Advertisement

ಜಂಬೂಸವಾರಿಗೆ 2 ಸಾವಿರ ಮಂದಿಗಷ್ಟೇ ಅವಕಾಶ

03:38 PM Sep 28, 2020 | Suhan S |

ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆಯನ್ನು ಈ ಬಾರಿ ಅರಮನೆ ಆವರಣದಲ್ಲಿ ‌ಡೆಸಲು ಉದ್ದೇಶಿಸಿದ್ದು, ಎರಡು ಸಾವಿರ ‌ ಜನರ ವೀಕ್ಷಣೆಗಷ್ಟೇ ಸೀಮಿತಗೊಳಿಸಲು ನಿರ್ಧರಿಸಲಾಗಿದೆ.

Advertisement

ಸಿದ್ದಾರ್ಥ ‌ನಗ ರದ ಜಿಲ್ಲಾಧಿಕಾರಿ ಕ‌ಚೇರಿ ಸಮುಚ್ಛಯದಲ್ಲಿ ಭಾನುವಾರ ದಸರಾ ಸಿದ್ಧತೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ‌ ಎಸ್‌.ಟಿ. ಸೋಮಶೇಖರ್‌ ಅಧ್ಯಕ್ಷತೆಯಲ್ಲಿ  ನ‌ಡೆದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ತೀರ್ಮಾಸಲಾಯಿತು. ಕೋವಿಡ್ ಸೋಂಕು ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾವನ್ನು ಈಗಾಗಲೇ ಅತ್ಯಂತ ಸರಳವಾಗಿ ಚಾಮುಂಡಿಬೆಟ್ಟದಲ್ಲಿ ಉದ್ಘಾಟನೆ, ಅರಮನೆ ಆವರಣದಲ್ಲಿ ಜಂಬೂಸವಾರಿಗೆ ಸೀಮಿತಗೊಳಿಸಲಾಗಿದೆ. ಉದ್ಘಾಟನೆ ದಿನ 250 ಜನರು, ಜಂಬೂಸವಾರಿಗೆ 2 ಸಾವಿರ ‌ ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ನಿರ್ಣಯಿಸಲಾಯಿತು.

ದ‌ಸರಾ ಸಂದರ್ಭದಲ್ಲಿ ಅರಮನೆ ಮುಂಭಾಗ ಆಯೋಜಿಸುವ ‌ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಒಂದು ಸಾವಿರ ‌ ಜನರಿಗೆ ಮಾತ್ರ ಅವಕಾಶ ‌ ನೀಡಬೇಕು. ಈ ಪ್ರಸ್ತಾವನೆಯನ್ನು ಕೆಂದದ್ರ ಸರ್ಕಾರಕ್ಕೆ ಕಳುಹಿಸಿ ಅನುಮತಿ ಪ‌ಡೆಯಬೇಕು. ಕೇಂದ್ರ ‌ಸರ್ಕಾರದ ಮಾರ್ಗಸೂಚಿ ಕೈ ಸೇರಿದ ‌ ನಂತರ ‌ ಈ ಬಗ್ಗೆ ಸ್ಪಷ್ಟ ತೀರ್ಮಾನ ‌ ಆಗಬೇಕು ಎಂದು ತೀರ್ಮಾನಿಸಲಾಯಿತು. ಸ್ಥಳೀಯ ಕಲಾವಿದ‌ರಿಗೂ ಅವಕಾಶ: ಸ್ಥಳೀಯ ಕಲಾವಿದರೂ ಅವಕಾಶ ಕೋರಿ ಮನವಿ ಪತ್ರ ನೀಡಿದ್ದಾ ರೆ. ಅರಮನೆ ಆವರಣದೊಳಗೆ ನ‌ಡೆಯುವ ದಸರಾ ಸಾಂಸ್ಕೃತಿಕ ‌ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದ‌ರಿಗೂ ಅವಕಾಶ ‌ ಸಿಗುವಂತೆ ಕಾರ್ಯಕ್ರಮ ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ‌ ಎಸ್‌.ಟಿ.ಸೋಮಶೇಖರ್‌ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಭೆಯಲ್ಲಿ ಶಾಸಕರಾದ ‌ಎಸ್‌ .ಎ.ರಾಮದಾಸ್‌, ಎಲ್‌.ನಾಗೇಂದ್ರ, ಜಿಲ್ಲಾಧಿಕಾರಿಬಿ. ಶರತ್‌, ನಗರ ಪೊಲೀಸ್‌ ಕಮೀಷನರ್‌ ಡಾ. ಚಂದ್ರಗುಪ್ತ, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿಸಿ.ಬಿ.ರಿಷ್ಯಂತ್‌, ಜಿಪಂ ಸಿಇಒ ಡಿ. ಭಾರತಿ, ನಗರಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಅಪರ ಜಿಲ್ಲಾಧಿಕಾರಿ ಬಿ.ಎಸ್‌. ಮಂಜುನಾಥಸ್ವಾಮಿ ಇತರರಿದ್ದರು.

ಸ್ತಬ್ಧ ಚಿತ್ರಗಳಿಗೆ ಅವಕಾಶ :  ಈ ಬಾರಿ ದಸರಾದಲ್ಲಿ ಸ್ತಬ್ಧ ಚಿತ್ರಗಳಿಗೆ ಅವಕಾಶ ನೀಡಲಾಗುತ್ತಿದೆ.ಕೋವಿಡ್‌ಜಾಗೃತಿ,ಕೇಂದ್ರಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಸ್ಮರಣಾರ್ಥವಾಗಿ ಅವರ ಹೆಸರಿನಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಒಂದು ಕಾರ್ಯಕ್ರಮ ಸೇರಿಸಬೇಕೆಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು.

Advertisement

ಟೆಸ್ಟ್‌ಗೊಳಗಾದ ಕಲಾವಿದರಿಗೆ ಮಾತ್ರ ಅನುಮತಿ :  ಜಂಬೂ ಸವಾರಿಗೆ ಭಾಗವಹಿಸುವ ಕಲಾವಿದರಿಗೂ ಐದು ದಿನ ಮುಂಚಿತವಾಗಿ ಕೋವಿಡ್‌ ಟೆಸ್ಟ್‌ ಮಾಡಲಾಗುವುದು. ಟೆಸ್ಟ್‌ ಗೊಳಗಾದಕಲಾವಿದರಿಗೆ ಮಾತ್ರ ಅವಕಾಶ ನೀಡಲಾಗುವುದು. ದಸರಾ ಪರಂಪರೆಯಾಗಿ ಮುಂದುರಿಸಿಕೊಂಡು ಬಂದಿದ್ದು, ಸಾಂಸ್ಕೃತಿಕಕಾರ್ಯಕ್ರಮಗಳನ್ನು ಅದಕ್ಕೆ ತಕ್ಕಂತೆ ರೂಪಿಸಬೇಕು. ಈ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next