ತಾಜ್ ವೆಸ್ಟ್ ಎಂಡ್ ಸಹಯೋಗದಲ್ಲಿ, ಚಿತ್ರಕಾರ ಎಂ.ಜಿ. ದೊಡ್ಡಮನಿಯವರು “ಊರ್ಜ’ ಚಿತ್ರ ಪ್ರದರ್ಶನದ 2ನೇ ಆವೃತ್ತಿಯನ್ನು ಹಮ್ಮಿಕೊಂಡಿದ್ದಾರೆ. “ಊರ್ಜ’ ಎಂದರೆ ಸಂಸ್ಕೃತದಲ್ಲಿ ಜೀವನ್ಮುಖ ಶಕ್ತಿ ಎಂದು ಅರ್ಥ.
ಈ ಪ್ರದರ್ಶನದಲ್ಲಿ ಭಾಗವಹಿಸಲಿರುವ 24 ಕಲಾವಿದರು ತಮ್ಮ ಕಲಾತ್ಮಕ ಶಕ್ತಿಯನ್ನು, ಸಮಾಜಮುಖೀ ಕಾರ್ಯವೊಂದಕ್ಕೆ ವಿನಿಯೋಗಿಸುತ್ತಿರುವುದು ವಿಶೇಷ. ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶುರುವಾದ ವೈಟ್‌ಫೀಲ್ಡ್‌ನ “ಬೆಂಬಲ’ ಸಂಸ್ಥೆಗೆ ನೆರವು ನೀಡುವ ಉದ್ದೇಶದಿಂದ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಖ್ಯಾತ ಚಿತ್ರಕಾರರಾದ ಕೆ.ಟಿ. ಶಿವಪ್ರಸಾದ್, ಸಚಿನ್ ಜಲ್‌ತಾರೆ, ಗುರುದಾಸ್ ಶೆಣೈ, ಬಾಸುಕಿ ದಾಸ್ ಗುಪ್ತ, ಜೆಎಂಎಸ್ ಮಣಿ ಹಾಗೂ ಉದಯೋನ್ಮುಖ ಕಲಾವಿದರಾದ ಜ್ಯೋತಿ ಗುಪ್ತ, ಕಾಂತಿ ವಿ., ನೀಲಂ ಮಲ್ಹೋತ್ರ, ನಿವೇದಿತಾ ಗೌಡ, ರಿತು ಚಾವ್ಲ ಮಾಥುರ್, ರೋಶ್ ರವೀಂದ್ರನ್, ವನಜಾ ಬಾಲ್, ವೆಂಕಟರಮಣ್ ಆರ್. ಸೇರಿದಂತೆ 24 ಕಲಾವಿದರ, 80 ಕಲಾಕೃತಿಗಳು ಈ ಪ್ರದರ್ಶನದಲ್ಲಿ ಇರಲಿವೆ.
ಎಲ್ಲಿ?: ಆರ್ಟ್ ಕಾರಿಡಾರ್, ತಾಜ್ ವೆಸ್ಟ್ ಎಂಡ್ ಹೋಟೆಲ್
ಯಾವಾಗ?: ಫೆ. 23ರಿಂದ ಮಾರ್ಚ್ 2, ಬೆಳಗ್ಗೆ 11-8