Advertisement
ಶಾಲೆಯಲ್ಲಿ ಆಕೆಗೆ ನೀನು ದಾಸ್ಯಕ್ಕೆ ಸೇರಿದವಳು, ಮನೆಕೆಲಸದವಳಾಗಿ ಕೆಲಸ ಮಾಡಲು ಎಷ್ಟು ಬೇಕೋ ಅಷ್ಟು ತಯಾರಾಗು ಸಾಕು ಎನ್ನುವುದನ್ನು ಮನದಟ್ಟು ಮಾಡಿಸಿದ್ದರಂತೆ. ಅದಕ್ಕೆ ವ್ಯತಿರಿಕ್ತವಾಗಿ ಆಕೆಯ ತಾಯಿ ತನ್ನ ಮಕ್ಕಳು ಶಾಲೆಗೆ ಹೋಗಿ ಕಲಿತು ಶಿಕ್ಷಣವಂತರಾಗಬೇಕು ಎಂದು ಶ್ರಮಪಟ್ಟರಂತೆ. ಬಾಲಕಿಯ ತಂದೆಯೂ ಕನಿಷ್ಠ ಓದು-ಬರಹವನ್ನು ಪಡೆದು, ಒಳ್ಳೆಯ ಕೆಲಸಗಾರರಾಗಿದ್ದರೂ ಅವರಿಗೆ ಗುಲಾಮರಿಗೆ ಕೊಡುವ ಒಂದೆರಡು ಕಾಸು ಸಿಗುತ್ತಿತ್ತಂತೆ. ಸರಕಾರ ತಮಗೆ ಬಳುವಳಿಯಾಗಿ ಬಡತನವನ್ನು ಕೊಟ್ಟಿದ್ದರೂ ಸ್ವಾಭಿಮಾನಿ ಕುಟುಂಬ ತಮ್ಮ ಹಸಿವನ್ನು ನಿಯಂತ್ರಿಸಿಕೊಂಡು ಬದುಕಿದರು. ಆ ತಂದೆ ತಾಯಿಯರು ಮಕ್ಕಳಲ್ಲಿ ಕನಸು, ಧೈರ್ಯವನ್ನು ತುಂಬಿದರು. ಆ ಹನಿಹನಿ ತುಂತುರು ಸೇರಿ ಅವರ ಮಗಳು ಕ್ಯಾತ್ ತಾನು ಹುಟ್ಟಿದ ಮಿಂಜೆರಿಬ (North Stradbroke ದ್ವೀಪ) ಸಮುದ್ರದ ಮೊರೆತವನ್ನು ಪ್ರತಿಧ್ವನಿಸುವಂತೆ ಆಯಿತು.
Related Articles
Advertisement
ಮಧ್ಯದಲ್ಲಿ ತಮ್ಮ ಕುಲದ ಚಿತ್ರಕಲೆಯನ್ನು ಅಭ್ಯಸಿಸಿ, ಪ್ರಕಟಿಸಿದರು. ಅನೇಕ ಸಂಸ್ಥೆಗಳಿಗೆ ಜೀವಕೊಟ್ಟು, ಅವರ ದನಿಯನ್ನು ದೊಡ್ಡದಾಗಿಸಿದರು. ಶಾಲೆಗಳನ್ನು ಮುನ್ನಡೆಸಿದರು; ಯೂನಿವರ್ಸಿಟಿಗಳಲ್ಲಿ ಪಾಠ ಹೇಳಿದರು. ಹಲವಾರು ಗೌರವ ಡಾಕ್ಟರೆಟ್‌ಗಳನ್ನು ಪಡೆದರು.
ಎಲ್ಲರಿಗೂ ಆಶ್ಚರ್ಯವಾಗುವಂತೆ 1988ರಲ್ಲಿ ರಾಣಿ ಎರಡನೇ ಎಲಿಜಬೆತ್ ನೀಡಿದ್ದ ಗೌರವವನ್ನು ವಾಪಸ್ ಮಾಡಿದರು. ಆಗ ಅವರು ಹೇಳಿದ್ದು “ಎರಡು ಶತಮಾನಗಳ ಕಾಲದ ನಮ್ಮ ಜನರ ನೋವನ್ನು, ಸಾವನ್ನು, ಎಲ್ಲದರಿಂದ ವಂಚಿತರಾಗಿ ನಮ್ಮದೇ ನೆಲದಲ್ಲಿ ನಾವು ಪರದೇಶಿಗಳು, ಅನಾಥರೂ ಆದದ್ದನ್ನು ಈ ವರ್ಷ ನೆನಪಿಸುತ್ತದೆ. ಆಸ್ಟ್ರೇಲಿಯನ್ ಮತ್ತು ಬ್ರಿಟಿಷ್ ಸರಕಾರಗಳು ನಮ್ಮ ಅಬೊರಿಜನಲ್ ಜನರ ಎಲ್ಲ ಹಕ್ಕುಗಳನ್ನು ಅವರಿಗೆ ಕೊಟ್ಟು, ನಮ್ಮ ಪೂರ್ವಜರಿಂದ ಪಡೆದ ನೆಲವನ್ನು, ಅದರ ಹಕ್ಕನ್ನೂ ವಾಪಸ್ ಕೊಡಬೇಕು. ಅವರು ನಡೆಸಿದ ನರಮೇಧ, ಕೊಲೆಗಳು, ಸುಲಿಗೆ, ನಮ್ಮ ಭಾಷೆಗಳನ್ನು ಸಂಸ್ಕೃತಿಯನ್ನು ನಾಶಮಾಡಿದ್ದು ಎಲ್ಲವನ್ನೂ ಅವರು ಒಪ್ಪಿಕೊಳ್ಳಬೇಕು. ಹಿಂದೆ ನಾನು ಈ ಗೌರವವನ್ನು ಸ್ವೀಕರಿಸಿದಾಗ ಅದರಿಂದ ನಮ್ಮ ಜನರಿಗೆ ಮತ್ತಷ್ಟು ಧೈರ್ಯ, ಗುರುತಿಸುವಿಕೆ, ಪ್ರೋತ್ಸಾಹ ಸಿಗುತ್ತದೆ, ಅದರಿಂದ ಹಲವಾರು ಬಾಗಿಲುಗಳು ತೆರೆಯುತ್ತವೆ ಎಂದು ಭಾವಿಸಿದ್ದೆ. ಪರಿಸ್ಥಿತಿ ನಾನಂದುಕೊಂಡಂತೆ ಸುಧಾರಿಸಲಿಲ್ಲ, ಅವರು ಕ್ಷಮಾಪಣೆ ಕೇಳಿಲ್ಲ, ನಮ್ಮ ನೆಲವನ್ನು ಇನ್ನೂ ಕೊಟ್ಟಿಲ್ಲ. ಎಷ್ಟೋ ಸುಧಾರಣೆಗಳು ಇನ್ನೂ ಆಗಬೇಕಿವೆ’.
ಅದೇ ವರ್ಷ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡು ಊಡ್ಜರೂ ನೂನುಕ್ಕಲ್ ಆದರು. ತಮ್ಮ ಕುಲದ (ನೂನುಕ್ಕಲ್) ಹೆಸರನ್ನು ತಮ್ಮ ಕವನಗಳಂತೆಯೇ ಅಜರಾಮರಗೊಳಿಸಿದರು.
– ಡಾ| ವಿನತೆ ಶರ್ಮಾ, ಬ್ರಿಸ್ಬೇನ್