Advertisement

ವಿಶ್ವದ ಮೂಲೆ ಮೂಲೆಗೂ ಶೀಘ್ರವೇ ಬಾಹ್ಯಾಕಾಶ ಆಧರಿತ ಅಂತರ್ಜಾಲ ಸೇವೆ

07:42 PM Mar 19, 2023 | Team Udayavani |

ನವದೆಹಲಿ:ಬಾಹ್ಯಾಕಾಶದಿಂದ ಜಗತ್ತಿನ ಮೂಲೆ ಮೂಲೆಗೂ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಸೇವೆಗಳು ಸಿಗುವಂಥ ಸಮಯ ಸದ್ಯದಲ್ಲೇ ಬಂದೊದಗಲಿದೆ.

Advertisement

ಭಾರ್ತಿ ಎಂಟರ್‌ಪ್ರೈಸ್‌ ಬೆಂಬಲದೊಂದಿಗೆ ಒನ್‌ವೆಬ್‌ ಕಂಪನಿಯು ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದು ಭೂಮಿಯ ಕೆಳಕಕ್ಷೆಯಲ್ಲಿರುವ ಸುಮಾರು 600 ಉಪಗ್ರಹಗಳ ಪುಂಜವನ್ನು ರೂಪಿಸುವ ಪ್ರಕ್ರಿಯೆಗೆ ಇನ್ನೊಂದು ಹೆಜ್ಜೆಯಷ್ಟೇ ಬಾಕಿಯಿದೆ.

ಮಾ.26ರಂದು ಇಸ್ರೋ ತನ್ನ ಮಾರ್ಕ್‌-3(ಎಲ್‌ವಿಎಂ3) ಬಾಹ್ಯಾಕಾಶ ನೌಕೆಯ ಮೂಲಕ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ 36 ಒನ್‌ವೆಬ್‌ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇದರಿಂದಾಗಿ ಯುನೈಟೆಡ್‌ ಕಿಂಗ್‌ಡಂ ಮೂಲದ ಒನ್‌ವೆಬ್‌ ಕಂಪನಿಯು ಈಗಾಗಲೇ ರೂಪಿಸಿರುವ 582 ಉಪಗ್ರಹಗಳ ಪುಂಜಕ್ಕೆ ಮತ್ತೆ 36 ಉಪಗ್ರಹಗಳು ಸೇರ್ಪಡೆಯಾದಂತಾಗಲಿದೆ.

ಈ ಕುರಿತು ಮಾಹಿತಿ ನೀಡಿರುವ ಒನ್‌ವೈಬ್‌ ವಕ್ತಾರರು, “ಜಾಗತಿಕ ಕವರೇಜ್‌ನ ಕನಸು ಈಡೇರಿಸಲು ಇನ್ನೊಂದು ಹೆಜ್ಜೆಯಷ್ಟೇ ಬಾಕಿಯಿದೆ. ಇಸ್ರೋ/ಎನ್‌ಎಸ್‌ಐಎಲ್‌ ಮಾಡುವ ಕೊನೆಯ ಉಡಾವಣೆಯು ಬಾಹ್ಯಾಕಾಶದಲ್ಲಿ ಸುಮಾರು 600 ಉಪಗ್ರಹಗಳ ಸಮೂಹ ಸೃಷ್ಟಿಗೆ ನೆರವಾಗಲಿದೆ.

ಇದು ಪೂರ್ಣಗೊಂಡರೆ ನಮ್ಮ ಗುರಿಯೂ ಪೂರ್ಣಗೊಂಡಂತೆ’ ಎಂದಿದ್ದಾರೆ. ಸ್ಪೇಸ್‌ ಎಕ್ಸ್‌ನ ಫಾಲ್ಕನ್‌-9 ರಾಕೆಟ್‌ ಮಾ.9ರಂದು 40 ಒನ್‌ವೆಬ್‌ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಒನ್‌ವೆಬ್‌ ಎನ್ನುವುದು ತನ್ನ ಉಪಗ್ರಹಗಳ ಪುಂಜದ ಮೂಲಕ ಇಂಟರ್ನೆಟ್‌ ಸೇವೆಯನ್ನು ಒದಗಿಸಲಿದೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next