Advertisement

ಈರುಳ್ಳಿ ದರ ಕುಸಿತ: ಕುರಿ ಮೇಯಲು ಬಿಟ್ಟ ರೈತರು!

06:30 AM Dec 03, 2018 | Team Udayavani |

ಕೊಪ್ಪಳ: ಈರುಳ್ಳಿ ದರ ಕುಸಿತದಿಂದ ತಾಲೂಕಿನ ತಿಗರಿ-ಮತ್ತೂರು ಗ್ರಾಮದ ಜಮೀನಿನಲ್ಲಿ ಕುರಿಗಳನ್ನು ಮೇಯಲು ಬಿಡಲಾಗಿದೆ. ಒಂದೆಡೆ ಬರದ ಭೀಕರತೆ ತಾಂಡವಾಡುತ್ತಿದೆ. ಬಿತ್ತನೆ ಮಾಡಿದ ಬೆಳೆ ಹೊಲದಲ್ಲೇ ಕಮರಿ ಹೋಗುತ್ತಿದೆ. 

Advertisement

ಇದರಿಂದ ಜನರಿಗೆ ದಿಕ್ಕೇ ತೋಚದಂತಾಗಿದ್ದು, ಆದರೂ ಕೆಲವು ಭಾಗದಲ್ಲಿ ನೀರಾವರಿ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆದಿದ್ದಾರೆ. ಸರಿಯಾದ ದರ ಸಿಗುತ್ತಿಲ್ಲ. ಕಷ್ಟಪಟ್ಟು ಬೆಳೆದು ಎಲ್ಲವನ್ನೂ ಸ್ವತ್ಛ ಮಾಡಿ ಮಾರುಕಟ್ಟೆಗೆ ತಂದರೆ 500-600 ರೂ. ಕ್ವಿಂಟಲ್‌ ಕೇಳುತ್ತಾರೆ. ಹೀಗಾಗಿ ಕೆಲವರು ಮಾರುಕಟ್ಟೆಗೆ ತರಲು ಮನಸ್ಸು ಮಾಡುತ್ತಿಲ್ಲ. ತಾಲೂಕಿನ ತಿಗರಿ-ಮತ್ತೂರು ಗ್ರಾಮದ ಮಧ್ಯೆ ಹೊಲದಲ್ಲಿ ಬೆಳೆದಿದ್ದ ಈರುಳ್ಳಿಯನ್ನು ಹಾಗೇ ಬಿಟ್ಟಿದ್ದು, ಕುರಿಗಳು ಈರುಳ್ಳಿ ತಿನ್ನುತ್ತಿವೆ.
 

Advertisement

Udayavani is now on Telegram. Click here to join our channel and stay updated with the latest news.

Next