ಮಂಡ್ಯ: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಬೇಕೆ ಬೇಡವೇ ಎಂಬ ಗೊಂದಲದ ನಡುವೆ ದೂರದ ದುಬೈನಲ್ಲಿ ಕನ್ನಡ ಸಂಘದ ವತಿಯಿಂದ ಉಚಿತ ಕನ್ನಡ ಕಲಿಕಾ ಶಾಲೆಗಳು (ಆನ್‌ಲೈನ್) ಆರಂಭಗೊಂಡಿವೆ. ದುಬೈನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಲೆಯ ಮಹಾಪೋಷಕ ಪ್ರವೀಣ್‌ಕುಮಾರ್‌ಶೆಟ್ಟಿ, ಉಪಾಧ್ಯಕ್ಷ ಮೋಹನ್ ಅವರು ಪ್ರಸಕ್ತ ಶೈಕ್ಷಣಿಕ ಸಾಲಿನ ಆನ್‌ಲೈನ್ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಿದರು.
ವಾರಾಂತ್ಯದಲ್ಲಿ ಮಾತ್ರ: ಉದ್ಯೋಗ ಅರಸಿ ದೂರದ ಅರಬ್ ಗಣತಂತ್ರ ರಾಷ್ಟ್ರಕ್ಕೆ ಬಂದಿರುವ ಕನ್ನಡಿ ಗರ ಮಕ್ಕಳಿಗೆ ಮಾತೃಭಾಷಾ ಸಾಕ್ಷರತೆ ಪ್ರತಿ ಯೊಬ್ಬ ಕನ್ನಡ ಕಂದಮ್ಮನ ಹಕ್ಕು ಎಂಬ ಘೋಷಣೆಯೊಂದಿಗೆ ಕನ್ನಡ ಮಿತ್ರರು ಎಂಬ ಸಂಘಟನೆ 2014ರಲ್ಲಿ 40 ಮಕ್ಕಳೊಂದಿಗೆ ಆರಂಭವಾದ ಈ ಶಾಲೆಯಲ್ಲಿ ವಾರಂತ್ಯದಲ್ಲಿ ಮಾತ್ರ ಕನ್ನಡ ಕಲಿಸುವ ಮೂಲಕ ಎಲ್ಲ ಕನ್ನಡಿಗರ ಮಕ್ಕಳು ಕನ್ನಡ ಕಲಿಯಲು ಅನುವು ಮಾಡಿಕೊಟ್ಟಿದೆ.
ಇದನ್ನೂ ಓದಿ;- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ
ಹೆಮ್ಮೆಯ ವಿಷಯ: ಕನ್ನಡ ವರ್ಣಮಾಲೆಯಿಂದ ಮೊದಲುಗೊಂಡು ಕನ್ನಡ ವಾಕ್ಯ ರಚನೆವರೆಗೂ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಎಂಬ ವಿವಿಧ ತರಗತಿಗಳಲ್ಲಿ ಮಕ್ಕಳ ಕಲಿಕಾ ಮಟ್ಟಕ್ಕೆ ಅನುಸಾರವಾಗಿ ಕನ್ನಡ ಕಲಿಸಲಾಗುತ್ತಿದೆ. ಅರಬ್ಬರ ನಾಡಲ್ಲಿ ಕನ್ನಡ ಕಲಿಸುವ ಕನ್ನಡ ಮಿತ್ರರ ಆಸೆಗೆ ಜೊತೆಯಾಗಿ ತಮ್ಮ ವಾರದ ಒಂದು ರಜಾ ದಿನ ವನ್ನು ಉಚಿತವಾಗಿ ಕನ್ನಡ ಕಲಿಸಲು ಮುಡು ಪಿಟ್ಟಿ ರುವ ನಮ್ಮ ಕನ್ನಡತಿಯರೇ ಇಲ್ಲಿನ ಶಿಕ್ಷಕಿಯರು ಎಂಬುದು ಹೆಮ್ಮೆಯ ವಿಷಯ ಎಂದು ಮಹಾಪೋಷಕ ಪ್ರವೀಣ್ ಶೆಟ್ಟಿ ತಿಳಿಸಿದರು.
ಕನ್ನಡ ಭಾಷೆ ಕಲಿಸುವ ಉದ್ದೇಶ: ದುಬೈನಲ್ಲಿ ಅಲ್ಲಿನ ಭಾಷೆಯಲ್ಲೇ ವ್ಯವಹಾರ, ಮಾತುಕತೆ ನಡೆಯುತ್ತದೆ. ಸ್ವದೇಶಕ್ಕೆ ಮರಳಿದಾಗ ಕನ್ನಡ ಭಾಷೆಯಲ್ಲಿ ಮಾತನಾಡುವುದನ್ನು ಬಿಟ್ಟು ಬೇರೆ ಭಾಷೆಯಲ್ಲಿ ಹಳ್ಳಿಗಳಿಗೆ ತೆರಳಿ ತಮ್ಮ ಸ್ನೇಹಿತರು, ಆಪ್ತರು, ಸಂಬಂ ಧಿಗಳ ವಿಳಾಸ ಪತ್ತೆ ಮಾಡುವುದು ದುಸ್ತರ. ಇಂತಹ ಸನ್ನಿವೇಶವನ್ನು ಈಗಾಗಲೇ ಹಲವು ಅನಿವಾಸಿ ಭಾರತೀಯರು ಎದುರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದುಬೈನಲ್ಲಿರುವ ಎಲ್ಲ ಕನ್ನಡಿಗರ ಮಕ್ಕಳಿಗೂ ಕನ್ನಡ ಭಾಷೆ ಕಲಿಸುವ ಉದ್ದೇಶ ಹೊಂದಿದ್ದೇವೆ ಎಂದು ವಿವರಿಸಿದರು.
ಕನ್ನಡ ಪಾಠಶಾಲೆ ದುಬೈನಲ್ಲಿ ನಡೆಸಿಕೊಂಡು ಬರುತ್ತಿರುವ ಕನ್ನಡ ಮಿತ್ರರ ಕಾರ್ಯ ಶ್ಲಾಘನೀಯ ಎಂದು ಯುಎಇ ಸಂಘಟನೆ ಅಧ್ಯಕ್ಷ ಶ್ರೀಧರ್ ಸಲಹೆ ನೀಡಿದರು. ಕನ್ನಡ ಮಿತ್ರರು ಸಂಘಟನೆ ಉಪಾಧ್ಯಕ್ಷ ಸಿದ್ದಲಿಂಗೇಶ್ ಅವರು ಶಾಲೆ ನಡೆದು ಬಂದ ದಾರಿ ಕುರಿತು ಮಾತನಾಡಿ, ಎಲ್ಲ ಕನ್ನಡಿಗರು ಈ ಬಾರಿಯ ಆನ್‌ಲೈನ್ ತರಗತಿಯ ಸದುಪಯೋಗ ಪಡೆದುಕೊಳ್ಳುವಂತೆ ಕರೆಕೊಟ್ಟರು. ಕಾರ್ಯದರ್ಶಿ ಸುನಿಲ್ ಗವಾಸ್ಕರ್ ಮಾತನಾಡಿ, ಕನ್ನಡ ಮಿತ್ರರು, ಯುಎಇ ಸಂಘಟನೆಯ ಇತರ ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಶೈಕ್ಷಣಿಕ ಚಟುವಟಿಕೆಯ ನೇತೃತ್ವ ವಹಿಸಿರುವ ರೂಪ ಶಶಿಧರ್ ಮಾತನಾಡಿ, ಈ ಬಾರಿಯ ಆನ್ ಲೈನ್ ತರಗತಿಗಳಿಗೆ ನಡೆಸಿರುವ ತಯಾರಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾ ಧಿಕಾರದ ಸಹಕಾರದ ಬಗ್ಗೆ ತಿಳಿಸಿಕೊಟ್ಟರು. ಯುಎಇ ಸಂಘಟನೆ ಖಜಾಂಚಿ ನಾಗರಾಜ್‌ರಾವ್ ಹಾಗೂ ಮಾಧ್ಯಮ ಪ್ರಮುಖ್ ಭಾನುಕುಮಾರ್, ಕನ್ನಡ ಶಿಕ್ಷಕಿಯರು ಭಾಗವಹಿಸಿದ್ದರು.