ನವದೆಹಲಿ: ಕೋವಿಡ್ ದಿಂದಾಗಿ ಆನ್‌ಲೈನ್ ಶಿಕ್ಷಣ ಹೆಚ್ಚಿದ್ದು, ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎನ್ನುವುದನ್ನು ಸಮೀಕ್ಷೆಯೊಂದರ ಮೂಲಕ ಪ್ರಸ್ತುತಪಡಿಸಲಾಗಿದೆ.
ಸ್ಕೂಲ್ ಚಿಲ್ಡ್ರನ್ ಆನ್ ಲೈನ್ ಆ್ಯಂಡ್ ಆಫ್ ಲೈನ್ ಲರ್ನಿಂಗ್ (ಸ್ಕೂ ಲ್) ಸಮೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ.37 ಮತ್ತು ನಗರ ಪ್ರದೇಶದಲ್ಲಿ ಶೇ.19 ವಿದ್ಯಾರ್ಥಿಗಳು ಓದುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ ಎನ್ನುವ ಅಂಶ ಹೊರಬಿದ್ದಿದೆ.
15 ರಾಜ್ಯಗಳ 1,400 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಿಕೊಳ್ಳಲಾಗಿದೆ. ಆಗಸ್ಟ್ ತಿಂಗಳಲ್ಲಿ ಈ ಸಮೀಕ್ಷೆ ನಡೆದಿದ್ದು, ಆ ವೇಳೆ ಗ್ರಾಮೀಣ ಭಾಗದ ಕೇವಲ ಶೇ.28 ವಿದ್ಯಾರ್ಥಿಗಳು ನಿರಂತರ ವಿದಾಭ್ಯಾಸ ಮಾಡುತ್ತಿದ್ದರು. ಶೇ.37 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವೇ ನಿಂತು ಬಿಟ್ಟಿದೆ. ಈಗಾ ಗಲೇ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅರ್ಧಕ್ಕರ್ಧ ವಿದ್ಯಾರ್ಥಿಗಳು ತೀರಾ ಸುಲಭದ ಪದಗಳನ್ನೂ ಓದಲು ತಡಕಾಡಿದ್ದಾರೆ. ಅದೇ ರೀತಿ ನಗರ ಭಾಗದಲ್ಲಿ ಶೇ. 47 ವಿದ್ಯಾರ್ಥಿಗಳು ನಿರಂತರ ಕಲಿಕೆ ಮಾಡುತ್ತಿದ್ದರೆ, ಶೇ.19 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನಿಂತಿದೆ ಹಾಗೂ ಶೇ. 42 ವಿದ್ಯಾರ್ಥಿಗಳು ಪದಗಳನ್ನು ಓದಲು ಕಷ್ಟ ಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಸಮಾನ ಶಿಕ್ಷಣ ಇರಲಿ; ಶಿಕ್ಷಾ ಪರ್ವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ
ಕಾರಣವೇನು?
ವಿದ್ಯಾಭ್ಯಾಸ ನಿಲ್ಲುವುದಕ್ಕೆ ಮುಖ್ಯ ಕಾರಣ ಸ್ಮಾರ್ಟ್ ಫೋನ್, ನೆಟ್ ವರ್ಕ್ ಇಲ್ಲದಿರುವುದು ಎನ್ನಲಾಗಿದೆ. ಒಂದು ವೇಳೆ ಮನೆಯಲ್ಲಿ ಸ್ಮಾರ್ಟ್ ಫೋನ್ ಇದ್ದರೂ ಅದು ದೊಡ್ಡ ವರ ಕೆಲಸಕ್ಕೆ ಬಳಕೆಯಾಗುವ ಕಾರಣ ಮಕ್ಕಳಿಗೆ ಸಿಗ ದಂತಾಗಿದೆ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.