ನವ ದೆಹಲಿ : ಜೂನ್ 3 ರಂದು ವರ್ಷದ ಮುಂಗಾರು ಮಳೆ ಆರಮಭವಾಗುವ ಸಾಧ್ಯತೆ ಇದ್ದು, ಜೂನ್ 1 ರಂದು ಕೇರಳ ಕರಾವಳಿಯನ್ನು ಮುಂಗಾರು ತಲುಪುವ ಸಾಧ್ಯತೆ ಇದೆ ಎಂದು ತಿಳಿಸದೆ ಎಂದು ಹವಾಮಾನ ಇಲಾಖೆ (ಐಎಂಡಿ) ಇಂದು(ಭಾನುವಾರ, ಮೇ.30) ತಿಳಿಸಿದೆ.
ಇದನ್ನೂ ಓದಿ : ಆ ದಿನದವರೆಗೆ ಕೊಹ್ಲಿ ತಮ್ಮ ಮಗಳ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಲ್ವಂತೆ..!
“ಜೂನ್ 1 ರಿಂದ ಮುಂಗಾರು ಮಾರುತಗಳು ಕ್ರಮೇಣ ಜಾಸ್ತಿಯಾಗಿಲಿದ್ದು, ಇದರ ಪರಿಣಾಮವಾಗಿ ಕೇರಳದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಮುಂಗಾರು ಪ್ರಾರಂಭಕ್ಕೆ ನಾಳೆ ಕೇರಳದಲ್ಲಿ ಪ್ರತಿಕೂಲವಾದ ವಾತಾವರಣ ಸೃಷ್ಟಿಯಾಗಬಹುದು ಎಂದ ಹೇಳಿದ್ದು, ದಕ್ಷಿಣದಿಂದ ಬೀಸುವ ಬಲವಾದ ಗಾಳಿಯಿಂದ ದೆಹಲಿ ಸೇರಿ.. ಈಶಾನ್ಯ ರಾಜ್ಯಗಳಲ್ಲಿ ಬಾರಿ ಪ್ರಮಾನದಲ್ಲಿ ಮಳೆಯಾಗುವ ಸಾಧ್ಯತೆ ಇರುವುದಾಗಿಯೂ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ವರ್ಷ ವಾಡಿಕೆಯಂತೆ ಸಾಮಾನ್ಯ ಮುಂಗಾರು ಮಳೆ ಆಗಲಿದೆ ಎಂಬ ನಿರೀಕ್ಷೆ ಇರುವುದಾಗಿ ಕಳೆದ ತಿಂಗಳು ಹವಾಮಾನ ಇಲಾಖೆ ಹೇಳಿತ್ತು.
ಇದನ್ನೂ ಓದಿ : ಶಾಲೆ,ಕಾಲೇಜುಗಳ ಪಠ್ಯಕ್ರಮ : ವಿಪತ್ತು, ಸೋಂಕು ನಿರ್ವಹಣೆಯ ಪಾಠಗಳ ಸೇರ್ಪಡೆಗೆ ಒಡಿಶಾ ನಿರ್ಧಾರ