Advertisement

ಗಮನ ಸೆಳೆಯಲು ಆನ್‌ಲೈನ್‌ ಚಳವಳಿ

08:34 AM Jul 15, 2020 | Suhan S |

ದೇವನಹಳ್ಳಿ: ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮಾಂತರ ಜಿಲ್ಲೆಯ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ಹೋರಾಟ ಸಮಿತಿ ಜಿಲ್ಲಾ ಕಾರ್ಯದರ್ಶಿ ಜಯಣ್ಣ ನೇತೃತ್ವದಲ್ಲಿ ಸರಕಾರದ ಗಮನ ಸೆಳೆಯಲು ಆನ್‌ಲೈನ್‌ ಭಿತ್ತಿಪತ್ರ ಚಳವಳಿ ನಡೆಸಿದರು.

Advertisement

ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ಜಿಲ್ಲಾ ವ್ಯವಸ್ಥಾಪಕಿ ರಮ್ಯಾ ಮಾತನಾಡಿ, ಮತ್ತೂಬ್ಬ ಮಹಿಳಾ ಉಪನ್ಯಾಸಕಿ ಕ್ಯಾನ್ಸರ್‌ ನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹಲವರು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಸಾಕಷ್ಟು ಜನ ಶಿಕ್ಷಕರು ಮತ್ತು ಉಪನ್ಯಾಸಕರು ಹೇಳಲಾಗದ ನೋವು ಒಳಗೊಳಗೆ ಅನುಭವಿಸುತ್ತ, ಮಾನಸಿಕವಾಗಿ ಜರ್ಜರಿತವಾಗಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಕುಗ್ಗಿಹೋಗಿದ್ದಾರೆ. ಕಳೆದ 3-4 ತಿಂಗಳಿನಿಂದ ಸಂಸಾರ ನಡೆಸಲಾಗದೇ ಎಷ್ಟೋ ಜನರು ಅನಿವಾರ್ಯವಾಗಿ ಬೇರೆ ಕೆಲಸ ಹುಡುಕಿಕೊಂಡಿದ್ದಾರೆ. ಎಷ್ಟೇ ಕಷ್ಟ ಬಂದರೂ ನುಂಗಿಕೊಂಡು ತಮ್ಮ ಸೇವೆ ಒದಗಿಸಿದ್ದಾರೆ. ನೆಟ್‌, ಸೆಟ್‌, ಪಿಎಚ್‌ಡಿ ಇನ್ನಿತರ ಎಲ್ಲ ಅರ್ಹತೆ ಪಡೆದರೂ ಈಗ ಬೀದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಿದೆ. ಉನ್ನತ ವ್ಯಾಸಂಗ ಮಾಡಿಕೊಂಡು ಉದ್ಯೋಗ ಖಾತ್ರಿ ಕೆಲಸ, ತರಕಾರಿ ಮಾರಾಟ ಮಾಡುತ್ತಿದ್ದಾರೆ ಎಂಬ ವರದಿಗಳು ಪ್ರಕಟವಾಗಿವೆ.

ಈ ಎಲ್ಲ ಬೆಳವಣಿಗೆಗಳು ಬಹಳ ನೋವುಂಟು ಮಾಡುತ್ತವೆ. ರಾಜ್ಯ ಸರ್ಕಾರ ಈ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸ ಕರು ಹಾಗೂ ಶಿಕ್ಷಕರ ಹೋರಾಟ ಸಮಿತಿ ಜಿಲ್ಲಾ ಕಾರ್ಯದರ್ಶಿ ಜಯಣ್ಣ ಮಾತನಾಡಿ, ಸರಕಾರ, ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸರಕಾರ ಬಾಕಿ ಉಳಿಸಿಕೊಂಡಿರುವ ವೇತನ ಹಾಗೂ “ವಿಶೇಷ ಪರಿಹಾರ ಪ್ಯಾಕೇಜ್‌’ ಶೀಘ್ರ ಘೋಷಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next