Advertisement

ಬಿಜೆಪಿ ಸರಕಾರದಿಂದ ಮಾತ್ರಅಭಿವೃದ್ಧಿ ಸಾಧ್ಯ: ನಾಗರತ್ನಾ

05:28 PM Feb 02, 2018 | Team Udayavani |

ಸೈದಾಪುರ: ಗುರಮಠಕಲ್‌ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರೇ ಆಡಳಿತ ನಡೆಸಿದರೂ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಗಮನ ಹರಿಸಿಲ್ಲ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಶಾಸಕರು ವಿಫಲವಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಅವರು ಇಲ್ಲಿಗೆ ಸಮೀಪದ ಪಸಪುಲ್‌ ಗ್ರಾಮದಲ್ಲಿ ಭೂತ ಸಶಕ್ತೀಕರಣ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೇಂದ್ರದಲ್ಲಿ ಮೋದಿ ಅವರು ಪ್ರಧಾನ ಮಂತ್ರಿಗಳಾದ ಮೇಲೆ ದೇಶದ ಚಿತ್ರಣವೇ ಬದಲಾಗಿದೆ. ಅಂತಾರಾಷ್ಟೀಯ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಾಗುವುದರ ಜೊತೆಗೆ ದೇಶದಲ್ಲಿ ಆರ್ಥಿಕ ಸ್ಥಿತಿ ಉನ್ನತ ಮಟ್ಟಕ್ಕೆ ಸಾಗಿದೆ ಎಂದರು.

ಕೇಂದ್ರ ಸರಕಾರದ ಉಜ್ವಲ ಯೋಜನೆ, ಮುದ್ರಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ವಿಮಾ ಯೋಜನೆ ಸೇರಿದಂತೆ ಹೀಗೆ ವಿವಿಧ ಯೋಜನೆಗಳನ್ನು ಬಡಜನರಿಗಾಗಿ ಅಸ್ಥಿತ್ವಕ್ಕೆ ತಂದಿದ್ದೂ. ಕಾರ್ಯಕರ್ತರು ಸಾಮಾನ್ಯ ಜನರಿಗೆ ಮುಟ್ಟಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪಸಫುಲ್‌ ಸೇರಿದಂತೆ ಮಗ್ಧಂಪುರ ತಾಂಡಾದ ಹಲವು ಯುವಕರು, ಮಹಿಳೆಯರು ಪಕ್ಷಕ್ಕೆ ಸೇರ್ಪಡೆಗೊಂಡರು. ತಾಪಂ ಸದಸ್ಯ ಚಂದು ಜಾಧವ್‌, ಶಕ್ತಿ ಕೇಂದ್ರದ ಅಧ್ಯಕ್ಷ ಗಂಗಪ್ಪ, ಗುರುರಾಜ ಕುಲಕರ್ಣಿ, ಅನಂತಯ್ಯ, ಕಲ್ಪನಾ ಜೈನ, ಸಿದ್ದು ಗಣಪೂರ, ವಿಜಯ ಮಗ್ಧಂಪುರ, ಹಣಮಂತ ರಾಠೊಡ, ಶರಣಗೌಡ. ಸಿದ್ದು ಪಾಟಿಲ್‌, ರಮೇಶ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next