Advertisement

ಅಗಸ್ತ್ಯ ಪ್ರತಿಷ್ಠಾನದಿಂದ ಆನ್‌ಲೈನ್‌ ಶಿಕ್ಷಣ

12:30 PM Aug 17, 2020 | Suhan S |

ದೊಡ್ಡಬಳ್ಳಾಪುರ: ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಸಹಕಾರದೊಂದಿಗೆ ಅಡೋಬ್‌ ಬನಾವೋ ಬಸ್‌ ಸೇವಾ ಕಾರ್ಯ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣದ ಮೂಲಕ ವಿಜ್ಞಾನ, ಗಣಿತ ಬೋಧನೆ ಮಾಡಲಾಗುತ್ತಿದೆ ಎಂದು ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವಲಯ ಅಧಿಕಾರಿ ವಿ.ಎಂ.ನವೀನ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಆನ್‌ಲೈನ್‌ ಶಿಕ್ಷಣದ ಕುರಿತು ಮಾಹಿತಿ ನೀಡಿ, ಎಲ್ಲಾ  ವಿದ್ಯಾರ್ಥಿಗಳಿಗೂ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ನಮ್ಮ ಸಂಸ್ಥೆಯಿಂದ ಈ ಕಾರ್ಯ ಕ್ರಮ ಆರಂಭಿಸಲಾಗಿದೆ. ಮಕ್ಕಳಲ್ಲಿರುವ ವಿನೂತನ ಆಲೋಚನೆ ತಿಳಿಸಲೂ ಅವಕಾಶ ಮಾಡಿಕೊಡ ಲಾಗಿದೆ. ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ರಾಜ್ಯದ 53 ಕೇಂದ್ರಗಳ ಮೂಲಕ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ 60 ಸಾವಿರಕ್ಕೂ ಹೆಚ್ಚು ಬಡಮಕ್ಕಳಿಗೆ ಉಚಿತ ಆನ್‌ಲೈನ್‌ ಶಿಕ್ಷಣ ನೀಡುವ ಮೂಲಕ ವಿಜ್ಞಾನ ಹಾಗೂ ಗಣಿತ ಬೋಧನೆಯಲ್ಲಿ ನಿರತವಾಗಿದೆ. ರಾಜ್ಯದ ವಿವಿಧೆಡೆಗಳಲ್ಲಿ ಹಲವಾರು ಪ್ರಯತ್ನಗಳು ನಡೆಯುತ್ತಿವೆ ಎಂದರು.

ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ತಾಲೂಕು ಅಧಿಕಾರಿ ನಾರಾಯಣಸ್ವಾಮಿ, ಅಗಸ್ತ್ಯ ಅಂತಾ ರಾಷ್ಟ್ರೀಯ ಪ್ರತಿಷ್ಠಾನ ಏಪ್ರಿಲ್‌ ತಿಂಗಳಿಂದ ಗ್ರಾಮೀಣ ಮಕ್ಕಳಿಗೆ ಆನ್‌ಲೈನ್‌ ಮೂಲಕ ವಿಜ್ಞಾನ ರಸಪ್ರಶ್ನೆ ಮಾಡಿ ಅವರ ವಿಜ್ಞಾನ ಆಸಕ್ತಿ ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ. ಮಕ್ಕಳಲ್ಲಿ ವಿಶೇಷ ಆಲೋಚನೆಗಳಿದ್ದರೆ ಅವುಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್‌ನಲ್ಲಿ ವಿಜ್ಞಾನ ಮೇಳ ಹಾಗೂ ಶಿಕ್ಷಕರ ತರಬೇತಿ ಕಾರ್ಯಾಗಾರ ಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next