ಮಂಗಳೂರು: ಮೆಸ್ಕಾಂ ಹೆಸರಿನಲ್ಲಿ ಮೊಬೈಲ್‌ನಲ್ಲಿ ಆನ್‌ಲೈನ್ ವಂಚನೆ ಸಂದೇಶ ಗ್ರಾಹಕರಿಗೆ ರವಾನೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು ಈ ಬಗ್ಗೆ ಎಚ್ಚರವಹಿಸುವಂತೆ ಮೆಸ್ಕಾಂ ಸೂಚಿಸಿದೆ.
“ಪ್ರಿಯ ಗ್ರಾಹಕರೇ, ನೀವು ನಿಮ್ಮ ಹಿಂದಿನ ತಿಂಗಳ ವಿದ್ಯುತ್ ಬಿಲ್ ಪಾವತಿಸದ ಕಾರಣ ನಿಮ್ಮ ವಿದ್ಯುತ್ ಸಂಪರ್ಕವನ್ನು ಇಂದು ರಾತ್ರಿ 9.30 ಗಂಟೆಗೆ ಕಡಿತಗೊಳಿಸಲಾಗುವುದು.
ತತ್‌ಕ್ಷಣವೇ ವಿದ್ಯುತ್ ಇಲಾಖೆ ಅಧಿಕಾರಿಗೆ (ಮೊಬೈಲ್ ಸಂಖ್ಯೆ) ಕರೆ ಮಾಡಿ ವಿದ್ಯುತ್ ಶುಲ್ಕ ಪಾವತಿಸಿ’ ಎನ್ನುವುದಾಗಿ ಸಂದೇಶಗಳು ಮೆಸ್ಕಾಂ ಗ್ರಾಹಕರ ಮೊಬೈಲ್‌ಗೆ ಬಂದಿರುವುದು, ಮೆಸ್ಕಾಂನ ಗಮನಕ್ಕೆ ಬಂದಿರುತ್ತದೆ. ಮೆಸ್ಕಾಂ ವತಿಯಿಂದ ಇಂತಹ ಸಂದೇಶ ರವಾನೆಯಾಗುವ ವ್ಯವಸ್ಥೆ ಇರುವುದಿಲ್ಲ.
ಮೇಲಿನ ಸಂದೇಶವು ದುರುದ್ದೇಶ ದಿಂದ ಕೂಡಿದ್ದು, ಗ್ರಾಹಕರು ಇಂತಹ ಸಂದೇಶ ಬಂದರೆ ಅದಕ್ಕೆ ಸ್ಪಂದಿಸಬಾರದು ಮತ್ತು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.
ವಿದ್ಯುತ್ ಶುಲ್ಕವನ್ನು ಮೆಸ್ಕಾಂ ಅಧಿಕೃತ ಪಾವತಿ ಮಾಧ್ಯಮಗಳಾದ ನನ್ನ ಮೆಸ್ಕಾಂ ಮೊಬೈಲ್ ಆ್ಯಪ್, ಮಂಗಳೂರು ಒನ್, ಹತ್ತಿರದ ಮೆಸ್ಕಾಂ ಕಚೆೇರಿ, ಗೂಗಲ್ ಪೇ, ಪೇಟಿಎಂ, ಮೆಸ್ಕಾಂ ಆನ್‌ಲೈನ್ ಪೇಮೆಂಟ್ ಆ್ಯಪ್
ಗಳಲ್ಲಿ ಪಾವತಿಸಬಹುದಾಗಿದೆ.
ಅನಧಿಕೃತ ಸಂದೇಶ ಮತ್ತು ಕರೆ ಬಂದಲ್ಲಿ ಮೆಸ್ಕಾಂ ಸಹಾಯವಾಣಿ 1912 ಇದಕ್ಕೆ ದೂರು ನೀಡಬೇಕು ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.