Advertisement
ಮಧುಲಿಕಾ ರಾವತ್ :
Advertisement
ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ :
ರಾವತ್ ಅವರ 11ನೇ ಗೋರ್ಖಾ ರೈಫಲ್ಸ್‌ನವರೇ ಆದ ಲೆ| ಕ.ಹರ್ಜಿಂ ದರ್ ಸಿಂಗ್ ಸಿಡಿಎಸ್ ಅವರಿಗೆ ಸ್ಟಾಫ್ ಆಫೀಸರ್ ಆಗಿದ್ದರು. ಜತೆಗಿನ ಅಧಿಕಾರಿಗಳು ಇವರನ್ನು ನೆನಪಿಸಿಕೊಳ್ಳುವುದೇ ಸದಾ ಮಂದಹಾಸ ಮೊಗದ ಅಧಿಕಾರಿ ಎಂದು. ಮೂಲತಃ ಉತ್ತರ ಪ್ರದೇಶದ ಲಕ್ನೋದವರಾದ ಇವರು, ಸಿಯಾಚಿನ್ ಗ್ಲೆàಸಿಯರ್ ಸೇರಿದಂತೆ ಪ್ರಮುಖ ಆಪರೇಶನ್‌ಗಳಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಂದ ಹಾಗೆ ಇವರು ವಿವಾಹವಾಗಿರುವುದು ಕಾರ್ಕಳದ ಪ್ರಫುಲ್ಲಾ ಅವರನ್ನು.
ಜೆಡಬ್ಲ್ಯುಒ ಪ್ರದೀಪ್ ಎ. :
ಕೇರಳದ ತೃಶೂರ್ ಜಿಲ್ಲೆಯವರಾದ ಪ್ರದೀಪ್ ಅರಕ್ಕಲ್ ಕ್ಯಾಪ್ಟರ್‌ನ ಚೀಫ್ ಎಂಜಿನಿಯರ್ ಆಗಿದ್ದರು. ಹಾಗೆಯೇ ಐಎಎಫ್ನಲ್ಲಿ ಜೂನಿಯರ್ ವಾರಂಟ್ ಎಂಜಿನಿಯರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದರು. ಛತ್ತೀಸ್‌ಗಡದಲ್ಲಿನ ನಕ್ಸಲ್ ವಿಗ್ರಹ ಕಾರ್ಯಾಚರಣೆಯಲ್ಲೂ ಪ್ರದೀಪ್ ಎ ಭಾಗಿಯಾಗಿದ್ದರು. ಅಷ್ಟೇ ಅಲ್ಲ, 2018ರ ಕೇರಳ ಪ್ರವಾಹವೂ ಸೇರಿದಂತೆ ಹಲವಾರು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕಳೆದ 19 ವರ್ಷಗಳಿಂದ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು, ಪತ್ನಿ, 7 ವರ್ಷದ ಮಗ ಮತ್ತು 2 ವರ್ಷದ ಮಗಳನ್ನು ಅಗಲಿದ್ದಾರೆ.
ಹವಾಲ್ದಾರ್ ಸತ್ಪಾಲ್ ಸಿಂಗ್ :
ಡಾರ್ಜಲಿಂಗ್ ಮೂಲದವರಾದ ಇವರು ಜ| ಬಿಪಿನ್ ರಾವತ್ ಅವರಿಗೆ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿದ್ದರು. 41 ವರ್ಷದ ಇವರು ಗೋರ್ಖಾ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸಿದ್ದರು. ಇವರ ಪುತ್ರ ಕೂಡ ಸೇನೆಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.
ಲ್ಯಾನ್ಸ್ ನಾಯಕ್ ವಿವೇಕ್‌ಕುಮಾರ್ :
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯವರಾದ ವಿವೇಕ್ ಕುಮಾರ್, ಜ|ರಾವತ್ ಅವರಿಗೆ ಪ್ರಿನ್ಸಿಪಲ್ ಸ್ಟಾಫ್ ಆಫೀಸರ್ ಆಗಿದ್ದರು. ಕಳೆದ ನಾಲ್ಕು ತಿಂಗಳುಗಳ ಹಿಂದೆ ತಮ್ಮ ಗ್ರಾಮಕ್ಕೆ ಬಂದಿದ್ದ ಇವರು, ಒಂದೂವರೆ ತಿಂಗಳು ರಜೆ ಮೇಲೆ ಇದ್ದರು. ಜತೆಗೆ ತಮ್ಮ ಪುತ್ರನ ಒಂದು ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ಅಂದುಕೊಂಡಿದ್ದರು. ಎರಡು ವರ್ಷದ ಹಿಂದಷ್ಟೇ ಇವರಿಗೆ ವಿವಾಹವಾಗಿದ್ದು, ಪುತ್ರನಿಗೆ ಈಗಿನ್ನೂ ಎರಡು ತಿಂಗಳು.
ನಾಯಕ್ ಗುರುಸೇವಕ್ ಸಿಂಗ್ :
ಪಂಜಾಬ್‌ನ ದೋಡೆ ಗ್ರಾಮದವಾರದ ನಾಯಕ್ ಗುರುಸೇವಕ್ ಸಿಂಗ್, 9 ಪ್ಯಾರಾ ವಿಶೇಷ ದಳಕ್ಕೆ ಸೇರಿದವರಾಗಿದ್ದರು. ಇವರು ಸಿಡಿಎಸ್ ಅವರಿಗೆ ಕಳೆದ ಮೂರು ವರ್ಷಗಳಿಂದ ಪ್ರಿನ್ಸಿಪಲ್ ಸ್ಟಾಫ್ ಆಫೀಸರ್ ಆಗಿದ್ದರು. ಇವರು ಪತ್ನಿ ಜಸ್ವಿಂತ್ ಕೌರ್, 9 ಮತ್ತು 7 ವರ್ಷದ ಇಬ್ಬರು ಪತ್ರಿಯರು ಮತ್ತು 3 ವರ್ಷದ ಒಬ್ಬ ಪುತ್ರನನ್ನು ಅಗಲಿದ್ದಾರೆ.
ನಾಯಕ್ ಜಿತೇಂದ್ರ ಕುಮಾರ್ :
ಮಧ್ಯಪ್ರದೇಶದ ಸೆಹೋರ್ ಜಿಲ್ಲೆ ಯ ಧಾಮಾಂಡ ಗ್ರಾಮದ ನಾಯಕ್ ಜಿತೇಂದ್ರ ಕುಮಾರ್, 3ನೇ ಪ್ಯಾರಾ ವಿಶೇಷ ಪಡೆಗೆ ಸೇರಿ ದವರಾಗಿದ್ದಾರೆ.
ಜ| ರಾವತ್ ಅವರಿಗೆ ಪಿಎಸ್‌ಒ ಆಗಿದ್ದ ಇವರು, ಕಳೆದ 8 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಪತ್ನಿ ಮತ್ತು ನಾಲ್ಕು ವರ್ಷದ ಮಗಳು ಹಾಗೂ ಒಂದು ವರ್ಷದ ಪುತ್ರನನ್ನು ಅಗಲಿದ್ದಾರೆ.
ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ :
ಬುಧವಾರ ಅಪಘಾತಕ್ಕೀಡಾದ ಎಂ-17ವಿ5 ಹೆಲಿಕಾಪ್ಟರ್ ಅನ್ನು ಚಲಾಯಿಸುತ್ತಿದ್ದ ಪೈಲಟ್ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್. ಇವರು ತಮಿಳುನಾಡಿನ ಸೂಲೂರಿನ 109 ಹೆಲಿಕಾಪ್ಟರ್ ಯುನೈಟೆಡ್‌ನಲ್ಲಿ ಕಮಾಂಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಧ್ಯಪ್ರದೇಶದ ರೇವಾದಲ್ಲಿರುವ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಇವರು, 2000ನೇ ಇಸವಿಯಲ್ಲಿ ವಾಯುಸೇನೆ ಸೇರಿದ್ದರು. ಇವರು ಪತ್ನಿ, 12 ವರ್ಷದ ಪುತ್ರಿ ಮತ್ತು 9 ವರ್ಷದ ಮಗನನ್ನು ಬಿಟ್ಟು ಹೋಗಿದ್ದಾರೆ.
ಲ್ಯಾನ್ಸ್ ನಾಯಕ್ ಸಾಯಿತೇಜ :
27 ವರ್ಷದ ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜ ಆಂಧ್ರಪ್ರದೇಶ ದ ಚಿತ್ತೂರು ಜಿಲ್ಲೆಯ ಕುರುಬಲಕೋಟಾ ಗ್ರಾಮದವರು. 2013 ರಲ್ಲಿ ಸೇನೆ ಸೇರಿದ್ದ ಇವರು, ಜ| ರಾವತ್ ಅವರ ಭದ್ರತಾ ಸಿಬಂದಿಯಾಗಿದ್ದರು. ಇವರಷ್ಟೇ ಅಲ್ಲ, ಸಹೋದರ ಮಹೇಶ್ ಕೂಡ ಸೇನೆಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಪತ್ನಿ ಮತ್ತು 3 ಹಾಗೂ 1 ವರ್ಷದ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಜೆಡಬ್ಲ್ಯುಒ ರಾಣಾ ಪ್ರತಾಪ್ ದಾಸ್ :
ಒಡಿಶಾದ ತಾಲ್ಚಾರ್‌ನ ಜೂನಿಯರ್ ವಾರಂಟ್ ಅಧಿಕಾರಿಯಾಗಿರುವ ರಾಣಾ ಪ್ರತಾಪ್ ದಾಸ್, ಕಳೆದ 12 ವರ್ಷಗಳಿಂದ ವಾಯುಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ವೈದ್ಯೆಯಾಗಿರುವ ಪತ್ನಿ ಮತ್ತು ಒಂದು ವರ್ಷದ ಪುತ್ರನನ್ನು ಅಗಲಿದ್ದಾರೆ.
ಸ್ಕ್ವಾಡ್ರನ್ ಲೀಡರ್ ಕುಲ್ದೀಪ್ ಸಿಂಗ್ ರಾವ್ :
2013ರಲ್ಲಿ ವಾಯುಸೇನೆ ಸೇರಿದ್ದ ಕುಲ್ದೀಪ್ ಸಿಂಗ್, ರಾಜಸ್ಥಾನದ ಝುಂಝುಹು ಜಿಲ್ಲೆಯವರು. ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನ ಸಹಪೈಲಟ್ ಆಗಿದ್ದರು. 40 ವರ್ಷದ ಕುಲ್ದೀಪ್ ಸಿಂಗ್, ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದರು. ಇವರಿಗೆ ಒಬ್ಬ ಪುತ್ರನಿದ್ದಾನೆ. ಇವರ ತಂದೆ ನೌಕಾದಳದ ನಿವೃತ್ತ ಅಧಿಕಾರಿ. ಇವರ ಸಹೋದರಿ ಅಭಿತಾ ಭಾರತೀಯ ಕರಾವಳಿ ಭದ್ರತಾ ಪಡೆಯಲ್ಲಿ ಡೆಪ್ಯುಟಿ ಕಮಾಂಡರ್ ಆಗಿದ್ದಾರೆ.