Advertisement
ಆನ್‌ಲೈನ್ ಕಲಿಕೆಯ ಅನಿವಾರ್ಯಕ್ಕೆ ಕಟ್ಟುಬಿದ್ದು ಪೋಷಕರು ಮಕ್ಕಳಿಗೆ ತಮ್ಮದೇ ಮೊಬೈಲ್ ಇಲ್ಲವೇ ಹೊಸ ಮೊಬೈಲ್ ಖರೀದಿಸಿ ನೀಡಿದ್ದಾರೆ. ಮಕ್ಕಳು ಅಪರೂಪಕ್ಕೊಮ್ಮೆ ತಮ್ಮ ಕೈಗೆ ಸ್ಮಾರ್ಟ್‌ಫೋನ್ ಸಿಕ್ಕಿದಾಗಲೂ ಗೇಮಿಂಗ್ ಆ್ಯಪ್‌ಗ್ಳ ಕಡೆಗೆ ಕಣ್ಣು ಹಾಯಿಸದೇ ಬಿಡುವುದಿಲ್ಲ ಎಂಬ ಸತ್ಯ ಹೆತ್ತವರಿಗೂ ತಿಳಿದಿರುವಂಥದ್ದೆ. ಹೀಗಿರುವಾಗ ಆನ್‌ಲೈನ್ ಕಲಿಕೆಗಾಗಿ ಸ್ವಂತ ಮೊಬೈಲ್ ಹೊಂದಿದ ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರಿಗೆ ಆತಂಕ ಇಲ್ಲದಾದೀತೇ? ಕಲಿಕೆಗಾಗಿ ನೀಡಿದ ಮೊಬೈಲ್ ಚಟವಾಗಿ ಬೆಳೆಯಬಹುದೆಂಬ ಭಯ ಸಹಜ. ಅದು ಚಟವಾಗಿ ಬೆಳೆದರೆ ಆಗುವ ಪರಿಣಾಮಗಳೇನು, ಚಟವಾಗದಿರಲು ಹೆತ್ತವರು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು ಎಂಬ ಬಗ್ಗೆ ಮನೋವೈದ್ಯೆ ಡಾ| ಪ್ರೀತಿ ಶಾನುಭಾಗ್ ವಿವರಿಸಿದ್ದಾರೆ.
Related Articles
ಆನ್‌ಲೈನ್ ವೀಡಿಯೋ ಗೇಮ್ ಚಟ
ಇದರಲ್ಲಿ ಸಿಗುವ ಪಾಯಿಂಟ್‌ಗಳು ಮಕ್ಕಳನ್ನು ಮತ್ತಷ್ಟು ಸೆಳೆಯುತ್ತವೆ. ಪದೇ ಪದೆ ಆಡುತ್ತ ಅದೊಂದು ಚಟವಾಗುತ್ತದೆ. ಪರಿಣಾಮ ಸಾಮಾಜಿಕವಾಗಿ ಬೆರೆಯುವಿಕೆಯ ಆಸಕ್ತಿಯನ್ನು ಮಕ್ಕಳು ಕಳೆದುಕೊಳ್ಳುತ್ತಾರೆ. ಮಾತೂ ಕಡಿಮೆಯಾಗಿ ಸದಾ ಮೊಬೈಲ್‌ನಲ್ಲೇ ಬೆರಳಾಡಿಸುವ ಸ್ಥಿತಿ ಎದುರಾಗುತ್ತದೆ.
Advertisement
ಸಾಮಾಜಿಕ ತಾಣಗಳ ಮೂಲಕ ಖನ್ನತೆ ಸ್ನೇಹಿತರು ಪ್ರವಾಸ ಹೋಗಿರುವುದು, ಹೊಸ ಬಟ್ಟೆ ಹಾಕಿರುವುದು, ಸಮಾರಂಭಗಳಿಗೆ ತೆರಳಿರುವ ಫೋಟೋಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಹಾಕುವುದರಿಂದ ಹೋಲಿಕೆ ಮಾಡಿಕೊಳ್ಳುವುದು. ನನಗೆ ಜೀವನದಲ್ಲಿ ಅಂತಹ ಖುಷಿಗಳಿಲ್ಲ ಎಂದು ಮರುಗುವುದು. ಇದರಿಂದ ಖನ್ನತೆ ಜಾಸ್ತಿಯಾಗುತ್ತದೆ. ತನಗೂ ಬೇಕೆಂಬ ಬೇಡಿಕೆ ಹೆಚ್ಚುತ್ತದೆ. ಹೆತ್ತವರಿಗೆ ಮಕ್ಕಳನ್ನು ನಿಯಂತ್ರಿಸುವುದೇ ಇಲ್ಲಿ ಸವಾಲಾಗುತ್ತದೆ.
ಏಕಾಗ್ರತೆ ಕೊರತೆಆನ್ಲೈನ್ ತರಗತಿ ಆರಂಭವಾಗುವುದಕ್ಕಿಂತ ಮುಂಚೆ ಮಕ್ಕಳು ಶಾಲೆಗೆ ಹೋಗಿ ಬಂದ ಮೇಲಷ್ಟೇ ಮೊಬೈಲ್ ನೋಡುತ್ತಿದ್ದರು. ಆದರೆ ಈಗ ದಿನವಿಡೀ ಮೊಬೈಲ್ ಕೈಯಲ್ಲಿರುವುದರಿಂದ ಊಟ, ನಿದ್ದೆಯೂ ತಪ್ಪುತ್ತದೆ. ಮಕ್ಕಳು ರಾತ್ರಿ ಮೊಬೈಲ್ ಜತೆಗಿಟ್ಟುಕೊಂಡೇ ಮಲಗುತ್ತಾರೆ. ಏಕಾಗ್ರತೆಯ ಕೊರತೆ, ಚಿಕ್ಕ ಮಕ್ಕಳಲ್ಲಿ ಗಮನದ ಕೊರತೆ ಜಾಸ್ತಿಯಾಗುತ್ತದೆ. ಪೋಷಕರು ಏನು ಮಾಡಬೇಕು?
– ಮಕ್ಕಳಿಗೆ ಆನ್‌ಲೈನ್ ಜತೆಗೆ ಆಫ್‌ಲೈನ್ ತರಗತಿಗಳು ಕೂಡ ಇರುತ್ತವೆ. ಹೆತ್ತವರು ಮೊದಲಾಗಿ ಮಕ್ಕಳೊಂದಿಗೆ ಕುಳಿತು ಸ್ಕೀನ್ ಟೈಂ ಮತ್ತು ನಾನ್-ಸ್ಕೀನ್ ಟೈಂ ಎಂಬುದಾಗಿ ವೇಳಾಪಟ್ಟಿ ರಚಿಸಬೇಕು. ಶಿಕ್ಷಕರು ಆನ್‌ಲೈನ್‌ಗೆ ಬರುವ ಸಂದರ್ಭಕ್ಕೆ ಮಾತ್ರ ಆನ್‌ಲೈನ್‌ಗೆ
ಹೋಗಬೇಕು. ಉಳಿದಂತೆ ಆಫ್‌ಲೈನ್ ಶಿಕ್ಷಣದಡಿ ಹೋಂ ವರ್ಕ್‌ಗಳನ್ನು ಮಾಡಬೇಕು ಎಂಬ ಸ್ಪಷ್ಟ ವೇಳಾಪಟ್ಟಿಯನ್ನು ಹಾಕಿಕೊಡಬೇಕು. – ಇಬ್ಬರು ಮಕ್ಕಳಿಗೆ ಒಂದೇ ಸಮಯಕ್ಕೆ ಆನ್‌ಲೈನ್ ತರಗತಿ ಇಲ್ಲವೆಂದಾದಲ್ಲಿ ಒಂದು ಮೊಬೈಲನ್ನು ಮಾತ್ರ ಅವರಿಗೆ ನೀಡಬೇಕು. ಇದರಿಂದ ಒಬ್ಬನ ತರಗತಿ ಮುಗಿದ ಅನಂತರ ಇನ್ನೊಬ್ಬ ಬಳಸಬಹುದು. ಆ ನಡುವಿನ ಸಮಯದಲ್ಲಿ ಸುದೀರ್ಘ ಓರ್ವನೇ ಮೊಬೈಲ್ ಕೈಯಲ್ಲಿ ಹಿಡಿದುಕೊಳ್ಳುವುದು ತಪ್ಪುತ್ತದೆ. – ಹೆತ್ತವರು ಮನೆಯಲ್ಲಿದ್ದಷ್ಟೂ ಹೊತ್ತು ಆಟ, ಇತರ ಹವ್ಯಾಸಗಳನ್ನು ಬೆಳೆಸಲು ಪ್ರಯತ್ನಿಸಬೇಕು. ಮನೆಯ ಇತರ ಸದಸ್ಯರೊಂದಿಗೆ ಆ ಆಟಗಳನ್ನು ಆಡಿ ಗೆಲುವು ಮಕ್ಕಳಿಗೇ ಸಿಗುವಂತೆ ನೋಡಿಕೊಳ್ಳುವುದು. ಆಗ ಸಹಜವಾಗಿ ಮಕ್ಕಳು ಆಟದ ಕಡೆಗೆ ಆಸಕ್ತಿ ತೋರಿಸುತ್ತಾರೆ. – ಮಕ್ಕಳು ಆನ್‌ಲೈನ್ ಕಲಿಕೆ ಹೊರತಾಗಿ ಮೊಬೈಲ್ ಬಳಸುವಾಗ ಮನೆಯಲ್ಲಿ ಇತರ ಸದಸ್ಯರು ಯಾರಾದರೂ ಇದ್ದಲ್ಲಿ ಸ್ವಲ್ಪ ನಿಗಾ ವಹಿಸಲು ಹೇಳಬೇಕು. ಮಕ್ಕಳನ್ನು ಅನುಮಾನದ ದೃಷ್ಟಿಯಿಂದ ನೋಡದೆ, ಆದಷ್ಟು ಪ್ರೀತಿಯಿಂದ ತಿದ್ದಲು ಪ್ರಯತ್ನಿಸಬೇಕು. ಮಕ್ಕಳು ಮೊಬೈಲ್‌ನಲ್ಲಿ ಆಡುವುದು ಹೊಸತಲ್ಲ. ಆದರೆ ಶಾಲೆಗೆ ಹೋಗು ತ್ತಿದ್ದಾಗ ಸಂಜೆ ಮನೆಗೆ ಬಂದ ಅನಂತರವಷ್ಟೇ ಅವರ ಕೈಗೆ ಮೊಬೈಲ್ ಸಿಗುತ್ತಿತ್ತು. ಆಗ ಹೆತ್ತವರೂ ಮನೆಯಲ್ಲಿ ಇರು ತ್ತಿದ್ದರು. ಪ್ರಸ್ತುತ ಆನ್‌ಲೈನ್ ಶಿಕ್ಷಣ ದಿಂದಾಗಿ ಮಕ್ಕಳಿಗೆ ಮೊಬೈಲ್ ವರದಾನ ವಾದಂತಾಗಿದೆ. ಹೆತ್ತವರು ಉದ್ಯೋಗಕ್ಕೆ ತೆರಳಿದರೆ ಮಕ್ಕಳ ಕಡೆಗೆ ಗಮನಹರಿಸಲು ಸಾಧ್ಯ ವಾಗುವುದಿಲ್ಲ. ಜಾಸ್ತಿ ಮೊಬೈಲ್ ವೀಕ್ಷಣೆ ಮಾಡಿದರೆ ಚಟವಾಗಿ ಬೆಳೆಯುವ ಸಾಧ್ಯತೆ ಇದೆ. ಹೀಗಾಗಿ ಹೆತ್ತವರು ಆದಷ್ಟು ಮಕ್ಕಳನ್ನು ಮೊಬೈಲ್‌ನಿಂದ ಹೊರಗೆಳೆದು ಆಟ, ಇತರ ಹವ್ಯಾಸಗಳನ್ನು ಕಲಿಸಲು ಪ್ರಯತ್ನಿಸಬೇಕು.
-ಡಾ| ಪ್ರೀತಿ ಶಾನುಭಾಗ್, ಮನೋವೈದ್ಯರು, ಮಂಗಳೂರು