ಮುಂಬಯಿ: ಇಬ್ಬರು ಪೈಲಟ್ ಸೇರಿದಂತೆ ಒಂಬತ್ತು ಮಂದಿಯನ್ನು ಒಳಗೊಂಡ ಒಎನ್ ಜಿಸಿ ( ಆಯಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್)ಯ ಹೆಲಿಕಾಪ್ಟರ್ ಮುಂಬೈಯ ಅರಬ್ಬೀ ಸಮುದ್ರದಲ್ಲಿ ಪತನಗೊಂಡ ಘಟನೆ ಮಂಗಳವಾರ (ಜುಲೈ 28) ಸಂಭವಿಸಿದ್ದು, 6 ಜನರನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ:40% ಆರೋಪದ ಬಗ್ಗೆ ತನಿಖೆಯ ಆರಂಭಿಸಿರುವುದು ಸ್ವಾಗತಾರ್ಹ: ಸಚಿವ ಶಿವರಾಮ ಹೆಬ್ಬಾರ್
ಮುಂಬೈನಿಂದ 60 ನಾಟಿಕಲ್ ಮೈಲ್ ದೂರದಲ್ಲಿರುವ ಒಎನ್ ಜಿಸಿ ಸಾಗರ್ ಕಿರಣ್ ರಿಗ್ ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಪ್ರಯತ್ನಿಸಿದ್ದ ವೇಳೆ ಈ ದುರಂತ ಸಂಭಿವಿಸಿದೆ. ಹೆಲಿಕಾಪ್ಟರ್ ನಲ್ಲಿ ಆರು ಮಂದಿ ಒಎನ್ ಜಿಸಿ ಸಿಬ್ಬಂದಿ, ಒಬ್ಬರು ಕಂಪನಿಯ ಗುತ್ತಿಗೆದಾರರು ಹಾಗೂ ಇಬ್ಬರು ಪೈಲಟ್ ಗಳಿದ್ದರು. ಈಗಾಗಲೇ ಆರು ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದ ಮೂವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ ಎಂದು ವರದಿ ತಿಳಿಸಿದೆ.
ಘಟನಾ ಸ್ಥಳಕ್ಕೆ ಸರಕು ಸಾಗಣೆಯ ಹಡಗು ಮಾಲ್ವಿಯಾ ಕೂಡಾ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಕರವಾಳಿ ಕಾವಲು ಪಡೆ ಹೆಲಿಕಾಪ್ಟರ್ ಮೂಲಕ ಲೈಫ್ ಜಾಕೆಟ್ ಅನ್ನು ಸ್ಥಳದ ಬಳಿ ಇಳಿ ಬಿಟ್ಟಿದ್ದು, ಮತ್ತೊಂದು ಹಡಗು ಕೂಡಾ ರಕ್ಷಣಾ ಕಾರ್ಯದಲ್ಲಿ ತೊಡಗಿದೆ ಎಂದು ವರದಿ ವಿವರಿಸಿದೆ.
ಒಎನ್ ಜಿಸಿಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಲು ಕಾರಣ ಏನೆಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ಒಎನ್ ಜಿಸಿ ಹಲವಾರು ರಿಗ್ಸ್ ಹೊಂದಿದ್ದು, ಇದನ್ನು ತೈಲ ಉತ್ಪಾದನೆಗೆ ಬಳಸುತ್ತಿದೆ ಎಂದು ವರದಿ ಹೇಳಿದೆ.