ನೆಲಮಂಗಲ: ಕೊರೊನಾದಿಂದಾಗಿ ಪೋಷ ಕರ ಕೈಯ್ಯಲ್ಲಿದ್ದ ಸ್ಮಾರ್ಟ್‌ಫೋನ್‌ಗಳು ಆನ್‌ಲೈನ್ ತರಗತಿಗಳ ನೆಪದಲ್ಲಿ ಮಕ್ಕಳ ಕೈ ಸೇರಿದ್ದು, ಅಪಾಯದ ಅರಿವಿದ್ದರೂ ಪೊಷಕರು ಅನಿವಾರ್ಯವಾಗಿ ತಲೆಬಾಗಬೇಕಾಗಿದೆ. ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಪೋನ್‌ಗಳ ಸಮಸ್ಯೆ ಎದುರಾಗಿದ್ದರೂ ನಗರ ಪ್ರದೇಶದಲ್ಲಿ ಖಾಸಗಿ ಶಾಲೆ ಶೇ.90ರಷ್ಟು ಮಕ್ಕಳು ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
ಅಪಾಯ: ಶಾಲೆ ಹಾಗೂ ಟ್ಯೂಶನ್ ಸೇರಿ 11ರಿಂದ 12 ಗಂಟೆಗಳವರೆಗೆ ಮೊಬೈಲ್‌ಗಳಿಂದ ದೂರವಿರುತ್ತದ್ದ ಮಕ್ಕಳಿಗೆ 2 ಗಂಟೆ ಆನ್‌ಲೈನ್ ನೆಪದಿಂದ ಸ್ಮಾರ್ಟ್‌ಪೋನ್‌ಗಳ ದೊರೆತಿದ್ದು, ಬಳಕೆ ಹತ್ತುಪಟ್ಟು ಹೆಚ್ಚಾಗಿದೆ. ಮಕ್ಕಳು ನೆಟ್ ಪ್ಯಾಕ್ ಜತೆ ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿರುವುದು ತರಗತಿಗಳಿಗಿಂತ ಗೇಮ್ಸ್, ಟಿಕ್‌ಟಾಕ್ ಸೇರಿದಂತೆ ಯುಟ್ಯೂಬ್ ಜತೆ ಅಶ್ಲೀಲ ಪ್ರಪಂಚಕ್ಕೆ ಕಾಲಿ ಟ್ಟಿದ್ದಾರೆ. ಅದಲ್ಲದೆ ಮಾನಸಿಕವಾಗಿ ಕುಗ್ಗುವ ಅಪಾಯ ಎದುರಾಗಿದೆ ಎನ್ನುತ್ತಾರೆ ತಜ್ಞರು.
ಹೊರೆ: ಖಾಸಗಿ ಶಾಲೆಗಳ ವ್ಯಾಮೋಹದ ಪೋಷಕರಿಗೆ ಲಾಕ್ ಡೌನ್ ನಂತರ ಮಕ್ಕಳ ಕಲಿಕೆಯ ಖರ್ಚು ದುಪ್ಪಟ್ಟು ಮಾಡಿದೆ. ಅನೇಕ ಶಾಲೆಗಳು ದಿನಕ್ಕೆ 2ರಿಂದ 3 ಗಂಟೆಗಳ ಕಾಲ ಕಡ್ಡಾಯ ಆನ್‌ಲೈನ್ ತರಗತಿ ಆರಂ ಭಿಸಿದ್ದರಿಂದ ತಿಂಗಳಿಗೆ 4ಜಿ ನೆಟ್ ವರ್ಕ್‌ನ 50ರಿಂದ 60 ಜಿಬಿ ನೆಟ್ ಜತೆ ಶಾಲೆಗೆ ಶುಲ್ಕ ಕಟ್ಟಬೇಕಾಗಿರುವುದರಿಂದ ಹಣದಹೊರೆ ಹೆಚ್ಚು ಮಾಡಿದೆ.
ಮಕ್ಕಳಿಗೆ ಸಮಸ್ಯೆ: ಮಕ್ಕಳು ಮೊದಲಿಗಿಂತ ಹೆಚ್ಚು 8 ಗಂಟೆ ಮೊಬೈಲ್ ಬಳಸುತ್ತಿದ್ದಾರೆ. ತರಗತಿಗೆ 2 ತಾಸು ಆಗಿದ್ದರೆ ಬೇರೆ ಚಟು ವಟಿ ಕೆಗಳಿಗಾಗಿ 8 ತಾಸು ಬಳಸುತ್ತಿದ್ದಾರೆ. ಜತೆಗೆ ಶಿಕ್ಷಕರನ್ನು ಯಾಮಾರಿಸುತ್ತಿದ್ದಾರೆ. ಅಲ್ಲದೆ ಸ್ಮಾರ್ಟ್‌ಫೋನ್ ನಿಂದ ಮೆದುಳಿನಲ್ಲಿ ರಕ್ತದ ಹರಿವಿನ ಮೇಲೂ ಪರಿಣಾಮ ಬೀರುತ್ತದೆ. ಕಣ್ಣಿಗೆ ಹಾನಿ, ಮಾನಸಿಕ ಖನ್ನತೆಯಂತಹ ಆರೋಗ್ಯ ಸಮಸ್ಯೆ ಹೆಚ್ಚಿಸುತ್ತಿದೆ. ಪೋಷಕರಿಗೆ ಪೋನ್ ಬಿಲ್ ಹೊರೆಯಾಗಿದೆ ಎಂಬ ದೂರುಗಳು ಕೇಳುತ್ತಿವೆ.
ಪೋಷಕರಿಗೆ ಸಲಹೆ: ಮಕ್ಕಳ ಚಲನವಲನಗಳ ಬಗ್ಗೆ ಗಮನ ವಹಿಸಬೇಕು. ಮಕ್ಕಳು ಮೊಬೈಲ್‌ನಲ್ಲಿ ಆನ್‌ಲೈನ್ ತರಗತಿಗೆ ಮಾತ್ರ ಸೀಮಿತವಾಗಿರಬೇಕು. ಪ್ರತಿದಿನ ಬಳಸುವ ನೆಟ್ ಪ್ರಮಾಣದ ಬಗ್ಗೆ ಪರೀಕ್ಷಿಸಬೇಕು. ಆನ್‌ಲೈನ್ ತರಗತಿಗಳ ಬಗ್ಗೆ ವಿಚಾರಣೆ, ಆರೋಗ್ಯ ಸಮಸ್ಯೆ ಎದುರಾಗ ದಂತೆ ಎಚ್ಚರ ವಹಿಸಬೇಕು ಎನ್ನಲಾಗಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ ಆನ್‌ಲೈನ್ ತರಗತಿ ಅನಿ ವಾರ್ಯವಲ್ಲ. ಆನ್‌ಲೈನ್ ತರಗತಿ ವೇಳೆ ವಿದ್ಯಾರ್ಥಿಗಳ ವರ್ತನೆ ಬಗ್ಗೆ ಗಮನ ಹರಿಸಬೇಕು. ದಿನಕ್ಕೆ 1 ಗಂಟೆಗೂ ಕಡಿಮೆ ತರಗತಿ ಮಾಡಿದರೆ ಒಳ್ಳೆಯದು. ಪೋಷಕರು ಮನೆಯಲ್ಲಿರುವ ಸಂದರ್ಭದಲ್ಲಿ ತರಗತಿ ಮಾಡಿದರೆ ದುರುಪಯೋಗ ಕಡಿಮೆ ಎಂಬ ಸಲಹೆಗಳು ಕೇಳಿವೆ.
ಮಕ್ಕಳು ಸ್ಮಾರ್ಟ್‌ಫೋನ್ ಹೆಚ್ಚು ಬಳಸುವುದರಿಂದ ಚಟವಾಗಿ ಶಾಲೆಯೇ ದೂರವಾಗಿ ವ್ಯಸನಿಗಳಾಗುವ ಜತೆ ಮಾನಸಿಕ ವಾಗಿ ಸದೃಢತೆ ಕಳೆದುಕೊಳ್ಳುತ್ತಾರೆ. ಪ್ರಾಥಮಿಕ ಶಾಲೆ ಮಕ್ಕಳಿಗೆ ಆನ್‌ಲೈನ್ ತರಗತಿ ಸರಿಯಲ್ಲ.
-ಗಿರೀಶ್‌ಕುಮಾರ್ ಪಿ.ಡಿ, ಜಿಲ್ಲಾ ಮಾಸಿಕ ಆರೋಗ್ಯ ತಜ್ಞ