Advertisement

ರಕ್ಷಣೆ ಇಲ್ಲದೆ ಸೋಂಕಿತ ಶವ ಹಸ್ತಾಂತರ; ಆರೋಪ

01:25 PM May 15, 2021 | Team Udayavani |

ರಾಯಚೂರು: ಇಲ್ಲಿನ ಓಪೆಕ್  ಕೋವಿಡ್  ಆಸ್ಪತ್ರೆಯಲ್ಲಿ‌ ಮೃತ ಸೊಂಕಿತರ ಶವಗಳಿಗೆ ಕವರ್ ಹಾಕದೆ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

Advertisement

ಸೋಂಕಿನಿಂದ ದಾಖಲಾದವರು ಮೃತಪಟ್ಟಲ್ಲಿ ಆಸ್ಪತ್ರೆ ಸಿಬ್ಬಂದಿಯೇ ಅಂತ್ಯಕ್ರಿಯೆ ನೆರವೇರಿಸುತ್ತಾರೆ.  ಇಲ್ಲವೇ ಕುಟುಂಬಸ್ಥರು ಶವ ಕೇಳಿದರೆ, ಶವವನ್ನು ಸಂಪೂರ್ಣ ಕವರ್ ಮಾಡಿ ಕೊಡಬೇಕಿದೆ. ಈವರೆಗೂ ಹಾಗೆಯೇ ನೀಡಲಾಗುತ್ತಿದೆ. ಆದರೆ, ವೀಡಿಯೋ ಹರಿದಾಡುತ್ತಿದ್ದು ಅದರಲ್ಲಿ ಶವ ಹಸ್ತಾರಿಸುವಾಗ ಯಾವುದೇ ಕವರ್ ಹಾಕಿಲ್ಲ. ಪಿಪಿಇ ಕಿಟ್ ಸಹ ನೀಡದೆ ಸಂಬಂಧಿಕರೆ ಅಂತ್ಯ ಸಂಸ್ಕಾರ ಮಾಡುವಂತೆ ಸಿಬ್ಬಂದಿ ಶವ ಒಪ್ಪಿಸಿದ್ದಾರೆ.

ಇದನ್ನೂ ಓದಿ : ನಾಳೆಯಿಂದ ಫುಲ್ ಲಾಕ್ ಡೌನ್: ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

ಮೃತ ಸೊಂಕಿತನ ಸಂಬಂಧಿಕರೇ ಶವ ಸಾಗಿಸಿದ್ದಾರೆ. ಆದರೆ, ಆರೋಪ ಅಲ್ಲಗಳೆದಿರುವ ರಿಮ್ಸ್ ನಿರ್ದೇಶಕ ಬಸವರಾಜ ಪೀರಾಪುರ ನಾವು ಯಾವುದೇ ಶವವನ್ನು ಹಾಗೆಯೇ ಕಳುಹಿಸಿಲ್ಲ. ನಾನ್ ಕೋವಿಡ್ ಪ್ರಕರಣವಾದರೆ ಕವರ್ ಬೇಕಿಲ್ಲ. ಘಟನೆ ಬಗ್ಗೆ ಮಾಹಿತಿ ಪಡೆಯವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next