Advertisement

ಉಪ ಚುನಾವಣೆಗೆ ಆನ್‌ಲೈನ್‌ ಸ್ಪರ್ಶ

11:23 AM Sep 30, 2020 | Suhan S |

ಬೆಂಗಳೂರು: ಕೋವಿಡ್ ಸೋಂಕು ಭೀತಿ ಇರುವ ಹಿನ್ನೆಲೆಯಲ್ಲಿ ಒಂದು ಮತಗಟ್ಟೆಗೆ ಒಂದು ಸಾವಿರ ಜನ ಮಾತ್ರ ಮತದಾನ ಮಾಡಬಹುದಾಗಿದೆ. ಹೀಗಾಗಿ, ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಹಾಗೂ ಚುನಾವಣಾಧಿಕಾರಿ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

Advertisement

ರಾಜರಾಜೇಶ್ವರಿ ನಗರ ಉಪ ಚುನಾವಣೆ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು, ಆರ್‌.ಆರ್‌ ನಗರದಲ್ಲಿ 381 ಮತಗಟ್ಟೆಗಳಿವೆ. ಇದರಲ್ಲಿ 307 ಮತಗಟ್ಟೆಗಳಲ್ಲಿ ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಕೋವಿಡ್ ಭೀತಿಹಿನ್ನೆಲೆಯಲ್ಲಿಕೇಂದ್ರ ಚುನಾವಣಾ ಆಯೋಗವು ಈ ಬಾರಿ ಕೆಲವು ನಿರ್ದಿಷ್ಟ ಸೂಚನೆಗಳನ್ನು ನೀಡಿದೆ.

ಪ್ರತಿ ಮತಗಟ್ಟೆಗೂ ಒಂದು ಸಾವಿರ ಮತದಾರರು ಮಾತ್ರ ಮತದಾನ ಮಾಡಬಹುದು ಎಂದು ನಿರ್ಬಂಧ ಹೇರಿದೆ. ಹೀಗಾಗಿ, ಈ ಭಾಗದಲ್ಲಿ ಹೆಚ್ಚು ಮತದಾರರು ಇರುವ ಮತಗಟ್ಟೆಗಳಿಗೆ ಅನುಗುಣವಾಗಿ ಮತಗಟ್ಟೆ ಸಂಖ್ಯೆ ಹೆಚ್ಚಿಸಲಾಗುವುದು ಒಟ್ಟು 688 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಸಾಧ್ಯವಾದಷ್ಟು ಸ್ಥಳಾವಕಾಶವಿರುವ ಮತಗಟ್ಟೆ ನಿರ್ಮಿಸುವುದಕ್ಕೆ ಸೂಚನೆ ನೀಡಲಾಗಿದೆ. ಕೊರೊನಾ ತಡೆಗೆ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲು ಒಬ್ಬ ಆರೋಗ್ಯ ಅಧಿಕಾರಿ ನೇಮಕ ಹಾಗೂ ಮತದಾನದ ವೇಳೆ ಪ್ರತಿಯೊಬ್ಬ ಮತದಾರರಿಗೆ ಥರ್ಮಲ್‌ ಸ್ಕ್ಯಾನಿಂಗ್‌, ಗ್ಲೌಸ್‌ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ನಾಮಪತ್ರ ಸಲ್ಲಿಕೆ ಇಬ್ಬರಿಗೆ ಅವಕಾಶ: ಕೋವಿಡ್‌ ಭೀತಿಯಿಂದಾಗಿ ಈ ಬಾರಿ ಅಭ್ಯರ್ಥಿಯೊಂದಿಗೆ ನಾಮ ಪತ್ರ ಸಲ್ಲಿಸಲು ಇಬ್ಬರಿಗೆ ಮಾತ್ರ ಅವಕಾಶವಿದೆ. ಈ ಹಿಂದೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಐದು ಜನರಿಗೆ ಅವಕಾಶ ನೀಡಲಾಗುತ್ತಿತ್ತು. ಸಾರ್ವಜನಿಕ ಸಭೆ, ಪ್ರಚಾರ ಕಾರ್ಯಗಳಿಗೆ ನಿರ್ಬಂಧವಿಧಿಸಲಾಗಿದೆ. ಸಾರ್ವಜನಿಕ ಸಭೆಗೆ ಅನುಮತಿ ಪಡೆಯಬೇಕು ಎಂದರು. ಆನ್‌ಲೈನ್‌ನಲ್ಲಿ ನಾಮಪತ್ರ: ಅಭ್ಯರ್ಥಿಗಳು ನಾಮಪತ್ರ,ಪ್ರಮಾಣ ಪತ್ರ (ಅಫಿಡವಿಟ್‌) ಹಾಗೂ ಠೇವಣಿ ಮೊತ್ತವನ್ನು ಆನ್‌ಲೈನ್‌ನಲ್ಲಿಯೇ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಅಫಿಡವಿಟ್‌ ಅನ್ನು ನೋಡಲ್‌ ಅಧಿಕಾರಿಗಳಿಗೆ ನೇರವಾಗಿ ಸಲ್ಲಿಕೆ ಮಾಡಬೇಕು ಎಂದರು.

ಪ್ರತಿ ಮತಗಟ್ಟೆಯಲ್ಲಿ ಸಹಾಯ ಕೇಂದ್ರ ಸ್ಥಾಪಿಸಲಾಗುವುದು. ಮತದಾನದ ವೇಳೆ ಜನದಟ್ಟಣೆ ಉಂಟಾದರೆ ಟೋಕನ್‌ ವ್ಯವಸ್ಥೆ ಕಲ್ಪಿಸಲಾಗುವುದು. ಟೋಕನ್‌ ಪಡೆದವರಿಗೆ ಹಾಗೂ ಥರ್ಮಲ್‌ ಸ್ಕ್ಯಾನಿಂಗ್‌ನಲ್ಲಿ ಉಷ್ಣಾಂಶ ಹೆಚ್ಚು ಕಂಡು ಬಂದ ಮತದಾರರಿಗೆ ಮತದಾನ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು.ಚುನಾವಣಾಕಾರ್ಯಕ್ಕೆಮತಗಟ್ಟೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು10 ಸಾವಿರ ಮಂದಿ ಬೇಕಾಗಲಿದೆ. ಅವರಿಗೆ ಮಾಸ್ಕ್, ಗ್ಲೌಸ್‌, ಫೇಸ್‌ ಶೀಲ್ಡ್‌, ಸ್ಯಾನಿಟೈಸರ್‌ ನೀಡಲಾಗುವುದು ಎಂದರು.

Advertisement

ಸೋಂಕಿತರಿಗೆ ಅಂಚೆ ಮತದಾನಕ್ಕೆ ಅವಕಾಶ : ಆರ್‌.ಆರ್‌ ನಗರ ವ್ಯಾಪ್ತಿ ಕೋವಿಡ್ ದೃಢಪಟ್ಟಿರುವ,ಕ್ಯಾರಂಟೈನ್‌ನಲ್ಲಿರುವ, ಸೋಂಕಿನ ಲಕ್ಷ ಇರುವ, ಪ್ರಥಮ, ದ್ವಿತೀಯ ಸಂಪರ್ಕಿತ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ ಹಿರಿಯ ಮತದಾರರಿಗೆಈಬಾರಿ ಫೋಸ್ಟಲ್‌ ಬ್ಯಾಲೆಟ್‌ (ಅಂಚೆ ಮತದಾನಕ್ಕೆ) ಮೊದಲ ಬಾರಿಗೆ ಅವಕಾಶ ನೀಡಲಾಗುತ್ತಿದೆ. ಈ ಹಿಂದೆ ಚುನಾವಣಾ ಕಾರ್ಯದಲ್ಲಿ ಭಾಗಿಯಾಗುತ್ತಿದ್ದ ಅಧಿಕಾರಿ ಹಾಗೂ ಸಿಬ್ಬಂದಿಗೆ ಮಾತ್ರ ಈ ಆಯ್ಕೆ ಇತ್ತು. ಮತದಾನಕ್ಕೆ ಅಗತ್ಯ ಮುಂಜಾಗ್ರತಾಕ್ರಮಗಳ ಜತೆಗೆ ಮತಗಟ್ಟೆ ಬೂತ್‌ ಒಳಗೆ ಒಬ್ಬ ಮತದಾರರಿಗೆ ಮಾತ್ರ ಅವಕಾಶ. ಪ್ರತಿ ಮತದಾರರಿಗೆ ಸಹಿ ಮತ್ತು ಇವಿಎಂನಲ್ಲಿ ಮತದಾನ ಮಾಡುವಾಗ ಗ್ಲೌಸ್‌ ಬಳಕೆಕಡ್ಡಾಯವಾಗಿದೆ. ಮರು ಬಳಕೆಯ ಗ್ಲೌಸ್‌ ವ್ಯವಸ್ಥೆಯನ್ನು ಮತಗಟ್ಟೆಯಲ್ಲಿ ಮಾಡಲಾಗುವುದು. ಸಾಮಾಜಿಕ ಅಂತರಕ್ಕೆ ಆರು ಅಡಿ ದೂರಕ್ಕೆ ವೃತ್ತಾಕಾರದ ಗುರುತು ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next