Advertisement

ಎಜ್ಯುಟೆಕ್‌ ಕಂಪನಿಗಳ ಆನ್‌ಲೈನ್‌ ಪಿಎಚ್‌.ಡಿಗೆ ಮಾನ್ಯತೆ ಇಲ್ಲ

07:00 PM Oct 28, 2022 | Team Udayavani |

ನವದೆಹಲಿ: ವಿದೇಶಿ ವಿವಿಗಳ ಸಹಭಾಗಿತ್ವದಲ್ಲಿ ಆನ್‌ಲೈನ್‌ ಮೂಲಕ ಎಜ್ಯುಟೆಕ್‌ ಕಂಪನಿಗಳು ನೀಡುವಂಥ ಪಿಎಚ್‌.ಡಿಗೆ ಮಾನ್ಯತೆ ಇಲ್ಲ. ಹೀಗೆಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ (ಎಐಸಿಟಿಇ) ಹಾಗೂ ಯುಜಿಸಿ ಶುಕ್ರವಾರ ಸ್ಪಷ್ಟಪಡಿಸಿವೆ. ಇದು ಪ್ರಸಕ್ತ ವರ್ಷ ಇವುಗಳು ಎರಡನೇ ಬಾರಿಗೆ ನೀಡುತ್ತಿರುವ ಎಚ್ಚರಿಕೆಯಾಗಿದೆ.

Advertisement

ಪಿಎಚ್‌.ಡಿ, ಎಂ.ಫಿಲ್‌ ಪದವಿಗೆ ಸಂಬಂಧಿಸಿದಂತೆ 2016ರಲ್ಲಿ ಹೊರಡಿಸಲಾಗಿರುವ ನಿಯಮಗಳ ಪ್ರಕಾರ, ನಿರ್ದಿಷ್ಟ ಮಾನದಂಡಗಳು ಇವೆ. ಅದನ್ನು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಪಾಲಿಸಲೇಬೇಕು ಎಂದು ಯುಜಿಸಿ ಮತ್ತು ಎಐಸಿಟಿಇ ಹೇಳಿವೆ.

ಎಜ್ಯುಟೆಕ್‌ ಕಂಪನಿಗಳು ಆನ್‌ಲೈನ್‌ ಮೂಲಕ ಪಿಎಚ್‌.ಡಿ ನೀಡುತ್ತೇವೆ ಎಂದು ಹೇಳುವ ಜಾಹೀರಾತುಗಳಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ದೂರ ಇರಬೇಕು. ಅಂಥ ಸಂಸ್ಥೆಗಳು ನೀಡುವ ಮಾಹಿತಿಯನ್ನು ಖಚಿತಪಡಿಸಿಕೊಂಡ ಬಳಿಕವೇ ಪ್ರವೇಶ ಪಡೆದುಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿವೆ.

ಕೇಂದ್ರ ಸರ್ಕಾರ ಇಂತಹ ಸೇವೆ ನೀಡುವ ಕಂಪನಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿಯೂ ಕ್ರಮಗಳನ್ನು ಕೈಗೊಳ್ಳಲು ಚಿಂತನೆ ನಡೆಸುತ್ತಿದೆ. ಅದಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯ, ಕಾನೂನು ಸಚಿವಾಲಯದ ಜತೆಗೆ ಚರ್ಚೆಗಳನ್ನು ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next