Advertisement

ಈಗ ಅಫ್ಘಾನಿಸ್ಥಾನದಿಂದಲೂ ಈರುಳ್ಳಿ ಆಮದು

10:20 AM Dec 15, 2019 | Team Udayavani |

ಹೊಸದಿಲ್ಲಿ: ಈರುಳ್ಳಿ ಬೆಲೆ ತಹಬಂದಿಗೆ ತರಲು ಇನ್ನಿಲ್ಲದ ಯತ್ನ ಮಾಡುತ್ತಿರುವ ಕೇಂದ್ರ ಸರಕಾರ ಈಗ ಅಫ್ಘಾನಿಸ್ಥಾನದಿಂದಲೂ ಆಮದು ಮಾಡುತ್ತಿದೆ.

Advertisement

ಪಾಕಿಸ್ಥಾನದ ಅಟ್ಟಾರಿ ಗಡಿಯ ಮೂಲಕ ಈರುಳ್ಳಿ ಭಾರತಕ್ಕೆ ಬಂದಿದೆ. ಈರುಳ್ಳಿ ಹೇರಿದ ಸುಮಾರು 50 ಲಾರಿಗಳು ಅಟ್ಟಾರಿ ಗಡಿ ದಾಟಿವೆ. ಉತ್ತರದ ರಾಜ್ಯಗಳಲ್ಲಿ ಈರುಳ್ಳಿ ರಖಂ ದರ 110 ರೂ. ಗಡಿ ದಾಟಿದ್ದು, ಬೆಲೆ ತೀವ್ರ ಏರಿಕೆ ಕಂಡಿದೆ.

ಅಫ್ಘಾನಿಸ್ಥಾನದ ಈರುಳ್ಳಿ ವರ್ತಕರು ಆ ದೇಶದಿಂದ ಮಾತ್ರವಲ್ಲದೆ ನೆರೆಯ ಇರಾನ್‌, ಉಜ್ಬೇಕಿಸ್ಥಾನದಿಂದಲೂ ಈರುಳ್ಳಿ ಖರೀದಿ ಮಾಡಿ ಭಾರತಕ್ಕೆ ರಫ್ತು ಮಾಡುತ್ತಿದ್ದಾರೆ. ಇದರಿಂದ ಒಟ್ಟಾರೆ 1500 ರಿಂದ 2000 ಟನ್‌ ಈರುಳ್ಳಿ ಭಾರತಕ್ಕೆ ಬರುವ ನಿರೀಕ್ಷೆ ಇದೆ. ವಿವಿಧ ರಾಜ್ಯಗಳಿಗೆ ಈ ಈರುಳ್ಳಿಯನ್ನು ಪೂರೈಸಲಾಗುತ್ತದೆ. ಸದ್ಯ ಅಫ್ಘಾನಿಸ್ಥಾನದಲ್ಲಿ ಈರುಳ್ಳಿ ದರ 40-55 ರೂ. ಇದೆ.

Advertisement

Udayavani is now on Telegram. Click here to join our channel and stay updated with the latest news.

Next