Advertisement

ಆನ್‌ಲೈನ್‌ ನೋಂದಣಿ-ವರ್ಗಾವಣೆ: ಶಿಕ್ಷಕರು ಹೈರಾಣ

06:25 AM Jun 23, 2018 | |

ಬಳ್ಳಾರಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಹೊಸ ಆದೇಶವೊಂದು ಮುಖ್ಯ ಶಿಕ್ಷಕರು ಹಾಗೂ ಉಳಿದ ಶಿಕ್ಷಕರ ಪಾಲಿಗೆ ತಲೆನೋವಾಗಿ ಪರಿಣಮಿಸಿ ದೆ. ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿ ಇಲಾಖೆ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳ ನೋಂದಣಿ ಹಾಗೂ ಶಾಲೆಗಳಿಂದ ಬೇರೆಡೆಗೆ ತೆರಳುವ ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರ (ಟಿಸಿ)ಗಳನ್ನು ಆನ್‌ ಲೈನ್‌ ಮೂಲಕವೇ ರವಾನಿಸ  ಬೇಕೆಂದು ಆದೇಶ ಹೊರಡಿಸಿದೆ.

Advertisement

ಶಿಕ್ಷಣ ಇಲಾಖೆ ಇದಕ್ಕಾಗಿ ಎಸ್‌ ಟಿಎಸ್‌ (ಸ್ಟುಡೆಂಟ್‌ ಅಚೀವ್‌ಮೆಂಟ್‌ ಟ್ರಾಕಿಂಗ್‌ ಸಿಸ್ಟಮ್‌) ಎಂಬ ವೆಬ್‌ಸೈಟ್‌
ಸಿದ್ಧಪಡಿಸಲಾಗಿದೆ. ಆದರೆ ರಾಜ್ಯದ ಎಲ್ಲ ಕಿರಿಯ ಹಾಗೂ ಹಿರಿಯ ಪ್ರಾಥ ಮಿಕ ಶಾಲೆಗಳಲ್ಲಿ ಕಂಪ್ಯೂಟರ್‌ ಇಲ್ಲದಿರುವುದು, ವೆಬ್‌ಸೈಟ್‌ ಸಹ ಸದಾ ಬ್ಯುಸಿಯಾಗಿರುವುದರಿಂದ ಸಮಸ್ಯೆಗಳು ಎದುರಾಗಿವೆ.

ಪ್ರಸಕ್ತ ವರ್ಷದಿಂದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳ ದಾಖಲಾತಿ ಪತ್ರ ಈ ವೆಬ್‌ಸೈಟ್‌ಗೆ ಅಪ್‌ ಲೋಡ್‌ ಮಾಡಬೇಕಿದೆ. ಅಲ್ಲದೆ 8ನೇ ತರಗತಿಯಲ್ಲಿ ಉತ್ತೀರ್ಣರಾಗಿ ವ್ಯಾಸಂಗ ಮುಂದುವರಿಸಲು ಬೇರೆ ಶಾಲೆಗೆ ಸೇರುವ ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರವನ್ನೂ ಎಸ್‌ಟಿಎಸ್‌ ವೆಬ್‌ಸೈಟ್‌ ಮೂಲಕ ರವಾನಿ ಸಬೇಕಾಗಿದೆ. ಸರಕಾರಿ ಶಾಲೆಗಳಲ್ಲಿ ಕಂಪ್ಯೂಟರ್‌ ಇಲ್ಲದಿರುವುದು,ಇದ್ದರೂ ಅದನ್ನು ಬಳಸುವ ನುರಿತ ಶಿಕ್ಷಕರಿಲ್ಲದ್ದ ರಿಂದ ಖಾಸಗಿ ಇಂಟರ್‌ ನೆಟ್‌ ಕೇಂದ್ರಗಳನ್ನೇ ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ.

ಎಸ್‌ಟಿಎಸ್‌ ವೆಬ್‌ಸೈಟ್‌ಗೆ ರಾಜ್ಯಾದ್ಯಂತ ಒಂದೇ ಸರ್ವರ್‌ ಸಿದಟಛಿಪಡಿಸಲಾಗಿದೆ. ಜೂನ್‌ನಲ್ಲಿ ಶಾಲೆಗಳಿಗೆ ದಾಖಲಾಗುವ ಹಾಗೂ ಶಾಲೆ ಯಿಂದ ಬೇರೆಡೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕವಾಗಿರುತ್ತದೆ. ಹೀಗಾಗಿ
ಸರ್ವರ್‌ ಸದಾ ಬ್ಯುಸಿಯಾಗಿದ್ದು ದಾಖಲೆ ಅಪ್‌ ಲೋಡ್‌ ಮಾಡೋದೇ ತಲೆನೋವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ಇಲ್ಲಗಳದ್ದೇ ಕಾರುಬಾರು: ಈ ಹೊಸ ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಅದನ್ನು ಸಮರ್ಪಕವಾಗಿ ನಿಭಾಯಿಸಲು ಬೇಕಾದ ಅಗತ್ಯ ಕಂಪ್ಯೂಟರ್‌ ಮತ್ತದರ ಜ್ಞಾನವುಳ್ಳ ಶಿಕ್ಷಕರನ್ನು ನಿಯೋಜಿಸುವುದನ್ನು
ಮರೆತಿದೆ.

Advertisement

ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಶಾಲೆಗಳಿಗೆ ಸ್ಥಳೀಯ ದಾನಿಗಳು ಕಂಪ್ಯೂಟರ್‌ ದೇಣಿಗೆ ನೀಡಿದ್ದರೂ, ಅದಕ್ಕೆ ಅಂತರ್ಜಾಲ ಸಂಪರ್ಕವಿಲ್ಲ.ಹೀಗಾಗಿ ವಿದ್ಯಾರ್ಥಿಗಳನ್ನು ಆನ್‌ಲೈನ್‌ ನೋಂದಣಿ ಮಾಡಿ ಸಲು ಮುಖ್ಯ ಶಿಕ್ಷಕರಿಗೆ ತಮ್ಮ ಸ್ವಂತ ಖರ್ಚಿನಲ್ಲೇ ಖಾಸಗಿ ಅಂತರ್ಜಾಲ ಕೇಂದ್ರಗಳಿಗೆ ಹೋಗುವುದು ಅನಿವಾರ್ಯವಾಗಿದೆ.

ವಿಶೇಷ ಅನುದಾನವಿಲ್ಲ: ಕಿರಿಯ ಪ್ರಾಥಮಿಕ ಶಾಲೆ (1-5)ಗೆ ವರ್ಷಕ್ಕೆ 6 ಸಾವಿರ ರೂ.ಶಾಲಾ ಅನುದಾನ, 5 ಸಾವಿರ ರೂ. ನಿರ್ವಹಣೆ,ದುರಸ್ತಿ ಅನುದಾನ ನೀಡಲಾಗುತ್ತದೆ. ಅದೇ ರೀತಿ ಹಿರಿಯ ಪ್ರಾಥಮಿಕ (6-8) ಶಾಲೆಗಳಿಗೆ ವರ್ಷಕ್ಕೆ 12 ಸಾವಿರ ರೂ. ಶಾಲಾ ಅನುದಾನ, 10 ಸಾವಿರ ರೂ. ಅನುದಾನ ನೀಡಲಾಗುತ್ತದೆ. ಇದನ್ನು ಹೊರತು ಪಡಿಸಿ, ವಿಶೇಷ ಅನುದಾನಗಳನ್ನು ನೀಡುತ್ತಿಲ್ಲ.

ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಯೋಜನೆ ಜಾರಿಗೆ ತಂದಿದೆ. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಾಗ ಆರಂಭದಲ್ಲಿ ಒಂದಷ್ಟು ಸಮಸ್ಯೆ ಎದುರಾಗುವುದು ಸಹಜ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವ್ಯವಸ್ಥೆ ಕಲ್ಪಿಸಿ ಕಾರ್ಯ ಕೈಗೊಳ್ಳಲಾಗುವುದು.
– ಶ್ರೀಧರನ್‌, ಉಪನಿರ್ದೇಶಕರು,
ಸಾರ್ವಜನಿಕ ಶಿಕ್ಷಣ ಇಲಾಖೆ, ಬಳ್ಳಾರಿ

– ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next