Advertisement

“ಕಲೆಯ ಆಸಕ್ತಿ ಇರುವವ  ಮಾತ್ರ ಆಸ್ವಾದಿಸಬಲ್ಲ’

12:30 AM Jan 18, 2019 | |

ವಿದ್ಯಾನಗರ: ಕಲೆಯ ಬಗ್ಗೆ ಆಸಕ್ತಿ ಹಾಗೂ ಕುತೂಹಲ ಇರುವ ಸಹೃದಯನಿಗೆ  ಮಾತ್ರ ರಸಾಸ್ವಾದನೆ ಸಾಧ್ಯ. ಕಲೆಯನ್ನು ವೀಕ್ಷಿಸುವ ಒಳಗಿನ ಕಣ್ಣು ಜಾಗೃತವಾದಾಗಲೇ ಕಲೆ ನಮ್ಮನ್ನು ಹೆಚ್ಚು ತಿಳಿಯುವಂತೆ ಮಾಡುತ್ತದೆ ಎಂದು ವಿದ್ವಾಂಸ ಡಾ| ಎಂ. ಪ್ರಭಾಕರ ಜೋಷಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಕಣ್ಣೂರು ವಿಶ್ವವಿದ್ಯಾನಿಲಯದ ಭಾರ ತೀಯ ಭಾಷಾ ಅಧ್ಯಯನಾಂಗ ಹಾಗೂ ಕಾಸರ ಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಚಾಲಾ ಕೇಂದ್ರದಲ್ಲಿ ನಡೆದ “ಯಕ್ಷಗಾನ ರಸಾಸ್ವಾದನೆ ಮತ್ತು ಪುಸ್ತಕ ವಿಮರ್ಶೆ’ ಕಾರ್ಯಕ್ರಮದಲ್ಲಿ ಅವರು “ಯಕ್ಷಗಾನ ರಸಾಸ್ವಾದನೆ’ ಎಂಬ ವಿಷಯದಲ್ಲಿ ವಿಶೇಷೋಪನ್ಯಾಸ ನೀಡಿ ಮಾತನಾಡಿದರು.

ಪ್ರತಿಯೊಂದು ಕಲೆಯಲ್ಲೂ ಅಭಿವ್ಯಕ್ತಿ ವಿಧಾನಗಳು ವಿಭಿನ್ನವಾಗಿರುತ್ತವೆ. ಅದೇ ರೀತಿಯಲ್ಲಿ ರಸ, ಧ್ವನಿ, ಅಲಂಕಾರ. ಅಭಿನಯ ಇನ್ನಿತ್ಯಾಇತ್ಯಾದಿಗಳಲ್ಲೂ ವ್ಯತ್ಯಾಸಗಳಿರುತ್ತವೆ. ಆಸ್ವಾದನೆಯ ರೀತಿಯೂ ಕಲೆಯಿಂದ ಕಲೆಗೆ ವಿಭಿನ್ನವಾಗಿರುತ್ತದೆ. ಒಂದು ಕಲೆಯನ್ನು ಅರ್ಥಮಾಡುವುದೆಂದರೆ ಆ ಕಲೆಯ ಘಟನೆಗಳನ್ನು ಅರ್ಥಮಾಡುವು ದೆಂದರ್ಥಎಂದರು.

ಪುತ್ತೂರು ಅಂಬಿಕಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪರೀಕ್ಷಿತ್‌ ತೋಳ್ಪಾಡಿ ಅವರು ಡಾ| ಸುಂದರ ಕೇನಾಜೆ ಬರೆದ “ಜೋಶಿ ಆಳ ಮನದಾಳ’ ಎಂಬ ಕೃತಿಯ ಕುರಿತು ಮಾತನಾಡಿ, ವ್ಯಕ್ತಿಯ ಪರಿಚಯಾತ್ಮಕ ವಿವರಗಳನ್ನು  ನೀಸಿ ಯಕ್ಷಗಾನದ ಹಲವು ಚಿಂತನೆಗಳನ್ನು ಪಡಿಮೂಡಿಸುವುದರಲ್ಲಿ ಕೃತಿ ಯಶಸ್ವಿಯಾಗಿದೆ. ಬುದ್ಧಿ ಭಾವಗಳ ಸಮತೋಲನವನ್ನು ಕೇನಾಜೆಯವರು ಕೃತಿಯಲ್ಲಿ ಕಾಯ್ದುಕೊಂಡಿದ್ದಾರೆ ಎಂದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾ ಟಿಸಿದ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲ   ಡಾ| ಅರವಿಂದ ಕೃಷ್ಣನ್‌ ಮಾತನಾಡಿದರು. ಕಣ್ಣೂರು ವಿಶ್ವವಿದ್ಯಾ ನಿಲಯದ ಸಿಂಡಿಕೇಟ್‌ ಸದಸ್ಯ ರಾಜು ಎಂ.ಸಿ, ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್‌. ಮುಖ್ಯ ಅತಿಥಿಗಳಾಗಿ ಭಾಗ ವಹಿಸಿ ದ್ದರು. ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ನಿರ್ದೇಶಕ ಡಾ| ರಾಜೇಶ್‌ ಬೆಜ್ಜಂಗಳ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿ ಮಾತನಾಡಿದರು. ಡಾ| ಸುಂದರ ಕೇನಾಜೆ, ಮೈಸೂರಿನ ಎಂ.ಸಿ. ಮನೋಹರ್‌ ಈ ಮುಂತಾದವರು ಮಾತನಾಡಿದರು.

Advertisement

ಸಂಶೋಧನ ಕೇಂದ್ರದ ಸಂಯೋಜನಾಧಿ ಕಾರಿ ಡಾ| ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ವಕ್ತಾರೆ ಸವಿತಾ ಬಿ. ವಂದಿಸಿದರು. ಪ್ರದೀಪ್‌ ಬಿ.ಎಸ್‌, ಸುಜಿತ್‌ ಉಪ್ಪಳ ಕಾರ್ಯಕ್ರಮ ನಿರೂಪಿಸಿದರು. ಬಿಎಡ್‌, ಎಂ.ಎ, ಎಂಫಿಲ್‌, ಪಿಎಚ್‌ಡಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next