Advertisement

ಭಾರತ ಮಾತ್ರವೇ ನಿಮಗೆ ಬೇಕಾದ್ದನ್ನು ನೀಡಬಲ್ಲುದು: ಮೆಹಬೂಬ ಮುಫ್ತಿ

07:04 PM Jan 10, 2018 | udayavani editorial |

ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರ ಮುಖ್ಯಮಂತ್ರಿ  ಮೆಹಬೂಬ ಮುಫ್ತಿ ಅವರು ರಾಜ್ಯದ ಜನತೆಗೆ ಒಂದು ಸಂದೇಶ ನೀಡಿದ್ದಾರೆ. ರಾಜ್ಯ ವಿಧಾನ ಸಭೆಯಲ್ಲಿ ಮಾತನಾಡುತ್ತಾ ಅವರು, “ಜಮ್ಮು ಕಾಶ್ಮೀರದ ಜನರಿಗೆ ಏನು ಬೇಕೋ ಅದನ್ನು ಭಾರತ ಮಾತ್ರವೇ ನೀಡಬಲ್ಲುದು; ಹೊರತು ಬೇರೆ ಯಾವ ದೇಶವೂ ಅಲ್ಲ’ ಎಂದು ಹೇಳಿದರು.

Advertisement

“ನಮಗೆ ಜಮ್ಮು ಕಾಶ್ಮೀರದ ಸಂವಿಧಾನದ ಮೇಲೆ, ದೇಶದ ಸಂವಿಧಾನದ ಮೇಲೆ ನಂಬಿಕೆ ಇಲ್ಲವೆಂದಾದರೆ ಬೇರೆ ಯಾವುದರಲ್ಲಿ ನಂಬಿಕೆ ಇರಬಲ್ಲುದು ? ಹಾಗಿರುವಾಗ ನಮಗೆ ಸಿಗುವುದಾದರೂ ಏನು ? ನಮಗೆ ಬೇಕಾದದ್ದು ಬೇರೆ ಎಲ್ಲಿಂದ ಸಿಗಬೇಕು?’ ಎಂದು ಮೆಹಬೂಬ ಮುಫ್ತಿ ಪ್ರಶ್ನಿಸಿದರು.

ಭಾರತದಿಂದಲ್ಲದೆ ಬೇರೆ ಯಾವ ದೇಶದಿಂದಲೂ ನಮಗೆ ಬೇಕಾದದ್ದು ಸಿಗುವುದಿಲ್ಲ ಎಂಬುದನ್ನು ನಾವು ಎಂದೂ ಮರೆಯಬಾರದು ಎಂದು ಮೆಹಬೂಬ ರಾಜ್ಯದ ಜನರಿಗೆ ಹೇಳಿದರು. 

ಭಾರತ ಮತ್ತು ಪಾಕಿಸ್ಥಾನದ ನಾಯಕರು ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ದ್ವೇಷವನ್ನು ತೊರೆದು ಮತ್ತೆ ಮಿತ್ರರಾಗಬೇಕು; ಸ್ಥಳೀಯ ಕಾಶ್ಮೀರಿಗಳಿಗಾಗಿ ಮತ್ತು ಗಡಿಯಲ್ಲಿನ ಜವಾನರಿಗಾಗಿ ಉಭಯ ದೇಶಗಳು ಮತ್ತೆ ಸ್ನೇಹಿತರಾಗಬೇಕು ಎಂದು ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್‌ ಪ್ರಧಾನಿಯಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ’ ಎಂದು ಮೆಹಬೂಬ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next