Advertisement
ಎರಡು ಭಾರತೀಯ-ಅಮೆರಿಕನ್ ಸಂಸ್ಥೆಗಳು ಇದಕ್ಕೆ ಸಂಬಂಧಿಸಿದ ಆನ್‌ಲೈನ್ ಅರ್ಜಿಯೊಂದನ್ನು ರೂಪಿಸಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಕೋರಿಕೆ ಸಲ್ಲಿಸಲು ಮುಂದಾಗಿವೆ. ಈ ಕೋರಿಕೆಯನ್ನು ಬೈಡೆನ್ ಅವರೇನಾದರೂ ಒಪ್ಪಿದರೆ, ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿರುವ ಭಾರತೀಯರಿಗೆ (ಎಚ್1ಬಿ ವೀಸಾ ಹೊಂದಿರುವವರು) ಹೊಸ ಉದ್ಯೋಗ ಹುಡುಕಲು 1 ವರ್ಷ ಕಾಲಾವಕಾಶ ಸಿಗಲಿದೆ. ಪ್ರಸ್ತುತ ಇರುವ ನಿಯಮದಂತೆ, ಒಮ್ಮೆ ಕೆಲಸ ಹೋದರೆ ಅವರ ವೀಸಾದ ಅವಧಿ 60 ದಿನಗಳಲ್ಲಿ ಮುಗಿಯುವ ಕಾರಣ, ಅಂಥವರು ದೇಶ ಬಿಟ್ಟು ಹೋಗಬೇಕಾಗುತ್ತದೆ. 2023 ಜನವರಿ ವರೆಗೆ 91 ಸಾವಿರ ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಲೇಆಫ್ ಟ್ರ್ಯಾಕರ್ ಡಾಟ್ ಕಾಮ್ ವರದಿ ಮಾಡಿದೆ.
Advertisement
ಎಚ್-1ಬಿ ವೀಸಾ ಗ್ರೇಸ್ ಅವಧಿ ಹೆಚ್ಚಳಕ್ಕೆ ಮನವಿ
07:12 PM Feb 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.