Advertisement

“ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಾದಾಗ ಮಾತ್ರ ದೇಶದ ಪ್ರಗತಿ’

12:23 AM Oct 01, 2019 | Sriram |

ಅಜೆಕಾರು: ನೀರೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಣಂಜಾರು ಗ್ರಾಮದ ಗುಡ್ಡೆಯಂಗಡಿ -ಕಣಂಜಾರು ರಸ್ತೆ ಅಭಿವೃದ್ಧಿ ಕಾಮಗಾರಿಯು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದ್ದು ಶಾಸಕ ಸುನೀಲ್‌ ಕುಮಾರ್‌ ಭೂಮಿಪೂಜೆಯನ್ನು ಸೆ. 29ರಂದು ನೆರವೇರಿಸಿದರು.

Advertisement

ಅನಂತರ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಈ ನಿಟ್ಟಿನಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು.

ಕಣಂಜಾರಿನಿಂದ ಪಳ್ಳಿ ವರೆಗೆಗಿನ 8 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಶೇಷ ಪ್ರಯತ್ನ ನಡೆಸಿ 8 ಕೋಟಿ ರೂ. ಅನುದಾನವನ್ನು ಶೀಘ್ರದಲ್ಲಿ ಮಂಜೂರು ಮಾಡಿಸುವ ಪ್ರಯತ್ನ ನಡೆಸಲಾಗುವುದು. ಮಾರ್ಚ್‌ ಅಂತ್ಯದೊಳಗಾಗಿ ಗುಡ್ಡೆಯಂಗಡಿ-ಕಣಂಜಾರು ರಸ್ತೆ ಲೋಕಾರ್ಪಣೆ ಹಾಗೂ ಕಣಂಜಾರು-ಪಳ್ಳಿ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆಯು ಒಂದೇ ದಿನ ನಡೆಸುವ ಸಂಕಲ್ಪ ಮಾಡಲಾಗಿದೆ ಎಂದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕಣಂಜಾರು ಲೂರ್ಡ್ಸ್‌ ಚರ್ಚ್‌ನ ಧರ್ಮಗುರು ವಂ| ಫಾ| ಅಲೆಕ್ಸಾಂಡರ್‌ ಲೂವಿಸ್‌ ನೆರವೇರಿಸಿ ಅಶೀರ್ವದಿಸಿದರು.

ಈ ಸಂದರ್ಭ ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ಜಿ.ಪಂ. ಸದಸ್ಯ ಸುಮಿತ್‌ ಶೆಟ್ಟಿ, ತಾ.ಪಂ. ಸದಸ್ಯೆ ವಿದ್ಯಾ ಎಂ. ಸಾಲ್ಯಾನ್‌, ನಿರ್ಮಲಾ, ನೀರೆ ಗ್ರಾ.ಪಂ. ಅಧ್ಯಕ್ಷ ಸದಾನಂದ ಪ್ರಭು, ಜಿ.ಪಂ. ಮಾಜಿ ಅಧ್ಯಕ್ಷೆ ಸವಿತಾ ಕೋಟ್ಯಾನ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೇಂದ್ರ ಒಕ್ಕೂಟ ಸಮಿತಿಯ ಅಧ್ಯಕ್ಷ ಅಬ್ದುಲ್‌ ಸಲಾಂ, ನವೀನ್‌ ಚಂದ್ರ ಹೆಗ್ಡೆ, ಡಾ| ಎಂ.ಬಿ. ಆಚಾರ್‌, ಕೃಷ್ಣ ಪ್ರಭು, ಸುಧೀರ್‌ ಹೆಗ್ಡೆ, ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್‌ ನಾಯಕ್‌, ಮುಂಬಯಿ ಉದ್ಯಮಿ ಉದಯ ಶೆಟ್ಟಿ ಉಪಸ್ಥಿತರಿದ್ದರು.

Advertisement

ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಮಂಜಿತ್ತಾಯ ಧಾರ್ಮಿಕ ಕಾರ್ಯ ನೆರವೇರಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುಧೀರ್‌ ಹೆಗ್ಡೆ ಗ್ರಾಮದ ಅಭಿವೃದ್ಧಿಯ ವಿವಿಧ ಕಾಮಗಾರಿಗಳ ಬೇಡಿಕೆಯ ಮನವಿಯನ್ನು ಸಲ್ಲಿಸಿದರು. ಕಾಮಗಾರಿ ಗುತ್ತಿಗೆದಾರರಾದ ಕಿಶೋರ್‌ ಕುಮಾರ್‌ ಗುರ್ಮೆ ಹಾಗೂ ಉದ್ಯಮಿ ರಾಮಕೃಷ್ಣ ಶೆಟ್ಟಿ ಬೊಟ್ಟ ಅವರನ್ನು ಗೌರವಿಸಲಾಯಿತು.

ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ವಿಜಯಾನಂದ ನಾಯಕ್‌, ನೀರೆ ಗ್ರಾ.ಪಂ. ಪಿಡಿಒ ಅಂಕಿತಾ ನಾಯಕ್‌, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತೀರ್ಥ ಹೆಗ್ಡೆ ಪ್ರಾರ್ಥನೆಗೈದರು. ವಿಕ್ರಂ ಹೆಗ್ಡೆ ಪ್ರಸ್ತಾವನೆಗೈದರು. ಶಿವಪ್ರಸಾದ್‌ ರಾವ್‌ ಸ್ವಾಗತಿಸಿದರು. ನೀರೆ ರವೀಂದ್ರ ನಾಯಕ್‌ ಕಾರ್ಯಕ್ರಮ ನಿರೂಪಿ ಸಿದರು. ಸಂಪತ್‌ ವಂದಿಸಿದರು.

ಮಾಲಿನ್ಯಕ್ಕೆ ಕಡಿವಾಣ
ನೂತನ ರಸ್ತೆಯ ಇಕ್ಕೆಲಗಳಲ್ಲಿ ರಸ್ತೆ ಮಾರ್ಜಿನ್‌ ಬಿಟ್ಟು ಗಿಡಗಳನ್ನು ನೆಡುವ ಮೂಲಕ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕುವ ಕಾರ್ಯ ನಡೆಸಬೇಕು. ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನದ ಅಂಗವಾಗಿ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ “ಗಾಂಧೀಜಿ 150 ಸ್ವಚ್ಛತೆಗೆ ಸ್ವಲ್ಪ ಹೊತು’ ಕಾರ್ಯಕ್ರಮದಲ್ಲಿ ಪ್ರತಿಯೋರ್ವರು ಪಾಲ್ಗೊಳ್ಳುವಂತೆ ಶಾಸಕರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next