Advertisement

ಅಮೆಜಾನ್, ಫ್ಲಿಪ್ ಕಾರ್ಟ್, ಮಿಂತ್ರಾ, ಅಜಿಯೋ ಡಾಟ್ ಕಾಮ್ ಗಳಲ್ಲಿ ಭರ್ಜರಿ ಆಫರ್ ಸೇಲ್ 

05:26 PM Jul 01, 2021 | |

ವಿಶ್ವದ ಪ್ರಮುಖ ಇ ಕಾಮರ್ಸ್ ಕಂಪೆನಿಗಳಾದ ಅಮೆಜಾನ್, ಫ್ಲಿಪ್ ಕಾರ್ಟ್, ಮಿಂತ್ರಾ ಹಾಗೂ ಅಜಿಯೋ ಡಾಮ್ ಕಾಮ್ ತನ್ನ ಗ್ರಾಹಕರಿಗೆ ಮಾನ್ಸೂನ್ ವಿಶೇಷ ಆಫರ್ ನೊಂದಿಗೆ ಈ ತಿಂಗಳಲ್ಲಿ ಭರ್ಜರಿ ಮಾರಾಟ ಆಯೋಜಿಸಿಕೊಂಡಿವೆ. ಆ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Advertisement

ಅಮೆಜಾನ್ ಸ್ಮಾಲ್ ಬಿಸ್ ನೆಸ್ ಡೆಸ್ ಸೇಲ್

ಜಗತ್ತಿನ ದೈತ್ಯ ಇ-ಕಾಮರ್ಸ್ ಕಂಪನಿ ಅಮೆಜಾನ್‌ ನ ಭಾರತೀಯ ಘಟಕವಾದ ಅಮೆಜಾನ್ ಇಂಡಿಯಾ ತನ್ನ ಗ್ರಾಹಕ ಸ್ನೇಹಿ ವಿಶೇಷ ಆಫರ್ ಗಳನ್ನು ನೀಡುತ್ತಿರುತ್ತದೆ. ಮತ್ತೊಮ್ಮೆ ಅಮೆಜಾನ್ ಜುಲೈನಲ್ಲಿ ಬಂಪರ್ ಸೇಲ್ ತರುತ್ತಿದೆ. ಹೌದು,ಅಮೆಜಾನ್ ಇಂಡಿಯಾ ನಾಳೆಯಿಂದ ಜುಲೈ 2 ರಿಂದ ಜುಲೈ 4, ರವರೆಗೆ ಸ್ಮಾಲ್ ಬಿಸ್ ನೆಸ್ ಡೆಸ್ ಸೇಲ್ ನಡೆಸುತ್ತಿದ್ದು, ಎಲ್ಲಾ ವಸ್ತುಗಳ ಮೇಲೆ ಭರ್ಜರಿ ಆಫರ್ ನಲ್ಲಿ ಮಾರಾಟ ನಡೆಯಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಫ್ಲಿಪ್ ಕಾರ್ಟ್ ಮೊಬೈಲ್ಸ್ ಸೇಲ್

ದೇಶದ ಪ್ರಮುಖ ಇ-ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ ಇಂದಿನಿಂದ(ಜುಲೈ 1 ರಿಂದ) ಜುಲೈ 3, 2021 ರ ತನಕ ಫ್ಲಿಪ್‌ ಕಾರ್ಟ್ ಸೂಪರ್ ಸೇವರ್ ಡೇಸ್ ಸೇಲ್ ನನ್ನು ನಡೆಸುತ್ತಿದೆ ಮಾತ್ರವಲ್ಲದೇ,  ಜುಲೈ 11 ರಂದು ಫ್ಲಿಪ್ ಕಾರ್ಟ್ ಮೊಬೈಲ್ಸ್ ಸೇಲ್ ಲೈವ್ ಆರಂಭಿಸುತ್ತಿದ್ದು ಕಂಪನಿಯು ಭರ್ಜರಿ ಆಫರ್ ನೊಂದಿಗೆ ಮೊಬೈಲ್ ಸೇಲ್ ಮಾಡುತ್ತಿದೆ ಎಂದು ಮಾಹಿತಿ ನೀಡಿದೆ.

Advertisement

ಮಿಂತ್ರಾ ಡಾಟ್ ಕಾಮ್ ಫ್ಯಾಶನ್ ಸೇಲ್

ಫ್ಯಾಷನ್‌ನಲ್ಲಿ ಆಸಕ್ತಿ ಹೊಂದಿರುವವರಿಗೆ, ಮಿಂತ್ರಾ ಬಂಪರ್ ಸೇಲ್ ತರುತ್ತಿದೆ. ಮಾರಾಟದೊಂದಿಗೆ ಮಿಂತ್ರಾ ಡಾಟ್ ಕಾಮ್ ಫ್ಯಾಶನ್ ಉತ್ಪನ್ನಗಳನ್ನು ಮಾರಾಟ ಮಾಡುವ ಆನ್‌ ಲೈನ್ ಸೈಟ್ ಆಗಿದೆ. ಜುಲೈ 3 ರಿಂದ 8 ರವರೆಗೆ ಎಂಡ್ ಆಫ್ ರೀಜನ್ ಸೇಲ್ ನಡೆಸುತ್ತಿದೆ. ಇದರಲ್ಲಿ ನೀವು 50 ರಿಂದ 80 ಪ್ರತಿಶತದಷ್ಟು ರಿಯಾಯಿತಿ ದರದಲ್ಲಿ ಶಾಪಿಂಗ್ ಮಾಡಲು ಸಾಧ್ಯವಾಗುತ್ತದೆ. ಎಚ್‌ ಡಿ ಎಫ್‌ ಸಿ ಬ್ಯಾಂಕ್ ಕಾರ್ಡ್‌ ಗಳಲ್ಲಿ ಶೇಕಡಾ 12 ರಷ್ಟು ರಿಯಾಯಿತಿ ಕೂಡಾ ಸಿಗಲಿದೆ ಎಂದು ಮಿಂತ್ರಾ ಹೇಳಿಕೊಂಡಿದೆ.

ಅಜಿಯೊ ಬಿಗ್ ಬೋಲ್ಡ್ ಸೇಲ್

ಸ್ಟೈಲಿಶ್ ಡ್ರೆಸ್ ಮತ್ತು ಫುಟ್ ವೇರ್ ಗಳಿಗಾಗಿಯೇ ಹೆಸರುವಾಸಿಯಾಗಿರುವ ಅಜಿಯೋ ಡಾಟ್ ಕಾಮ್ ಕೂಡಾ ಈ ತಿಂಗಳಲ್ಲಿ ಆಫರ್ ಸೇಲ್ ನಡೆಸಲಿದೆ.  ಅಜಿಯೊ ಬಿಗ್ ಬೋಲ್ಡ್ ಸೇಲ್ ಇಂದಿನಿಂದ (ಜುಲೈ 1 ರಿಂದ) ಜುಲೈ 5 ರವರೆಗೆ ಅಜಿಯೋ ಡಾಟ್ ಕಾಮ್ ನಲ್ಲಿ ನಡೆಯಲಿದೆ. ಫ್ಯಾಶನ್ ಬ್ರಾಂಡ್‌ ಗಳು 50 ರಿಂದ 90 ಪ್ರತಿಶತದಷ್ಟು ರಿಯಾಯಿತಿ ದರದಲ್ಲಿ ಸಿಗಲಿದೆ.

ಇದನ್ನೂ ಓದಿ : ಲಂಕಾ ವಿರುದ್ದದ ಅಂತಿಮ ಪಂದ್ಯಕ್ಕೆ ಇಂಗ್ಲೆಂಡ್ ತಂಡಕ್ಕೆ ಟಾಮ್ ಬ್ಯಾಂಟನ್ ಸೇರ್ಪಡೆ

Advertisement

Udayavani is now on Telegram. Click here to join our channel and stay updated with the latest news.

Next