Advertisement

ಶೈಕ್ಷಣಿಕ ಮಾರ್ಗಸೂಚಿ ಪ್ರಕಟ; ಆನ್‌ ಲೈನ್‌, ಆಫ್ ಲೈನ್‌ ಪಾಠಕ್ಕೆ ಸೂಚನೆ

01:20 AM Jun 12, 2021 | Team Udayavani |

ಬೆಂಗಳೂರು: ಆನ್‌ ಲೈನ್‌ ಪಾಠ ಕೇಳಲು – ನೋಡಲು ಮೊಬೈಲ್‌ ಇಲ್ಲವೇ? ಮನೆಯಲ್ಲಿ ಟಿ.ವಿ. ಇಲ್ಲವೇ? ಹಾಗಾದರೆ ನೆರೆ ಮನೆಗೆ ಹೋಗಿ…!

Advertisement

– ಇದು ರಾಜ್ಯ ಸರಕಾರ ಬಿಡುಗಡೆ ಮಾಡಿರುವ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣ ಮಾರ್ಗಸೂಚಿಯ ಅಂಶ. ಶಿಕ್ಷಣ ಇಲಾಖೆ ಸ್ಥಳೀಯ, ಶಾಲಾ ಸಂಪನ್ಮೂಲ ಮತ್ತು ಸೌಲಭ್ಯಗಳ ಆಧಾರದಲ್ಲಿ ಆನ್‌ಲೈನ್‌, ಆಫ್ ಲೈನ್‌, ಟಿ.ವಿ., ರೇಡಿಯೋ ಪಾಠ ಮಾಡುವ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ. ಈ ಎಲ್ಲವುಗಳನ್ನು ಬಳಸಿಕೊಂಡು ಜು. 1ರಿಂದ ತರಗತಿ ಆರಂಭಿಸಬಹುದು ಎಂದಿದೆ.

ನಿರ್ವಹಣ ತಂಡ
ಮುಖ್ಯ ಶಿಕ್ಷಕರು, ಸಹ ಶಿಕ್ಷಕರನ್ನು ಒಳಗೊಂಡ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಬೇಕು. ಆನ್‌ಲೈನ್‌ ಆಗಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಬೇಕು. ಇದೇ ಮಾದರಿಯನ್ನು ಅಧಿಕಾರಿ ಮಟ್ಟದಲ್ಲಿಯೂ ಅನು ಸರಿಸಬೇಕು.

ಪರ್ಯಾಯ ಶಿಕ್ಷಣ ಕಾರ್ಯಯೋಜನೆ
ಪ್ರತ್ಯಕ್ಷ ತರಗತಿಗೆ ಪರ್ಯಾಯವಾಗಿ ವಿವಿಧ ಬೋಧನ ವಿಧಾನ ಅನುಸರಿಸುವ ನಿಟ್ಟಿನಲ್ಲಿ ಜೂ. 15ರಿಂದ 30ರ ಅವಧಿಯಲ್ಲಿ ಶಾಲಾ ಹಂತದಿಂದ ಜಿಲ್ಲಾ ಮಟ್ಟದ ವರೆಗೂ ಯೋಜನೆ ರೂಪಿಸಬೇಕು. ಶಿಕ್ಷಕರು, ಜನಪ್ರತಿನಿಧಿ ಗಳು, ಎಸ್‌ಡಿಎಂಸಿ ಸದಸ್ಯರು, ಗ್ರಾ.ಪಂ., ತಾ.ಪಂ., ನಗರ ಸಭೆ, ಪುರಸಭೆ, ಮಹಾನಗರ ಪಾಲಿಕೆ ಮತ್ತು ಸ್ಥಳೀಯರ ಮತ್ತು ಸಮುದಾಯದ ಸಭಾಗಿತ್ವದೊಂದಿಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತರಬೇಕು.

ಪಾಠ ಹೇಗೆ?
ವಿಧಾನ 1
ಮೊಬೈಲ್‌ ಸಂಪರ್ಕ, ದೂರದರ್ಶನದ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳು ನೆರೆ ಮನೆಯ ಟಿ.ವಿ. ಬಳಸಲು ವಿನಂತಿಸಬಹುದು. ನೆರೆ ಹೊರೆಯಲ್ಲಿ ಮೊಬೈಲ್‌ ವ್ಯವಸ್ಥೆ ಸಾಧ್ಯವೇ ಎಂದು ಯೋಚಿಸಬೇಕು. ಕೊರೊನಾ ಮಾರ್ಗಸೂಚಿ ಅನುಸರಿಸಿ ಮಕ್ಕಳನ್ನು ಶಾಲೆಗೆ ಕರೆಸಬಹುದು. ಇವರಿಗೆ ಅಭ್ಯಾಸ ಹಾಳೆ ಕೊಟ್ಟು ಬಳಿಕ ಮೌಲ್ಯಮಾಪನ ಮಾಡಬೇಕು. 10ರಿಂದ 15 ಮಕ್ಕಳ ಗುಂಪು ರಚಿಸಿ, ಮಾರ್ಗದರ್ಶಿ ಶಿಕ್ಷಕರ ನೇಮಕ ಮಾಡಬೇಕು.

Advertisement

ವಿಧಾನ 2
ಮೊಬೈಲ್‌, ಟಿ.ವಿ. ವ್ಯವಸ್ಥೆ ಇರುವ ವಿದ್ಯಾರ್ಥಿಗಳು ದೂರದಶ‌ìನದಲ್ಲಿ ವೀಡಿಯೊ ಪಾಠ ನೋಡಿ ಕಲಿಯಬೇಕು. ಬೇಸಿಕ್‌ ಮೊಬೈಲ್‌ ಹೊಂದಿ ರುವ ಮಕ್ಕಳು ರೇಡಿಯೋ ಪಾಠ ಕೇಳಬೇಕು. ಶಿಕ್ಷಕರು ನಿರಂತರ ಸಂಪರ್ಕದಲ್ಲಿ ಇರಬೇಕು. ಸ್ಮಾರ್ಟ್‌ ಫೋನ್‌ ಇರುವ ಮಕ್ಕಳು ಟಿ.ವಿ. ಪಾಠ, ದಿಶಾ ಆ್ಯಪ್‌ ಮೂಲಕ ಕಲಿಕೆ ನಡೆಸ ಬಹುದು. ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ವಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡಿ ಪಠ್ಯ ವಸ್ತು ಒದಗಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next