ನವದೆಹಲಿ: ಆನ್ ಲೈನ್ ಮೂಲಕ ಫುಡ್ ಆರ್ಡರ್ ಮಾಡಿ ಮನೆ ಬಾಗಿಲಿಗೆ ಫುಡ್ ಬಂದಂತೆ, ಇನ್ನು ಮುಂದಿನ ದಿನಗಳಲ್ಲಿ ಮದ್ಯವೂ ಮನೆ ಬಾಗಿಲಿಗೆ ಬರಲಿದೆಯೆಂದು ವರದಿ ತಿಳಿಸಿದೆ.
ಇದುವರೆಗೂ ಸ್ವೀಗ್ಗಿ, ಝೋಮ್ಯಾಟೋ ಮೂಲಕ ಫುಡ್ ಮಾತ್ರ ಸರಬರಾಜು ಮಾಡಲಾಗುತಿತ್ತು ಆದರೆ ಇನ್ನು ಮುಂದಿನ ದಿನಗಳಲ್ಲಿ ಮದ್ಯವನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಿದೆಯಂತೆ,
ಅದರಂತೆ ಕರ್ನಾಟಕ, ಹರಿಯಾಣ, ಪಂಜಾಬ್, ತಮಿಳುನಾಡು, ಗೋವಾ, ಕೇರಳ ಮತ್ತು ದೆಹಲಿ ಸೇರಿದಂತೆ ಹಲವಾರು ರಾಜ್ಯಗಳು ಸ್ವಿಗ್ಗಿ, ಬಿಗ್‌ಬಾಸ್ಕೆಟ್, ಝೋಮ್ಯಾಟೋ ಮತ್ತು ಬ್ಲಿಂಕಿಟ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮದ್ಯವನ್ನು ಹೋಮ್ ಡೆಲಿವರಿ ಮಾಡಲು ಪ್ರಾಯೋಗಿಕ ಯೋಜನೆಗಳನ್ನು ನಡೆಸಲಾಗುತ್ತಿದೆ ಎಂದು ನ್ಯೂಸ್ 18 ವರದಿಯಾಗಿದೆ.
ಆರಂಭದಲ್ಲಿ ಬಿಯರ್, ವೈನ್ ಮತ್ತು ಲಿಕ್ಕರ್‌ಗಳಂತಹ ಕಡಿಮೆ ಪ್ರಮಾಣದ ಆಲ್ಕೋಹಾಲ್ ಹೊಂದಿರುವ ಮದ್ಯವನ್ನು ಪೂರೈಕೆ ಮಾಡಲು ಯೋಚನೆ ನಡೆಸಿದ್ದು ಅಲ್ಲದೆ ಅಧಿಕಾರಿಗಳು ಇದರ ಸಾಧಕ-ಬಾಧಕಗಳ ಕುರಿತು ಮೌಲ್ಯಮಾಪನ ಮಾಡುತ್ತಿದ್ದು ಪ್ರಸ್ತುತ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ವಿತರಣೆಗೆ ಅನುಮತಿಸಲಾಗಿದೆ ಎಂದು ಹೇಳಲಾಗಿದೆ.
ವಯಸ್ಸಿನ ದಾಖಲೆ ಅಗತ್ಯ:
ಆನ್ ಲೈನ್ ನಲ್ಲಿ ಮದ್ಯ ಆರ್ಡರ್ ಮಾಡಲು ಗ್ರಾಹಕರು ತಮ್ಮ ವಯಸ್ಸಿನ ದಾಖಲೆ ಪತ್ರಗಳನ್ನು ಸಲ್ಲಿಸಬೇಕಾಗಿದೆ. ಈಗಿರುವ ಹೊಸ ನಿಯಮಗಳಡಿ ದೇಶೀಯ ಮತ್ತು ವಿದೇಶಿ ಮದ್ಯವನ್ನು ಮನೆ ಬಾಗಿಲಿಗೆ ಡೆಲಿವರಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Udupi ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ