Advertisement
ತೆರೆದ ಪುಸ್ತಕ ಪರೀಕ್ಷೆಗೆ ವಿಶ್ವವಿದ್ಯಾ ನಿಲಯ ಅನುದಾನ ಆಯೋಗ ಅವಕಾಶ ಕಲ್ಪಿಸಿದೆ. ಅದರಂತೆ ಯುಜಿಸಿ ಮಾನದಂಡದ ಅಡಿಯಲ್ಲೇ 2020-21ನೇ ಸಾಲಿನಲ್ಲಿ ತೆರೆದ ಪುಸ್ತಕ ಪರೀಕ್ಷೆಯನ್ನು ನಡೆಸಲಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ಮಾಡುತ್ತಿದ್ದೇವೆ. ವಿಶ್ವವಿದ್ಯಾನಿಲ ಯದ ಶೈಕ್ಷಣಿಕ ಮಂಡಳಿಯು ಇದಕ್ಕೆ ಒಪ್ಪಿಗೆ ಸೂಚಿಸಿದೆ ಮತ್ತು ಶೈಕ್ಷಣಿಕ ಮಂಡಳಿಯ ನಿರ್ಧಾರದಂತೆ ತೆರೆದ ಪುಸ್ತಕ ಪರೀಕ್ಷೆ ನಡೆಯಲಿದೆ ಎಂದು ಕೆಎಸ್‌ಒಯು ಕುಲಸಚಿವ ಪ್ರೊ| ಲಿಂಗರಾಜ ಗಾಂಧಿ ತಿಳಿಸಿದರು.
ಕೆಎಸ್‌ಒಯುನಲ್ಲಿ ಕಲಿಯು ತ್ತಿರುವ ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷೆ ಇರಲಿದೆ. ಪರೀಕ್ಷೆಗೆ ಸಂಬಂಧಿಸಿ ಕೆಎಸ್‌ಒಯುನಿಂದ ಮಾರ್ಗಸೂಚಿಯನ್ನು ಸಿದ್ಧಪಡಿಸ ಲಾಗುತ್ತಿದೆ. ಪ್ರಶ್ನೆ ಪತ್ರಿಕೆಯನ್ನು ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಲಾಗುತ್ತದೆ.
Related Articles
Advertisement
ತೆರೆದ ಪುಸ್ತಕ ಪರೀಕ್ಷೆ ಯಾರಿಗೆ?ಕೆಎಸ್‌ಒಯು ತನ್ನ ಪ್ರಥಮ ಹಾಗೂ ದ್ವಿತೀಯ ವರ್ಷದ ಪದವಿ, ಪ್ರಥಮ ವರ್ಷದ ಸ್ನಾತಕೋತ್ತರ ಪದವಿ, ಮೂರನೇ ಸೆಮಿಸ್ಟರ್‌ನ ಎಂ.ಎಸ್ಸಿ. ವಿದ್ಯಾರ್ಥಿಗಳು, ಎರಡು ಮತ್ತು ಮೂರನೇ ಸೆಮಿಸ್ಟರ್‌ನ ಎಂಬಿಎ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷೆ ನಡೆಸಲಿದೆ. ಆದರೆ, ಅಂತಿಮ ವರ್ಷದ ಎಂ.ಎ., ಎಂ.ಕಾಂ., ಎಂ.ಎಸ್ಸಿ, ಎಂಬಿಎ ವಿದ್ಯಾರ್ಥಿಗಳಿಗೆ ಈಗ ಇರುವ ಪದ್ಧತಿಯಲ್ಲೇ ಪರೀಕ್ಷೆ ನಡೆಯಲಿದೆ (ತೆರೆದ ಪುಸ್ತಕ ಪರೀಕ್ಷೆ ಇರುವುದಿಲ್ಲ). ಒಟ್ಟಾರೆ 31 ಕೋರ್ಸ್‌ಗಳ ಸುಮಾರು 12 ಸಾವಿರ ವಿದ್ಯಾರ್ಥಿಗಳು ತೆರೆದ ಪುಸ್ತಕ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಆನ್‌ಲೈನ್ ಮೂಲಕ ಪ್ರಶ್ನೆ ಪತ್ರಿಕೆ ಪಡೆದು 10 ದಿನಗಳೊಳಗೆ ಪರೀಕ್ಷೆ ಬರೆದು ಉತ್ತರ ಪತ್ರಿಕೆಯನ್ನು ವಿಶ್ವವಿದ್ಯಾನಿಲಯಕ್ಕೆ ಹಿಂದಿರುಗಿಸಬೇಕು ಎಂದು ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಕೆಲವು ಸೆಮಿಸ್ಟರ್ ಅಥವಾ ವರ್ಷದ ವಿದ್ಯಾರ್ಥಿಗಳಿಗೆ ಇಂಟರ್ನಲ್ ಅಸೆಸೆ¾ಂಟ್ ಅನ್ನು ಯುಜಿಸಿ ನೀಡಿರುವ ಆಯ್ಕೆ ಅನುಸಾರವಾಗಿ ತೆರೆದ ಪುಸ್ತಕ ಪರೀಕ್ಷೆಯ ಮೂಲಕ ನಡೆಸುತ್ತಿದ್ದೇವೆ.
– ಡಾ| ಎಸ್.ವಿದ್ಯಾಶಂಕರ್
ಕುಲಪತಿ, ಕೆಎಸ್‌ಒಯು ರಾಜು ಖಾರ್ವಿ ಕೊಡೇರಿ