಾಗೂ ವೀರಗಲ್ಲುಗಳು ಜನರ ವಿಶೇಷ ಆಕರ್ಷಣೆಯಾಗಿದ್ದವು. ಕತ್ತಲೆ ಬಸದಿ ದೀಪಾಲಂಕಾರ ಮನಸೂರೆಗೊಂಡಿತು.

ವಿಚಾರ ಸಂಕಿರಣ
ರವಿವಾರ ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್‌ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಳುಪರ ಕುರಿತು ವಿಚಾರ ಸಂಕಿರಣ ನಡೆಯಿತು. ಸಂಜೆ ಬಾಕೂìರು ಸಂಸ್ಥಾನದಲ್ಲಿ ಯಕ್ಷಗಾನದ ಧೀಮಂತ ಕಲಾವಿದರ ಕೊಡುವಿಕೆಯಿಂದ ಮಹಾದೈವ ಮಹಿಸಂದಾಯ ಕಥಾನಕ ಜರಗಿತು.

ಗಂಗಾರತಿ
ಶ್ರೀ ಸೋಮೇಶ್ವರ ಸ್ವಾಮಿಯ ಪುರಮೆರವಣಿಗೆ ಅನಂತರ ಮೂಡುಕೇರಿ ಪುಷ್ಕರಿಣಿಯಲ್ಲಿ  ಮನ ಮೋಹಕ ಗಂಗಾ ಆರತಿ ನಡೆಯಿತು.

Advertisement

ಕಾರ್ಯಕ್ರಮ ವೈವಿಧ್ಯ
ಮುಖ್ಯ ವೇದಿಕೆಯಲ್ಲಿ ಸರ್ವ ಮಹಿಳಾ ಸಂಗೀತ ತಂಡದವರಿಂದ ಘಲ್‌-ಝಲ್‌, ಕೊರಗರ ಸಂಗೀತ ನಾವೀನ್ಯ, ಆಳುಪ-ಬಾಕೂìರು ಗತ ವೈಭವದ ನೃತ್ಯ ರೂಪಕ ಜರಗಿತು. ಉಪ ವೇದಿಕೆಯಲ್ಲಿ ರಾಘವೇಂದ್ರ ಜನ್ಸಾಲೆ ತಂಡದಿಂದ ಯಕ್ಷ-ಗಾನ-ವೈಭವ ಜುಗಲ್‌ಬಂದಿ, ಕಾಳಿಂಗ ರಾವ್‌ ಪ್ರತಿಷ್ಠಾನದವರಿಂದ ಭಾವ ಬೆಳದಿಂಗಳ ಗೀತಗಾಯನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next