Advertisement
ಕಾಂತಿಯುತ ಚರ್ಮ: ಈರುಳ್ಳಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ಸ್ , ಸಲರ್ ಮತ್ತು ವಿಟಮಿನ್‌ಗಳು ಚರ್ಮಕ್ಕೆ ಒಳ್ಳೆಯದು. ಈರುಳ್ಳಿ ರಸವನ್ನು ಲೇಪಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ರಕ್ತದ ಕಲ್ಮಶಗಳನ್ನು ಶುದ್ಧೀಕರಿಸುವುದರಿಂದ ಚರ್ಮದ ಸಮಸ್ಯೆಗಳು ದೂರಾಗುತ್ತವೆ.
Related Articles
Advertisement
ಸೊಂಪಾದ ಕೂದಲಿಗೆ: ಈರುಳ್ಳಿಯಲ್ಲಿನ ಸಲರ್ ಅಂಶ, ತಲೆಗೆ ರಕ್ತ ಸಂಚಲನೆ ಸರಾಗವಾಗಿಸುತ್ತದೆ. ಅದರಿಂದ, ಉದುರಿದ ಕೂದಲು ಮರುಹುಟ್ಟು ಪಡೆಯುತ್ತದೆ. ಈರುಳ್ಳಿ ರಸದ ಜೊತೆಗೆ ರೋಸ್‌ವಾಟರ್ ಸೇರಿಸಿ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ.
ತಲೆಹೊಟ್ಟು ನಿವಾರಣೆ: ತಲೆಹೊಟ್ಟಿನ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿರುವವರು ಅನೇಕ. ಅವರು ಮಾಡಬೇಕಾದ್ದಿಷ್ಟೆ , ಕೂದಲಿನ ಬುಡಕ್ಕೆ ಈರುಳ್ಳಿ ರಸ ಹಚ್ಚಿ , ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ.
ಕೂದಲ ನೆರೆ ತಡೆಯಲು: ಕಲುಷಿತ ನೀರು, ಪೌಷ್ಟಿಕಾಂಶ ಕೊರತೆ ಹೀಗೆ ಬೇರೆ ಬೇರೆ ಕಾರಣಗಳಿಂದ ಕೂದಲು ಬೇಗ ಬಿಳಿಯಾಗುತ್ತದೆ. ಆಗ ಕೃತಕ ಬಣ್ಣ ಹಚ್ಚುವುದರ ಬದಲು ಈರುಳ್ಳಿ ರಸಕ್ಕೆ ಸಾಸಿವೆ ಎಣ್ಣೆ ಸೇರಿಸಿ ಹಚ್ಚಿ. ಕೂದಲಿಗೆ ನೈಸರ್ಗಿಕ ಶೈನ್ ಕೂಡ ಸಿಗುತ್ತದೆ.
ತುಟಿಯ ಆರೋಗ್ಯ: ಕಪ್ಪಾದ ತುಟಿಗೆ ನೈಜ ಬಣ್ಣ ಸಿಗಲು, ಒಡೆದ ತುಟಿ ಗುಣವಾಗಲು ಈರುಳ್ಳಿ ಸಹಕಾರಿ. ಈರುಳ್ಳಿ ರಸದ ಜೊತೆಗೆ ವಿಟಮಿನ್ “ಇ’ ಎಣ್ಣೆ ಸೇರಿಸಿ ದಿನಾ ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಹಚ್ಚಿ.
ಕಣ್ಣಿನ ಆರೋಗ್ಯ: ಎ, ಸಿ, ಇ ವಿಟಮಿನ್ ಅಧಿಕವಾಗಿರುವ ಈರುಳ್ಳಿ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಈರುಳ್ಳಿಯಲ್ಲಿನ ಸಲ#ರ್ ಅಂಶ ಕೂಡ ಕಣ್ಣನ್ನು ಹಲವಾರು ಸಮಸ್ಯೆಗಳಿಂದ ರಸುತ್ತದೆ.