Advertisement

ಈರುಳ್ಳಿ ಬೆಳೆಗಾರರಿಗೆ ಬೆಂಬಲ: ಸಿಎಂ ಉದ್ಧವ್‌

07:03 PM Oct 30, 2020 | mahesh |

ಮುಂಬಯಿ: ರಾಜ್ಯದಲ್ಲಿಯ ಈರುಳ್ಳಿ ಬೆಳೆಗಾರರ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದ್ದು, ಅವುಗಳನ್ನು ಪರಿಹರಿಸಲು ನಾವು ಕೇಂದ್ರ ಸರಕಾರದ ಬಳಿ ಚರ್ಚೆ ನಡೆಸಲಿದ್ದೇವೆ. ಸರಕಾರವು ಯಾವಾಗಲೂ ಈರುಳ್ಳಿ ಬೆಳೆಗಾರರ ಪರವಾಗಿದೆ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

Advertisement

ಮಹಾರಾಷ್ಟ್ರ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ನಿಯೋಗವು ಶುಕ್ರವಾರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರನ್ನು ವರ್ಷಾ ನಿವಾಸದಲ್ಲಿ ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಸಿಎಂ ಮುಂದೆ ಪ್ರಸ್ತುತಪಡಿಸಿತು. ಈ ವೇಳೆ ಕೃಷಿ ಸಚಿವ ದಾದಾಜಿ ಭೂಸೆ, ಇಲಾಖೆಯ ಕಾರ್ಯದರ್ಶಿ ಏಕನಾಥ್‌ ಡವಾಲೆ, ಮಹಾರಾಷ್ಟ್ರ ರಾಜ್ಯ ಈರುಳ್ಳಿ ಬೆಳೆಗಾರರ ಸಂಘ ಮತ್ತು ಲಸಲ್ಗಾಂವ್‌ ಮರ್ಚೆಂಟ್ಸ್‌ ಅಸೋಸಿಯೇಶನ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಗಟು ವ್ಯಾಪಾರಿಗಳಿಗೆ 25 ಮೆಟ್ರಿಕ್‌ ಟನ್‌ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ 2 ಟನ್‌ ವರೆಗೆ ಈರುಳ್ಳಿ ಸಂಗ್ರಹಿಸಬಹುದಾಗಿದೆ. ಇದರ ಪರಿಣಾಮವಾಗಿ ವ್ಯಾಪಾರಿಗಳು ಈರುಳ್ಳಿ ಖರೀದಿಸುವುದನ್ನು ನಿಲ್ಲಿಸಿದ್ದು, ಇದು ರೈತರನ್ನು ಸಂಕಷ್ಟ ಸ್ಥಿತಿಗೆ ತಳ್ಳಿದೆ. ಈ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆಗಾರರ ಮತ್ತು ವ್ಯಾಪಾರಿಗಳ ಸಂಘಗಳ ಪ್ರತಿನಿಧಿಗಳು ಮುಖ್ಯಮಂತ್ರಿಯನ್ನು ಭೇಟಿಯಾಗಿ ತಮ್ಮ ಕಳವಳವನ್ನು ಅವರೊಂದಿಗೆ ಹಂಚಿಕೊಂಡರು. ಮುಖ್ಯಮಂತ್ರಿಯವರ ಕರೆಗೆ ಸ್ಪಂದಿಸಿದ ವ್ಯಾಪಾರ ಸಂಘವು ನಾಳೆಯಿಂದ ಈರುಳ್ಳಿ ಖರೀದಿಸಲು ಪ್ರಾರಂಭಿಸುವುದಾಗಿ ಭರವಸೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next