Advertisement

ಎಚ್ಚರಿಕೆಯ ಹೆಜ್ಜೆ: ಸೋಮವಾರದಿಂದ ಹೈಸ್ಕೂಲ್ ಮಾತ್ರ ಆರಂಭ

07:33 PM Feb 10, 2022 | Team Udayavani |

ಬೆಂಗಳೂರು : ಹಿಜಾಬ್ ವಿವಾದ ಸಂಘರ್ಷ ತೀವ್ರ ಸ್ವರೂಪ ಪಡೆದಿರುವ ಹಿನ್ನಲೆಯಲ್ಲಿ ಸರಕಾರ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದ್ದು, ಗುರುವಾರ ಸಂಜೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸೋಮವಾರ ಫೆ. 14 ರಿಂದ 10  ನೇ ತರಗತಿಯವರೆಗೆ ಮಾತ್ರ ಶಾಲೆಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದ್ದಾರೆ.

Advertisement

ಒಂದೆಡೆ ಹೈಕೋರ್ಟ್ ವಿಸ್ತ್ರತ ಪೀಠ ರಾಜ್ಯದ ಶಾಲಾ ಕಾಲೇಜುಗಳ ಹಿಜಾಬ್- ಕೇಸರಿ ಶಾಲು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡು. ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಸೋಮವಾರಕ್ಕೆ ವಿಚಾರಣೆ ಮುಂದೂಡಿ, ಶಿಕ್ಷಣ ಸಂಸ್ಥೆಗಳು ತಕ್ಷಣ ಕಾರ್ಯಾರಂಭ ಮಾಡಲಿ. ಅರ್ಜಿಗಳ ವಿಚಾರಣೆ ಮುಗಿಯುವವರೆಗೆ ಯಾರೊಬ್ಬರೂ ಯಾವುದೇ ಧಾರ್ಮಿಕ ಗುರುತುಗಳನ್ನು (ಹಿಜಾಬ್ ಮತ್ತು ಶಾಲು) ಬಳಸುವಂತಿಲ್ಲ ಎಂದು ಸೂಚಿಸಿದೆ.

ಕೋರ್ಟ್ ಆದೇಶ ಬರುವ ವರೆಗೆ ಶಾಂತಿ ಸುವ್ಯವಸ್ಥೆಗೆ ಭಂಗ ಬರಬಾರದೆಂಬ ಉದ್ದೇಶದಲ್ಲಿ ಸರಕಾರ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ.

ಇದನ್ನೂ ಓದಿ :ಹಿಜಾಬ್ ವಿವಾದ: ವಿಚಾರಣೆ ಮುಗಿಯುವವರೆಗೆ ಧಾರ್ಮಿಕ ಗುರುತು ಬಳಸುವಂತಿಲ್ಲ; HC ಮಧ್ಯಂತರ ಆದೇಶ

ಮುಖ್ಯಮಂತ್ರಿಗಳು , ಶಾಲೆಗಳ ಡ್ರೆಸ್ ಕೋಡ್ ಬಗ್ಗೆ ವಿವಾದ ಆಗಿತ್ತು, ಹೈಕೋರ್ಟ್ ಮೆಟ್ಟಿಲು ಏರಿತ್ತು . ಎರಡು ಕಡೆ ಬಿಸಿ ಇತ್ತು. ನ್ಯಾಯಾಲಯದಲ್ಲಿ ಏನಾದರೂ ನಾವು ಗೌರವ ನೀಡಬೇಕು. ಮಕ್ಕಳಲ್ಲಿ ಗೊಂದಲ ಕಡಿಮೆ ಆಗಿದೆ. ಹೊರಗಡೆಯವರ ಪ್ರಚೋದನೆ ಇದೆ ಅದು ಕೂಡ ಕಡಿಮೆ ಆಗಬೇಕು.  ಸಂಯಮದಿಂದ ವರ್ತಿಸುತ್ತಿದ್ದಾರೆ ಅವರಿಗೆ ನನ್ನ ಧನ್ಯವಾದಗಳು. ಹೈಕೋರ್ಟ್ ನ್ಯಾಯಾಧೀಶರ ಮುಂದೆ ಶಾಂತಿ ಕಾಪಾಡಬೇಕು ಎಂದು ಪ್ರಸ್ತಾಪ ಆಗಿದೆ. ಹಾಗೆ ಯಾವುದೇ ಧಾರ್ಮಿಕ ಡ್ರೆಸ್ ಕೋಡ್ ಹಾಕಬಾರ್ದು ಎಂದು ಆಗಿದೆ. ಶಾಲೆ, ಕಾಲೇಜು ಆವರಣದಲ್ಲಿ ಒಗ್ಗಟ್ಟು ಶಾಂತಿ ಇರಬೇಕು. ಲಾ ಆಂಡ್ ಆಡರ್ ಎಲ್ಲಾ ನಮ್ಮ ಜವಾಬ್ದಾರಿ ಇದೆ. ಪೊಲೀಸ್ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದೇವೆ ಎಂದರು.

Advertisement

ಎರಡನೇ ಹಂತದಲ್ಲಿ ಪಿಯುಸಿ ಆರಂಭ ಮಾಡಲಾಗುತ್ತದೆ. ಎಜುಕೇಶನ್ ಡಿಪಾರ್ಟ್ಮೆಂಟ್ ಗಳ ಸಭೆ ಬೆಳಗ್ಗೆ ಮಾಡುತ್ತೇನೆ. ನಾಳೆ ಸಂಜೆ ಜಿಲ್ಲಾಧಿಕಾರಿಗಳ ಜೊತೆಗೆ ವೀಡಿಯೋ ಕಾನ್ಫರೆನ್ಸ್ ಮಾಡುತ್ತೇನೆ. ನಂತರ ಪ್ರಕಟಣೆ ಹೊರಡಿಸುತ್ತೇವೆ ಎಂದಿದ್ದಾರೆ.

ಮಹತ್ವದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪರಿಸ್ಥಿಟಿ ನೋಡಿ ಕಾಲೇಜು ಗಳನ್ನು ತೆರೆಯುವ ನಿರ್ಧಾರ ಮಾಡುತ್ತೇವೆ. ಈ ಬಗ್ಗೆ ನಾಳೆ ಸಭೆ ನಡೆಸಿ ನಿರ್ಧಾರ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ಹಿಜಾಬ್ ವಿವಾದ ಸಂಘರ್ಷಕ್ಕೆ ತಿರುಗಿದ ಹಿನ್ನಲೆಯಲ್ಲಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಶುಕ್ರವಾರ ಸಂಜೆ ಮಂತ್ರಿಗಳು, ಡಿಸಿ, ಎಸ್ ಪಿ ಮತ್ತು ಶಿಕ್ಷಣ ಅಧಿಕಾರಿಗಳ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next