Advertisement
ಇನ್ನು ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ, ಜೀವನದಲ್ಲಿ ಯಾವುದು ಮುಖ್ಯ ಎಂದು ತಿಳಿಯದೇ ಪರದಾಡುವ ಯುವಜನರ ಮಾನಸಿಕ ತೊಳಲಾಟವನ್ನೇ ಕಥೆಯಾಗಿಟ್ಟುಕೊಂಡು ಒಂಟಿ ಬಂಟಿ ಲವ್ ಸ್ಟೋರಿ ಎಂಬ ಸಿನಿಮಾ ಮಾಡಿದ್ದಾರೆ. ಓದೋ ಕಾಲದಲ್ಲಿ ಲವ್, ಲವ್ ಮಾಡೋ ಕಾಲದಲ್ಲಿ ಉದ್ಯೋಗ, ಉದ್ಯೋಗ ಮಾಡುವಾಗ ಹಣ ಮುಖ್ಯನಾ? ಹೆಸರು ಮುಖ್ಯನಾ ಅಂತ ಪರ ದಾ ಡು ವು ದು ಇಂದಿನ ಜನರ ಮನಸ್ಥಿತಿಯಾಗಿದೆ. ಯುವಜನರ ಇಂತ ಗೊಂದಲಗಳನ್ನೆಲ್ಲ ರೊಮ್ಯಾಂಟಿಕ್ ಕಾಮಿಡಿ ಕಥೆ ಮಾಡಿ ಚಿತ್ರ ಮಾಡಿದ್ದಾರೆ ಯತೀಶ್ ಪನ್ನ ಸಮುದ್ರ. ಹೊಸಬರ ಪ್ರಯತ್ನವಾಗಿ ಮೆಚ್ಚಬಹುದು. ಜೀವನದಲ್ಲಿ ಸಾಧನೆ ಮುಖ್ಯ. ನಾವು ಸಾಧಿಸಿದರೆ ಬಯಸಿದ್ದೆಲ್ಲವನ್ನು ಪಡೆಯಬಹುದು ಎಂಬ ಒಂದು ಸಂದೇಶವೂ ಚಿತ್ರದಲ್ಲಿದೆ.
Advertisement
Onty Bunty Love Story: ಪ್ರೀತಿಯ ಹಿಂದೊಂದು ಸಾಧನೆಯ ಪಾಠ
02:36 PM Jan 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.