ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
Advertisement
ಶನಿವಾರ, ಶ್ರೀಶೈಲ ಮಠದಲ್ಲಿ ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 32ನೇ, ಶ್ರೀ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 7ನೇ ವರ್ಷದ ಸ್ಮರಣೋತ್ಸವ ಹಾಗೂ ಜನ ಜಾಗೃತಿ ಧರ್ಮ ಸಮ್ಮೇಳನ ಉದ್ಘಾಟಿಸಿ, ಮಾತನಾಡಿದ ಅವರು, ಲಿಂ. ವಾಗೀಶ ಪಂಡಿರಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಈ ಹಿಂದೆಯೇ ಸಮಾಜದ ಜನರನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದ್ದಾರೆ.
Related Articles
ಶರಣರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
Advertisement
ಮನುಷ್ಯ ಧಾರ್ಮಿಕ ನಂಬಿಕೆಗಳನ್ನು ಎಂದಿಗೂ ಕಳೆದುಕೊಳ್ಳಬಾರದು. ವೀರಶೈವ ಧರ್ಮದ ಪ್ರತಿಯೊಂದು ಆಚರಣೆಯ ನಂಬಿಕೆ ಹಿಂದೆ ಒಂದೊಂದು ವೈಜ್ಞಾನಿಕ ಕಾರಣವಿದೆ. ಅದನ್ನು ತಜ್ಞರಿಂದ ತಿಳಿದುಕೊಳ್ಳಬೇಕೆ ವಿನಃ ಆಚರಣೆಗಳನ್ನು ಅನುಮಾನಸ್ಪದವಾಗಿ ಅವಲೋಕಿಸಬಾರದು ಎಂದು ಹೇಳಿದರು.
ಭಗವ್ದಗೀತೆಯ ಉಕ್ತಿಯಂತೆ ಯಾವಾಗಲೂ ಎಲ್ಲವನ್ನೂ ಸಂಶಯದಿಂದ ನೋಡುವ ವ್ಯಕ್ತಿ ವಿನಾಶ ಆಗುತ್ತಾನೆ. ಹಾಗಾಗಿ ಯಾವುದೇ ವಿಷಯದ ಬಗ್ಗೆ ಆಗಲಿ ವೈಜ್ಞಾನಿಕವಾಗಿ ವಿಮರ್ಶೆ ಮಾಡಿಕೊಂಡು ವೀರಶೈವ ಆಚರಣೆಗಳ ಮಹತ್ವ ಅರಿತು ಪೂರ್ವಜರು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ಸ್ಮರಣೊತ್ಸವಗಳು ಕೇವಲ ಪೂರ್ವಜರ ವೈಭವೀಕರಣಕ್ಕೆ ಸೀಮಿತವಾಗದೇ ಸಮಾಜದ ಸರ್ವತೋಮುಖ ವಿಕಾಸಕ್ಕೆ ಪ್ರೇರಣೆ ಆಗಬೇಕು ಎಂಬ ಉದ್ದೇಶದಿಂದ ಇಂತಹ ಜನಜಾಗೃತಿ ಸಮ್ಮೇಳನ ಆಯೋಜಿಸಿದ್ದು. ಇದರ ಸದುಪಯೋಗವನ್ನು ಸರ್ವರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಗಣ್ಯರಿಗೆ ಗುರು ರಕ್ಷೆ ನೀಡಲಾಯಿತು. ಬಿದರೆಕೆರೆ ಗುರುಸಿದ್ದೇಶ್ವರ ಮಠದ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಜಡೇಸಿದ್ದ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಬೇಬಿಮಠದ ಡಾ| ತ್ರಿನೇತ್ರ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅಂಬಿಕಾನಗರದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿದ್ದರು. ನ್ಯಾಯವಾದಿ ರೇವಣ್ಣ ಬಳ್ಳಾರಿ ಉಪನ್ಯಾಸ ನೀಡಿದರು. ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎಂ. ಮುರುಗೇಶ್, ದಾವಣಗೆರೆ ವಿವಿ ಪ್ರಾಧ್ಯಾಪಕ ವೀರಭದ್ರಪ್ಪ, ವಕೀಲ ತ್ಯಾವಣಿಗೆ ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು.
ಎಸ್.ಜಿ. ವಾಗೀಶ್ವರಯ್ಯ ಸ್ವಾಗತಿಸಿದರು. ಸೌಭಾಗ್ಯ ಎಸ್. ಹಿರೇಮಠ್… ನಿರೂಪಿಸಿದರು. ಅಜ್ಜಂಪುರಶೆಟ್ರಾ ಮೃತ್ಯುಂಜಯ್ಯ ವಂದಿಸಿದರು.