Advertisement

ನಮ್ಮೇರಿಕ ಅಂತಾರಾಷ್ಟ್ರೀಯ  ಕನ್ನಡ ನಾಟಕೋತ್ಸವಕ್ಕೆ  ತೆರೆ

08:30 PM May 16, 2021 | Team Udayavani |

ನ್ಯೂಯಾರ್ಕ್‌

Advertisement

ನಮ್ಮೇರಿಕ ಸಂಸ್ಥೆಯು ಮೊದಲ ಬಾರಿಗೆ ಆಯೋಜಿಸಿದ್ದ ಅಂತಾ ರಾಷ್ಟ್ರೀಯ ಆನ್‌ಲೈನ್‌ ಕನ್ನಡ ನಾಟ ಕೋತ್ಸವದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಮೇ 3ರಂದು ವರ್ಚುವಲ್‌ನಲ್ಲಿ ನಡೆಯಿತು.

ತೀರ್ಪುಗಾರರಾದ ಚಂಪಾ ಶೆಟ್ಟಿ ಮಾತನಾಡಿ, ನಾಟಕೋತ್ಸವದಿಂದಾಗಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಇದೊಂದು ದೊಡ್ಡ ರಿಲೀಫ್ ಮತ್ತು ಭಾಗವಹಿಸಿದವರಿಗೆ ಬಹುದೊಡ್ಡ ಬಹುಮಾನ. ನಾಟಕೋತ್ಸವದಲ್ಲಿ ಎಲ್ಲರ ಪ್ರಾಮಾಣಿಕ ಪ್ರಯತ್ನ ಎದ್ದು ಕಾಣುತ್ತಿತ್ತು ಎಂದರು.

ತೀರ್ಪುಗಾರರಾದ ಡಾ| ಎಂ.ಎಸ್‌. ವಿದ್ಯಾ ಮಾತನಾಡಿ, ನಾಟಕ ಎನ್ನು ವುದು ಸಂಪೂರ್ಣ ಕಲೆ. ಅದರಲ್ಲಿ ಪ್ರತಿ ಯೊಬ್ಬರೂ ಭಾಗವಹಿಸಲು ಇಷ್ಟ ಪಡು ತ್ತಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ತುಂಬಾ ಖುಷಿ ಕೊಟ್ಟಿತು. ನಾಟಕದ ಆಯ್ಕೆ, ನಿರ್ದೇಶನ, ಅಭಿನಯ, ಕೆಮರಾ ಎಲ್ಲವೂ ಅದ್ಭುತವಾಗಿತ್ತು. ಟೀಕೆ ಮಾಡು

ವುದು ಸುಲಭ. ಆದರೆ ಆ ಹಿಂದಿರುವ ಕಷ್ಟ ಯಾರಿಗೂ ಗೊತ್ತಾಗುವುದಿಲ್ಲ. ಪ್ರತಿಯೊಬ್ಬರೂ ಪ್ರಯತ್ನ ಪಟ್ಟಿದ್ದಾರೆ. ತಂಡಗಳು ರಂಗ ಶಿಬಿರಗಳನ್ನು ಮಾಡಬೇಕು. ಪ್ರಸ್ತುತ ಸಂದರ್ಭಕ್ಕೆ ತಕ್ಕಂತ ಸಮಸ್ಯೆಗಳನ್ನು ತೆಗೆದುಕೊಂಡು ರಂಗಶಿಬಿರಗಳ ಮೂಲಕ ತರಬೇತಿ ಮಾಡಿದರೆ ಅದರಲ್ಲಿ ಹೆಚ್ಚು ಯಶಸ್ಸು ದೊರೆಯುವುದು ಎಂದರು.

Advertisement

ತೀರ್ಪುಗಾರರಾದ ಚೈತನ್ಯ ಮಾತನಾಡಿ, ರಂಗಭೂಮಿಯನ್ನು ವರ್ಚು ವಲ್‌ ಮಾಡುವುದು ಕಷ್ಟ. ಆದರೆ ಈಗಿನ ಸ್ಥಿತಿಯಲ್ಲಿ ಅದು ಅನಿವಾರ್ಯ. ಆನ್‌ಲೈನ್‌ ನಾಟಕ ಮಾಡುವುದು ಒಂದು ಪ್ರಕಾರವಾಗುತ್ತಿದೆ.

ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವುದು ಹೇಗೆ ಎಂಬುದನ್ನು ಯೋಚಿಸಬೇಕಿದೆ ಎಂದು ತಿಳಿಸಿದರು.  ತೀರ್ಪುಗಾರರಾದ ಶ್ರೀನಿವಾಸ್‌ ಪ್ರಭು ಮಾತನಾಡಿ, ರಂಗ ಸಂಭ್ರಮ ಕೊನೆಯ ಹಂತಕ್ಕೆ ಬಂದಿದೆ. ಬಹಳ ಒಳ್ಳೆಯ ಪ್ರಯತ್ನ. ಯಾರೂ ವೃತ್ತಿಪರ ನಟರು, ತಂತ್ರಜ್ಞರಲ್ಲ. ಆದರೂ ಯಶಸ್ವಿಯಾಗಿ ನಡೆಸಿದ್ದಾರೆ ಅದಕ್ಕೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು ಎಂದು ತಿಳಿಸಿದರು.

ನಾಟಕ ಸಮೂಹ ಮಾಧ್ಯಮ. ಹೀಗಾಗಿ ಇದಕ್ಕೊಂದು ಪ್ರೇಕ್ಷಕ ವೃಂದವಿರುತ್ತದೆ. ಅದ್ದರಿಂದ ಜವಾಬ್ದಾರಿಗಳು ಹೆಚ್ಚಾಗಿರುತ್ತದೆ. ಅದನ್ನು ಎಲ್ಲರೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ತಿಳಿಸಿ ನಾಟಕ ಕಲಾವಿದರಿಗೆ ಕೆಲವೊಂದು ಕಿವಿ ಮಾತುಗಳನ್ನು ಹೇಳಿದರು.

ತೀರ್ಪುಗಾರರಾದ ಸುನೇತ್ರ ಪಂಡಿತ್‌ ಮಾತನಾಡಿ, ತಂತ್ರಜ್ಞಾನದ ಮೂಲಕ ಇಷ್ಟೆಲ್ಲ ಮಾಡಬಹುದು ಎಂಬುದನ್ನು ನಮ್ಮೇರಿಕ ತೋರಿಸಿಕೊಟ್ಟಿದೆ ಎಂದ ಅವರು, ನಾಟಕೋತ್ಸವದಲ್ಲಿ  ಪ್ರದರ್ಶನಗೊಂಡು 11 ನಾಟಕಗಳ ಕುರಿತು ಸಂಪೂರ್ಣ ವಿಶ್ಲೇಷಣೆ ನೀಡಿದರು.

ಕಾರ್ಯಕ್ರಮ ಪ್ರಾಯೋಜಿಸಿದ ಮೋಹನ್‌ ಕೃಷ್ಣ ರಾವ್‌ ಮಾತನಾಡಿ, ಒಂದು ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತು ಎಂದು ತಿಳಿಸಿದರು.  ಅವನೀಧರ್‌, ಇಂದುಶ್ರೀ ರವೀಂದ್ರ, ನಾಗತಿಹಳ್ಳಿ ಚಂದ್ರಶೇಖರ್‌ ಅವರು ವಿಜೇತರ ವಿವರವನ್ನು ಘೋಷಿಸಿದರು.  ಬಳಿಕ ಪ್ರಶಸ್ತಿ ವಿಜೇತರು, ಅಂತಿಮ ಸುತ್ತಿಗೆ ಆಯ್ಕೆಯಾದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ವಲ್ಲೀಶ್‌ ಶಾಸಿŒ, ಕಾರ್ಯಕ್ರಮ ಸಂಘಟಕರಾದ ಸ್ವಾತಿ, ಸೋಮಶೇಖರ್‌ ಮತ್ತಿತರರು ಕಾರ್ಯಕ್ರಮ ನಡೆದು ಬಂದ ಹಾದಿಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ನಿರೂಪಿಸಿದ ನಮ್ಮೇರಿಕ ಸಂಸ್ಥೆಯ ಸ್ಥಾಪಕಾಧ್ಯಕ್ಷ ಆನಂದ್‌ ರಾವ್‌,  ಪ್ರಪಂಚದ ವಿವಿಧ ಭಾಗಗಳಿಂದ ಬಂದಿದ್ದ 10 ತಂಡಗಳು ನಾಟಕೋತ್ಸವದಲ್ಲಿ ಭಾಗವಹಿಸಿದ್ದು, 11 ನಾಟಕಗಳು ಪ್ರದರ್ಶನಗೊಂಡಿದ್ದವು. ನಾಟಕಗಳ ಸಂಭ್ರಮದಲ್ಲಿ ಯುಗಾದಿಯನ್ನು ಆಚರಿಸಿದೆವು ಎಂದರು.  ನಮ್ಮೇರಿಕದಿಂದ ಮಕ್ಕಳು ಮತ್ತು ದೊಡ್ಡವರಿಗೆ ನಾಟಕದ ಶಿಬಿರಗಳನ್ನು ಆಯೋಜಿಸಲಾಗುತ್ತದೆ.  ಆದರೆ ರಿಹರ್ಸಲ್‌ಗೆ ಜನ ಸೇರಿಸುವುದು ಕಷ್ಟವಾಗು

ತ್ತದೆ. ಆದರೆ ವರ್ಚುವಲ್‌ ವೇದಿಕೆಯಿಂದಾಗಿ ಆ ಸಮಸ್ಯೆಗೆ ಕೊಂಚ ಪರಿಹಾರ ಸಿಕ್ಕಿದೆ ಎಂದ ಅವರು ನಾಟಕಗಳಿಗೆ ಹೇಗೆ ತೀರ್ಪು ನೀಡಲಾಯಿತು ಎಂಬುದನ್ನು ವಿವರಿಸಿದರು.  ಬಳಿಕ ಸಿಯಾಟಲ್‌ ಸಹ್ಯಾದ್ರಿ ಕನ್ನಡ ಕೂಟದಿಂದ ಬೀಚಿ ಅವರ ವಶೀಕರಣ ನಾಟಕ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next