Advertisement
ಕಲೆ, ಭಾಷೆ, ಕಲಾವಿದರಿಗೆ ಒತ್ತುದೇಶದ ಹಲವು ರಾಜ್ಯಗಳಲ್ಲಿ ನೆಲೆಸಿರುವ ಖ್ಯಾತ ಹಿರಿಯ, ಕಿರಿಯ ಕಲಾವಿದರ ಸಂಗಮದ ಮೂಲಕ ನಿರ್ದಿಷ್ಟ ವಿಷಯದ ಬಗ್ಗೆ ಅಭಿನಯಿಸುವ ಮೂಲಕ ರಂಗಕಲಿಕೆಯ ವಿವಿಧ ಮಗ್ಗುಲಲ್ಲಿ ಕಲಿಕೆ ನಡೆಯುತ್ತಿದೆ. ಒಂದೆಡೆ ತರಬೇತಿ, ಇನ್ನೊಂದೆಡೆ ವಿವಿಧ ರಾಜ್ಯಗಳ ಕಲಾವಿದರ ಸಂಗಮ, ಜತೆಗೆ ಬಹುಭಾಷಾ ಕೃತಿಗಳ, ಪೌರಾಣಿಕ, ಐತಿಹಾಸಿಕ ಕೃತಿಗಳ ಸಮನ್ವಯ ಕೆಲಸವಾದರೆ, ಎಲ್ಲರ ಅಭಿನಯವನ್ನು ಒಟ್ಟುಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ರಂಗಕಲಾಭಿಮಾನಿಗಳಿಗೆ ದೃಶ್ಯ ಚಿತ್ತಾರವನ್ನು ಉಣಬಡಿಸುವ ಕೆಲಸ ಸಾಗುತ್ತಿದೆ.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ “ಹೀಗೊಂದು ರಂಗ ಕಲಿಕೆಯ’ ಈಗಾಗಲೇ ಒಟ್ಟು ಮೂರು ಸಂಚಿಕೆಯನ್ನು ಹೊರ ತಂದಿದೆ. ಜೀವನ್ ರಾಂ ಸುಳ್ಯ ಮಾತುಗಾರಿಕೆ, ಅಭಿನಯ ವಿಷಯವಾಗಿ, ಮಂಡ್ಯ ರಮೇಶ್ ಹಾಸ್ಯರಸ, ಕಾಸರಗೋಡು ಚಿನ್ನಾ ಕರುಣಾ ರಸಗಳ ಬಗ್ಗೆ ತಿಳಿಸಿದ್ದಾರೆ. ಜಿಲ್ಲೆ, ದೇಶದ ವಿವಿಧ ರಾಜ್ಯದ 100ಕ್ಕೂ ಹೆಚ್ಚು ಕಲಾವಿದರು ಈಗಾಗಲೇ ಈ ತರಬೇತಿಯಲ್ಲಿ ಪಾಲ್ಗೊಂಡಿದ್ದು ಆ ಮೂಲಕ ರಂಗಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿನೂತನ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಮಯ ಸದುಪಯೋಗ
ನಿರ್ದಿಷ್ಟ ಉದ್ದೇಶ ಮತ್ತು ಈ ಲಾಕ್‌ಡೌನ್‌ನ ಸಮಯವನ್ನು ಸದುಪಯೋಗದ ದೃಷ್ಟಿಯಿಂದ ಆರಂಭಿಸಿದ ರಂಗ ಕಲೆಗೆ ಉತ್ತಮ ಸ್ಪಂದನೆ ದೊರೆತಿದೆ. ಆ ಮೂಲಕ ರಂಗ ಕಲೆಯಲ್ಲಿ ಪ್ರಥಮ ಎಂಬಂತೆ ಈ ಪ್ರಯೋಗ ಸಾಗಿದ್ದು ಮುಂದಿನ ಸಂಚಿಕೆಯಲ್ಲಿ ಡಾ| ಶ್ರೀಪಾದ್ ಭಟ್ ಶಿರಸಿ ಪಾಲ್ಗೊಂಡು ರಂಗಕಲಿಕೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಸಂಸ್ಕೃತಿ ವಿಶ್ವ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋಗಳು ಲಭ್ಯವಿವೆ.
-ರವಿರಾಜ್ ಎಚ್.ಪಿ., ಸಂಚಾಲಕರು, ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ