Advertisement

ಕೆಲವೆಡೆ ನಾಳೆಯಿಂದ ಆನ್‌ಲೈನ್‌ ಬೋಧನೆ!

08:39 PM Jan 04, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸಹಿತ ವಿವಿಧ ಭಾಗಗಳ ಕೆಲವು ಖಾಸಗಿ ಶಾಲೆಗಳು ಶುಕ್ರವಾರದಿಂದಲೇ (ಜ.6) ಆನ್‌ಲೈನ್‌ ತರಗತಿಗಳನ್ನು ನಡೆಸಲು ನಿರ್ಧರಿಸಿದ್ದು, ಮಕ್ಕಳು ಮತ್ತು ವಿದ್ಯಾರ್ಥಿಗಳು ಶಾಲೆಗೆ ಬಾರದಂತೆ ಸೂಚನೆ ನೀಡಿವೆ.

Advertisement

ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ ಶಾಲೆಗಳನ್ನು ಆನ್‌ಲೈನ್‌/ಆಫ್ ಲೈನ್‌ ಸೇರಿ ಎರಡರಲ್ಲಿ ಶಾಲೆಗಳಿಗೆ ಅನುಕೂಲವಾಗುವುದರಲ್ಲಿ ತರಗತಿಗಳನ್ನು ನಡೆಸಲು ಸರಕಾರ ಈಗಾಗಲೇ ಅವಕಾಶ ನೀಡಿದೆ. ಆದ್ದರಿಂದ ಹೊಸದಾಗಿ ನಿಯಮ ರೂಪಿಸಬೇಕಾಗಿಲ್ಲ ಎಂದು ಖಾಸಗಿ ಶಾಲಾ ಶಿಕ್ಷಕರೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಶಿಕ್ಷಕರ ವಿರೋಧ
ಶಾಲಾ ಕೊಠಡಿಗಳಲ್ಲಿ ಮಕ್ಕಳೊಂದಿಗೆ ಮಾತನಾಡಿಕೊಂಡು ಬೋಧಿಸುವಂತೆ ಮನೆಯಿಂದ ಪಾಠ-ಪ್ರವಚನಗಳನ್ನು ಮಾಡಲು ಸಾಧ್ಯವಿಲ್ಲ. ಎಲ್ಲ ಮನೆಗಳಲ್ಲಿ ಬೋಧನಾ ವಾತಾವರಣ ಇರುವುದಿಲ್ಲ. ಬೆಂಗಳೂರಿನಂತಹ ಮಹಾನಗರದಲ್ಲಿ ಚಿಕ್ಕ-ಪುಟ್ಟ ಮನೆಗಳಲ್ಲಿ ಶಿಕ್ಷಕರು ನೆಲೆಸಿರುತ್ತಾರೆ. ಕುಟುಂಬದೊಂದಿಗೆ ನೆಲೆಸಿರುವುದರಿಂದ ಹಿರಿಯರು- ಮಕ್ಕಳು ಇರುತ್ತಾರೆ. ತಮಗಾಗಿ ಎಲ್ಲರೂ ಪ್ರಶಾಂತವಾಗಿ ಕುಳಿತುಕೊಳ್ಳಬೇಕಾಗುತ್ತದೆ. ಬೇರೆ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಶಾಲೆಯಿಂದಲೇ ಪಾಠ ಮಾಡಲು ಅನುಕೂಲ ಕಲ್ಪಿಸಬೇಕು ಒಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಒಮಿಕ್ರಾನ್‌ ಹೆಚ್ಚಳ; ಅಧಿಕಾರಿಗಳೊಂದಿಗೆ ಶಾಸಕರ ಸಭೆ

ಇದರ ಜತೆಗೆ ಮನೆಯಿಂದ ಆನ್‌ಲೈನ್‌ ಪಾಠ ಮಾಡುವ ವೇಳೆ ಬೋಧನೆ ಜತೆಗೆ ವೀಡಿಯೋಗಳ ಎಡಿಟಿಂಗ್‌ ಸಹಿತ ಹಲವು ತಾಂತ್ರಿಕ ಕೆಲಸಗಳು ಇರುತ್ತವೆ. ಎಲ್ಲ ಶಿಕ್ಷಕರು ತಾಂತ್ರಿಕವಾಗಿ ಕೌಶಲ ಹೊಂದಿರುವುದಿಲ್ಲ. ಆದ್ದರಿಂದ ಆಫ್ಲೈನ್‌ನಲ್ಲಿಯೇ ಭೌತಿಕ ತರಗತಿಗಳನ್ನು ನಡೆಸಬೇಕು ಎಂಬುದು ಶಿಕ್ಷಕರ ಆಗ್ರಹವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next