Advertisement

ಆನ್‌ಲೈನ್‌ ಕೃಷ್ಣಕಥಾ ಸ್ಪರ್ಧೆ

12:24 PM Aug 04, 2018 | Team Udayavani |

ಉಡುಪಿ: ಶ್ರೀಕೃಷ್ಣಮಠದಲ್ಲಿ ಸೆ. 2ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆ. 3ರಂದು ಶ್ರೀಕೃಷ್ಣಲೀಲೋತ್ಸವವನ್ನು (ವಿಟ್ಲಪಿಂಡಿ) ಆಚರಿಸಲಾಗುವುದು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದ್ದು, ಮಕ್ಕಳಿಗೆ ಶ್ರೀಕೃಷ್ಣನ ಕಥೆಯನ್ನು ಹೇಳುವ ಆನ್‌ಲೈನ್‌ ಸ್ಪರ್ಧೆ ಈ ಬಾರಿಯ ವಿಶೇಷ. 

Advertisement

ಶ್ರೀಕೃಷ್ಣನ ಚರಿತ್ರೆಯ ಯಾವುದೇ ಭಾಗವನ್ನು ಮಕ್ಕಳ ಮೂಲಕ ಹೇಳಿಸಿ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿ ಅದನ್ನು ಯುಟ್ಯೂಬಿಗೆ ಅಪ್‌ ಲೋಡ್‌ ಮಾಡಿ, ಲಿಂಕ್‌ ಕಳುಹಿಸಬೇಕು. 3ರಿಂದ 10 ವರ್ಷದ ಮಕ್ಕಳಿಗೆ ಈ ಸ್ಪರ್ಧೆ ನಡೆಸಲಾಗುತ್ತಿದ್ದು, 3ರಿಂದ 4, 5ರಿಂದ 7, 8ರಿಂದ 10 ವಯಸ್ಸಿನ ವಿಭಾಗಗಳಲ್ಲಿ ನಡೆಯುತ್ತದೆ. ಕನ್ನಡ, ತುಳು, ತಮಿಳು, ಹಿಂದಿ, ಮರಾಠಿ, ಕೊಂಕಣಿ, ತೆಲುಗು, ಬಂಗಾಲಿ ಭಾಷೆಗಳಲ್ಲಿ ಮಕ್ಕಳು ಕಥೆ ಹೇಳಬಹುದು.

ಒಂದೇ ಮನೆಯಲ್ಲಿರುವ ಎಲ್ಲ ಮಕ್ಕಳೂ ಭಾಗವಹಿಸಬಹುದು. ಕಥೆ ಹೇಳಲು ಕಾಲಾವಧಿ 5 ನಿಮಿಷ. ಒಂದು ಮಗು ಒಂದಕ್ಕಿಂತಲೂ ಹೆಚ್ಚಿನ ಭಾಷೆಯಲ್ಲಿ ಕಥೆ ಹೇಳಬಹುದು. ಕಥೆಯನ್ನು ಯುಟ್ಯೂಬಿನಲ್ಲಿ ಫೇಸ್‌ ಬುಕ್ಕಿನಲ್ಲಿ ಅಪ್‌ ಲೋಡ್‌ ಮಾಡಿದ ಅನಂತರ #palimaru_krishna_katha ಎಂಬ ಹ್ಯಾಶ್‌ ಟ್ಯಾಗ್‌ ಸೇರಿಸಬೇಕು.
ಆ. 25 ವಿಡಿಯೋ ಅಪ್‌ಲೋಡ್‌ ಮಾಡಲು ಕೊನೆಯ ದಿನಾಂಕ. ಆಯ್ಕೆಯಾಗುವ ಕಥೆಗೆ ಬಹುಮಾನವಿದೆ.

ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಶಸ್ತಿಪತ್ರ ಸಿಗಲಿದೆ. ಹೆಚ್ಚು ಅಂಕ ಗಳಿಸಿದ ಗಂಡು ಮಗುವಿಗೆ ಶ್ರೀ ಕೃಷ್ಣದೇವರಿಗೆ ಸಮರ್ಪಿಸಿದ ತುಳಸೀಮಣಿ ಮಾಲೆ, ಹೆಣ್ಣು ಮಗುವಿಗೆ ಶ್ರೀ ಕೃಷ್ಣದೇವರಿಗೆ ಸಮರ್ಪಿಸಿದ ಹವಳದ ಮಣಿಮಾಲೆಯನ್ನು ಪ್ರಶಸ್ತಿಯಾಗಿ ನೀಡಲಾಗುವುದು. 

ವೀಡಿಯೋ ಲಿಂಕ್‌ಗಳನ್ನು ಕಳುಹಿಸಬೇಕಾದ ಇಮೇಲ್‌ ವಿಳಾಸ info@palimarumatha.org ಫೇಸ್‌ಬುಕ್‌ ವಿಳಾಸ www.facebook.com/PalimaruMatha.

Advertisement
Advertisement

Udayavani is now on Telegram. Click here to join our channel and stay updated with the latest news.

Next